ಇಂದಿನ ಟಾಪ್ 10 ಸುದ್ದಿಗಳು..! 04.01.2016

0
56

1. ಹುತಾತ್ಮ ಯೋಧನ ಅಂತಿಮ ದರ್ಶನ ಮಾಡಿದ ಸಿಎಂ ಸಿದ್ದರಾಮಯ್ಯ

ಪಂಜಾಬ್ ನ ಪಠಾಣ್ ಕೋಟ್ ನಲ್ಲಿ ಸಂಭವಿಸಿದ ಗ್ರೆನೇಡ್ ಸ್ಫೋಟದಲ್ಲಿ ಹುತಾತ್ಮರಾಗಿದ್ದ ಬೆಂಗಳೂರಿನಲ್ಲಿರುವ ಲೆ.ಕ ನಿರಂಜನ್ ಕುಮಾರ್ ರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶ್ರದ್ಧಾಂಜಲಿ ಅರ್ಪಿಸಿದರು. ಬೆಂಗಳೂರಿನ ವಿದ್ಯಾರಣ್ಯಪುರ ರಸ್ತೆಯ ಬಿಇಎಲ್ ಶಾಲಾ ಮೈದಾನದಲ್ಲಿ ಹುತಾತ್ಮ ಯೋಧ ನಿರಂಜನ್ ಕುಮಾರ್ ರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಸಿದ್ದರಾಮಯ್ಯ ಅವರು ನಿರಂಜನ್ ಕುಟುಂಬಕ್ಕೆ ಸಾಂತ್ವನ ಹೇಳಿದರು. ಬಳಿಕ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ 30 ಲಕ್ಷ ಪರಿಹಾರ ಘೋಷಿಸಿದರು.

2. ಪಠಾಣ್ ಕೋಟ್ ದಾಳಿ, ಉಗ್ರರ ವಿರುದ್ಧ ಕ್ರಮಕ್ಕೆ ಭಾರತ ಆಗ್ರಹ

ಪಠಾಣ್ ಕೋಟ್ ಉಗ್ರರ ದಾಳಿಗೆ ಕಾರಣವಾದ ಉಗ್ರರ ವಿರುದ್ಧ 72 ಗಂಟೆಗಳ ಒಳಗಾಗಿ ಕ್ರಮ ಕೈಗೊಳ್ಳುವಂತೆ ಭಾರತವು ಪಾಕಿಸ್ತಾನಕ್ಕೆ ಆಗ್ರಹಿಸಿದೆ. ಉಗ್ರರ ದಾಳಿ ವಿಷಯವನ್ನು ಪಾಕಿಸ್ತಾನ ಸರ್ಕಾರದೊಂದಿಗೆ ಚರ್ಚಿಸಿರುವ ಕುರಿತಂತೆ ಭಾರತ ಈಗಾಗಲೇ ಚಿಂತನೆ ನಡೆಸಿದ್ದು, ಸೇನಾ ವಾಯು ನೆಲೆ ಮೇಲೆ ದಾಳಿ ನಡೆಸಿದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ವಿರುದ್ಧ 72 ಗಂಟೆಗಳ ಒಳಗಾಗಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

3. ಪಠಾಣ್ ಕೋಟ್ ನಲ್ಲಿ ಮತ್ತೆ ಉಗ್ರರ ಅಟ್ಟಹಾಸ

ಗುರುದಾಸ್ ಪುರದ ಪಠಾಣ್ ಕೋಟ್ ನಲ್ಲಿರುವ ಸೇನಾ ವಾಯುನೆಲೆಯಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮುಂದುವರೆಸಿದ್ದು, ಇಂದೂ ಕೂಡಾ ವಾಯುನೆಲೆಯಲ್ಲಿ ಸ್ಫೋಟ ಸಂಭವಿಸಿದೆ. ಕಳೆದ ಮೂರು ದಿನಗಳಿಂದಲೂ ವಾಯುನೆಲೆ ಮೇಲೆ ದಾಳಿಯನ್ನು ಮುಂದುವರೆಸಿರುವ ಉಗ್ರರು ಈ ವರೆಗೂ 7 ಯೋಧರನ್ನು ಬಲಿಪಡೆದಿದ್ದಾರೆ. ನಿನ್ನೆ ಕೂಡ ಇಬ್ಬರು ಉಗ್ರರು ಅಡಗಿ ಕುಳಿತಿರುವುದಾಗಿ ಹೇಳಲಾಗುತ್ತಿತ್ತು. ಇದರಂತೆ ವಾಯುನೆಲೆಯಲ್ಲಿ ಗುಂಡಿನ ಮೊರೆತ ಕೇಳಿಬರುತ್ತಿತ್ತು. ಬಳಿಕ ಕಾರ್ಯಾಚರಣೆಗಿಳಿದ ಯೋಧರು ಓರ್ವ ಉಗ್ರರನನ್ನು ಸದೆ ಬಡಿದಿದ್ದರು. ಮತ್ತೋರ್ವ ಉಗ್ರನನ್ನು ಜೀವಂತವಾಗಿ ಹಿಡಿಯಲು ಕಾರ್ಯಾಚರಣೆ ಮುಂದುವರೆಸಿದ್ದರು.

