ನವೆಂಬರ್ 16ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾಜಿ ಸಚಿವ ಜನಾರ್ಧನ್ ರೆಡ್ಡಿ ಮಗಳು ಬ್ರಾಹ್ಮಿಣಿಯ ಅದ್ದೂರಿ ಮದವೆಯ ಬೆನ್ನಲ್ಲೇ ರೆಡ್ಡಿಗೆ ಆದಾಯ ಮತ್ತು ತೆರಿಗೆ ಅಧಿಕಾರಿಗಳು ದೊಡ್ಡ ಶಾಕ್ ನೀಡಿದ್ದಾರೆ..! ಗಣಿಧಣಿಯ ಎರಡು ಕಛೇರಿಗಳ ಮೇಲೆ ಸೋಮವಾರ ಐಟಿ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ..!
ಬಳ್ಳಾರಿಯಲ್ಲಿರುವ ರೆಡ್ಡಿ ಒಡೆತನ ಎರಡು ಕಛೇರಿಗಳಾದ ಒಎಂಸಿ ಹಾಗೂ ಎಎಂಸಿ ಮೇಲೆ ಆದಾಯ ಮತ್ತು ತೆರಿಗೆ ಇಲಾಖೆ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಸಿರಗುಪ್ಪದಲ್ಲಿರುವ ರೆಡ್ಡಿ ನಿವಾಸದ ಮೇಲೂ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇತ್ತೀಚೆಗಷ್ಟೆ ಮಗಳು ಬ್ರಾಹ್ಮಿಣಿಯ ಅದ್ದೂರಿ ವಿವಾದದ ನಂತರ ದೇಶದಾದ್ಯಂತ ರೆಡ್ಡಿ ವಿರುದ್ದ ಅಪಸ್ವರಗಳು ಮೂಡಿಬಂದವು. ಸುಮಾರು 500 ಕೋಟಿಗೂ ಅಧಿಕ ಹಣ ಖರ್ಚು ಮಾಡಿ ಮಗಳ ಮದುವೆ ಮಾಡಿರುವ ರೆಡ್ಡಿಗೆ ಅಷ್ಟೊಂದು ಹಣ ಎಲ್ಲಿಂದ ಬರಲು ಸಾಧ್ಯ ಎಂಬ ಚರ್ಚೆಗಳು ನಡೆದಿದ್ದವು. ಇದರ ಬೆನ್ನಲ್ಲೇ ಇಂದು ರೆಡ್ಡಿ ಅವರ ಎರಡು ಕಛೇರಿಗಳ ಮೇಲೆ ಐಟಿ ದಾಳಿ ನಡೆಸಿದ್ದಾರೆ.
Like us on Facebook The New India Times
POPULAR STORIES :
ಸಾಮಾನ್ಯ ಬೀಡಾ ವ್ಯಾಪಾರಿಯ ಅಕೌಂಟ್‍ನಲ್ಲಿತ್ತು ಬರೋಬ್ಬರಿ 10 ಕೋಟಿ ಹಣ..!
ವಾಟ್ಸಾಪ್‍ನಿಂದ 10 ವರ್ಷದ ಲವ್ ಬ್ರೇಕಪ್..!
ಬಿಗ್‍ಬಾಸ್ ಸದಸ್ಯರ ಬಗ್ಗೆ ಜನ ಏನ್ ಹೇಳ್ತಾರೆ…?
ಕಿಚ್ಚ ಸುದೀಪ್‍ಗೆ ಕ್ಷಮೆಯಾಚಿಸಿದ ಹುಚ್ಚಾ ವೆಂಕಟ್..!
ಇನ್ಮೇಲೆ ಪೆಟ್ರೋಲ್ ಬಂಕ್‍ನಲ್ಲೂ ಹಣ ವಿತ್ ಡ್ರಾ ಮಾಡ್ಬೋದು.
ಹುಚ್ಚಾ ವೆಂಕಟ್ ಮೇಲೆ ಕಿಚ್ಚ ಸುದೀಪ್ ಗರಂ..!
30ನಿಮಿಷ ಕೋಕಾ ಕೋಲದಲ್ಲಿ ಹೊಸ 2000ರೂ ನೋಟನ್ನು ಮುಳುಗಿಸಿದರೆ ಏನಾಗುತ್ತೆ ಗೊತ್ತಾ.?