ಕರ್ನಾಟಕದಲ್ಲಿ ‘ಕಾಲ’ ಸಿನಿಮಾ ಬಿಡುಗಡೆ ಸಂಬಂಧಿಸಿದಂತೆ ವಿರೋಧ ಹೆಚ್ಚಿದೆ.
ರಜನಿಕಾಂತ್ ಕ್ಷಮೆ ಕೇಳಿದರೂ ನಾವು ‘ ಕಾಲ’ ಬಿಡುಗಡೆಗೆ ಅವಕಾಶ ಮಾಡಿಕೊಡಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿದೆ. ರಜನಿಕಾಂತ್ ಅಭಿನಯದ ಕಾಲ ಸಿನಿಮಾ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಪ್ರತಿಭಟನೆ ನಡೆಸಿದೆ.
ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆ ನಡೆಸಿದರು. ರಜನಿಕಾಂತ್ ವಿರುದ್ಧ ಘೋಷಣೆ ಕೂಗಿದರು. ಕಾವೇರಿ ವಿಚಾರದಲ್ಲಿ ರಜನಿಕಾಂತ್ ಕರ್ನಾಟಕದ ವಿರುದ್ಧ ನೀಡಿದ ಹೇಳಿಕೆಯೇ ಸಿನಿಮಾ ಬಿಡುಗಡೆ ವಿರೋಧಕ್ಕೆ ಕಾರಣ.
ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತಾಡಿದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ ಗೋವಿಂದ್ , ರಜನಿಕಾಂತ್ ಅವರ ಕನ್ನಡ ವಿರೋಧಿ ಧೋರಣೆಯನ್ನು ನಾವು ಖಂಡಿಸ್ತೀವಿ. ಕಾಲ ಚಿತ್ರ ಬಿಡುಗಡೆಗೆ ಮಾಡದಂತೆ ಸಾಕಷ್ಟು ಸಂಘಟನೆಗಳು ಒತ್ತಡ ಹೇರುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಚರ್ಚಿಸಿದ್ದೇವೆ. ಸದ್ಯದ ಮಟ್ಟಿಗೆ ನೇರವಾಗಿ ನಾವು ನಿಷೇಧ ಹೇರಲು ಸಾಧ್ಯವಿಲ್ಲ. ವಿತರಣೆ ಹಕ್ಕು ಕೊಳ್ಳದಿರಲು ವಿತರಕರು ತೀರ್ಮಾನಿಸಿದ್ದಾರೆ. ಚಿತ್ರ ಪ್ರದರ್ಶನ ಮಾಡದಿರಲು ಚಿತ್ರಮಂದಿರಗಳ ಮಾಲೀಕರು ನಿರ್ಧರಿಸಿದ್ದಾರೆ. ಹೀಗಾಗಿ ಕಾಲ ಸಿನಿಮಾ ರಾಜ್ಯದಲ್ಲಿ ಬಿಡುಗಡೆ ಆಗಲ್ಲ ಎಂದು ಹೇಳಿದರು.