4. ಸಚಿವರು, ಸರ್ಕಾರಿ ಸೇವೆಯಲ್ಲಿರುವವರಿಗೆ ಬಿಸಿಸಿಐ ಸ್ಥಾನ ಬೇಡ: ಲೋಧಾ ಸಮಿತಿ

ಹಲವು ವಿವಾದಗಳಿಂದ ಘನತೆಯನ್ನು ಕಳೆದುಕೊಂಡಿದ್ದ ಬಿಸಿಸಿಐ ಮತ್ತೆ ತನ್ನ ಸ್ಥಾನಮಾನ ಪಡೆಯಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಬಿಸಿಸಿಐ ನ್ಯಾ. ಲೋಧಾ ಸಮಿತಿಯನ್ನು ರಚಿಸಿತ್ತು. ಬಿಸಿಸಿಐ ಸುಧಾರಣೆಗೆ ಹಲವು ಮಹತ್ವದ ಶಿಫಾರಸುಗಳನ್ನು ಮಾಡಿರುವ ಎಂ.ಆರ್ ಲೋಧಾ ಸಮಿತಿ ಸುಪ್ರಿಂಕೋರ್ಟ್ ಗೆ ತನ್ನ ವರದಿ ಸಲ್ಲಿಸಿದೆ. ಅದರಲ್ಲಿ ಕೆಲ ಮಹತ್ವದ ಶಿಫಾರಸುಗಳನ್ನು ಸಮಿತಿ ಮಾಡಿದೆ. ಶಾಸಕರು, ಸಚಿವರು ಬಿಸಿಸಿಐ ಪದಾಧಿಕಾರಿಗಳಾಗಬಾರದು ಎಂದು ವರದಿಯಲ್ಲಿ ಹೇಳಿದೆ. ಅಲ್ಲದೇ 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬಿಸಿಸಿಐ ನಲ್ಲಿ ಯಾವುದೇ ಹುದ್ದೆ ನೀಡಬಾರದು ಎಂದು ತಿಳಿಸಿದೆ. ಬಿಸಿಸಿಐ ಪದಾಧಿಕಾರಿಗಳಾಗುವವರು ಕಡ್ಡಾಯವಾಗಿ ಭಾರತೀಯರಾಗಿರಬೇಕು ಎಂದು ಶಿಫಾರಸ್ಸು ಮಾಡಿದೆ.

5. ಈಶಾನ್ಯ ರಾಜ್ಯಗಳಲ್ಲಿ ಪ್ರಬಲ ಭೂಕಂಪ, 6 ಸಾವು

ಈಶಾನ್ಯ ರಾಜ್ಯಗಳಾದ ಮಣಿಪುರ, ಅಸ್ಸಾಂ, ಬಿಹಾರ, ನಾಗಲ್ಯಾಂಡ್ ಹಾಗೂ ಪಶ್ಟಿಮಬಂಗಾಳಗಳಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 6 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಇಂದು ಬೆಳಗ್ಗೆ 4.36ರ ಸುಮಾರಿನಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ ಕಂಪನದ ತೀವ್ರತೆ 6.7ರಷ್ಟು ದಾಖಲಾಗಿದೆ. ಭೂಕಂಪದ ತೀವ್ರತೆಗೆ ಹಲವು ಕಟ್ಟಡಗಳಿಗೆ ಹಾನಿಯಾಗಿದೆ.

6. ಬಾರ್ ಗಳಲ್ಲಿ ಮಕ್ಕಳ ಬಳಸಿದರೆ ಸೆರೆವಾಸ

ಬಾರ್ ಹಾಗೂ ಪಬ್ಗಳಲ್ಲಿ ಮದ್ಯ ಪೂರೈಕೆ ಮಾಡಲು ಮಕ್ಕಳನ್ನು ಬಳಸುವುದು ಕಾನೂನು ಬಾಹಿರವಾಗಿದ್ದು, ಇಂತಹವರ ವಿರುದ್ಧ 7 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 1 ಲಕ್ಷ ರು. ದಂಡ ವಿಧಿಸಬೇಕು ಎಂದು ರಾಜೀವ್ ಚಂದ್ರಶೇಖರ್ ಕೇಂದ್ರ ಸಕರ್ಾರಕ್ಕೆ ಮನವಿ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದ ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಗಾದ ಮಕ್ಕಳ ಕಾಯ್ದೆ-2015ರ ಸೆಕ್ಷನ್ 78ರಲ್ಲಿ ಮಕ್ಕಳನ್ನು ಬಾರ್ ಹಾಗೂ ಪಬ್ ಗಳಲ್ಲಿ ಮದ್ಯ ಪೂರೈಕೆ ಮಾಡಲು ಬಳಸುವುದು ಕಾನೂನಿನ ಉಲ್ಲಂಘನೆ ಹಾಗೂ ಶಿಕ್ಷಾರ್ಹ ಪರಿಗಣಿಸಿದೆ. ಅಷೇ ಅಲ್ಲದೆ ಮಕ್ಕಳನ್ನು ಬಳಸಿದ ಸಂಸ್ಥೆಯ ಮಾಲೀಕರಿಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ದಂಡ ವಿಧಿಸಲಾಗುತ್ತದೆ.

7. 2000 ಸಿಸಿ ಮೇಲ್ಪಟ್ಟ ಡೀಸೆಲ್ ವಾಹನ ನಿಷೇಧ, ಮನವಿ ಆಲಿಸಲಿರುವ ಸುಪ್ರೀಂ ಕೋರ್ಟ್

2000 ಸಿಸಿಗೂ ಹೆಚ್ಚು ಸಾಮಥ್ರ್ಯದ ಡೀಸೆಲ್ ವಾಹನಗಳ ನೊಂದಣಿ ಮತ್ತು ಮಾರಾಟವನ್ನು ನಿಷೇಧಿಸಿರುವ ಹಿಂದಿನ ತೀರ್ಪಿಗೆ ತಿದ್ದುಪಡಿ ತರುವಂತೆ ಕೋರಿ ವಾಹನ ಅಭಿವೃದ್ಧಿ ಸಂಸ್ಥೆಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಈ ಮನವಿಯನ್ನು ಮಂಗಳವಾರ ಆಲಿಸುವುದಾಗಿ ಕೋರ್ಟ್ ತಿಳಿಸಿದೆ.

8. ಅನಿವಾಸಿ ಭಾರತೀಯರ ದಿನಾಚರಣೆಗೆ ಆಗ್ರಾ ಸಜ್ಜು

ಜನವರಿ 9 ರಂದು ಆಚರಿಸಲು ನಿರ್ಧರಿಸಿರುವ ಅನಿವಾಸಿ ಭಾರತೀಯರ ದಿನಾಚರಣೆಗೆ ಆಗ್ರಾ ಸಜ್ಜುಗೊಂಡಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪ್ರವಾಸಿ ಉತ್ತರಪ್ರದೇಶ ದಿನವನ್ನು ಉದ್ಘಾಟನೆ ಮಾಡಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರಿಂದ ಬಡವಾಳ ಹೂಡಿಕೆಯನ್ನೂ ನಿರೀಕ್ಷಿಸಲಾಗುತ್ತಿದೆ. ಪ್ರವಾಸಿ ಉತ್ತರ ಪ್ರದೇಶ ದಿನಾಚರಣೆ ಹಿನ್ನೆಲೆಯಲ್ಲಿ 50 ಕ್ಕೂ ಹೆಚ್ಚು ಎಟಿಎಸ್ ಕಮಾಂಡೋಗಳನ್ನು ನಿಯೋಜಿಸಲಾಗಿದೆ.

9. ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಚುನಾವಣೆ, ರಣತುಂಗ ಸಹೋದರರಿಗೆ ಸೋಲು

ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಆಡಳಿತ ಚುಕ್ಕಾಣಿ ಹಿಡಿಯಲು ಯತ್ನಿಸಿದ್ದ ಮಾಜಿ ಕ್ರಿಕೆಟಿಗ ಅರ್ಜುನ ರಣತುಂಗ ಹಾಗೂ ಅವರ ಸಹೋದರ ನಿಶಾಂತ ರಣತುಂಗ ಅವರಿಗೆ ತೀವ್ರ ಹಿನ್ನಡೆಯುಂಟಾಗಿದೆ. ನಿಶಾಂತ ರಣತುಂಗ ಅವರು ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರೆ, ಅರ್ಜುನ ರಣತುಂಗ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಆದರೆ ಅಧ್ಯಕ್ಷೀಯ ಚುನಾವಣೆ ಯಲ್ಲಿ ಹಾಲಿ ಶ್ರೀಲಂಕಾ ಸಂಸತ್ ಸ್ಪೀಕರ್ ತಿಲಂಗಾ ಸುಮತಿಪಾಲಾ ಅವರು ಜಯ ಸಾಧಿಸಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಜಯಂತಾ ಧರ್ಮದಾಸ ಆಯ್ಕೆಯಾಗಿದ್ದಾರೆ.

10 ಮಹತ್ವದ ಸುತ್ತಿಗೆ ಸೋಮ್ದೇವ್

ಭಾರತದ ಸೋಮ್ ದೇವ್ ವರ್ಮನ್ ರವರು ಚೆನ್ನೈ ಓಪನ್ ಟೆನಿಸ್ ಟೂರ್ನಿಯ ಮುಖ್ಯ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ. ಅಂತಿಮ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತದ ಪ್ರಮುಖ ಸಿಂಗಲ್ಸ್ ಆಟಗಾರ ಸೋಮ್ ದೇವ್, ತಮ್ಮ ಪ್ರತಿಸ್ಪಧರ್ಿ ಬ್ರಿಟನ್ನ ಜೇಮ್ಸ್ ವಾರ್ಡ್ ಅವರನ್ನು 2-6, 7-5, 6-4 ಸೆಟ್ಗಳ ಅಂತರದಿಂದ ಜಯಿಸಿದರು.

LEAVE A REPLY

Please enter your comment!
Please enter your name here