ನಾಗಮಂಡಲ ಚಿತ್ರದ ಬೆಡಗಿ ವಿಜಯಲಕ್ಷ್ಮಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಗ್ಯ ಹದಗೆಟ್ಟಿದ ಕಾರಣ ಆಸ್ಪತ್ರೆಗೆ ದಾಖಲಾಗಿರುವ ನಟ ವಿಜಯಲಕ್ಷ್ಮಿ ಈಗ ಸಹಾಯ ಹಸ್ತ ಚಾಚುತ್ತಿದ್ದಾರೆ.
ನಟಿ ವಿಜಯಲಕ್ಷ್ಮೀ ತೀವ್ರವಾದ ಸುಸ್ತು ಮತ್ತು ಬಿಪಿಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಗುರುವಾರ ದಾಖಲಾಗಿದ್ದಾರೆ. ಕಳೆದ ವಾರ ತಾಯಿಗೆ ಹೆಲ್ತ್ ಪ್ರಾಬ್ಲಾಂ ಆಗಿತ್ತು. ಈಗ ವಿಜಯಲಕ್ಷ್ಮಿ ಆನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ. ಅಲ್ಲದೆ ಎಲ್ಲಾ ಹಣವನ್ನು ತಾಯಿಯ ಚಿಕಿತ್ಸೆಗೆ ಖರ್ಚು ಮಾಡಲಾಗಿದೆ. ಈಗ ನಮಗೆ ಚಿತ್ರರಂಗದ ಸಹಾಯ ಬೇಕಿದೆ ಎಂದು ವಿಜಯಲಕ್ಷ್ಮಿ ಅವರ ತಂಗಿ ಉಷಾದೇವಿ ಹೇಳಿಕೊಂಡಿದ್ದಾರೆ.ಟಿಎಸ್ ನಾಗಾಭರಣ ಅವರ ನಿರ್ದೇಶನದ ನಾಗಮಂಡಲ ಚಿತ್ರದಲ್ಲಿ ಮಲೆನಾಡಿನ ಮುಗ್ಧ ಬಾಲೆಯಾಗಿ ಕಾಣಿಸಿಕೊಂಡು ಹೆಸರುವಾಸಿಯಾಗಿದ್ದ ವಿಜಯಲಕ್ಷ್ಮಿ ಸಾಹಸಸಿಂಹ ವಿಷ್ಣುವರ್ಧನ್, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಸೇರಿದಂತೆ 25ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು.