No menu items!
12.4 C
Munich
Wednesday, April 29, 2026

ಅಲ್ಲಿ ನಡೆದಿದ್ದು ನಾಯಿಗಳಿಗೆ ನಾಮಕರಣ..! 800 ಜನ ಬಂದು ಉಂಡು-ತಿಂದು ಹೋದ್ರು..!

Must read

ಮನುಷ್ಯರಿಗೆ ನಾಮಕರಣ ಮಾಡುವುದನ್ನು ಕೇಳಿದ್ದೇವೆ. ಕೆಲವೊಮ್ಮೆ 100 ವರ್ಷ ಪೋರೈಸಿದವರಿಗೆ ತೊಟ್ಟಿಲಲ್ಲಿ ಹಾಕಿ ತೂಗಿದ್ದನ್ನು ಕೇಳಿದ್ದೇವೆ. ಆದರೆ ಯಾವುದಾದರೂ ಪ್ರಾಣಿಗಳಿಗೆ ನಾಮಕರಣ ಮಾಡಿದ್ದನ್ನು ನೋಡಿದ ಉದಾಹರಣೆ ಎಲ್ಲೂ ಇಲ್ಲ..! ಅದೂ ಕೂಡಾ ದುಡ್ಡು ಖರ್ಚು ಮಾಡಿ ನಾಮಕರಣ ಮಾಡುವ ಗೋಜಿಗೆ ಯಾರೂ ಹೋಗುವುದಿಲ್ಲ. ಆದರೆ ಇಲ್ಲೋರ್ವ ವ್ಯಕ್ತಿ ಇದ್ದಾನೆ. ಈತ ಸುಮಾರು 70,000 ರೂಪಾಯಿ ಖರ್ಚು ಮಾಡಿ ನಾಯಿಗಳಿಗೆ ನಾಮಕರಣ ಮಾಡಿದ್ದಾನೆ..!
ಯೆಸ್.. ಬುಂಧೇಲ್ ಖಂಡ್ ಮೂಲದ ಬಾಲಕ್ ರಾಮ್ ಎಂಬುವವರು ಐದು ನಾಯಿ ಮರಿಗಳಿಗೆ ನಾಮಕರಣ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಅಚ್ಚರಿ ಎಂದರೆ ಆ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಸುಮಾರು 800ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದಾರೆ. ಅದಕ್ಕಾಗಿ ಸುಮಾರು 70,000 ರೂಪಾಯಿ ಖರ್ಚು ಮಾಡಲಾಗಿದೆ..! ನಾಮಕರಣ ಕಾರ್ಯಕ್ರಮಕ್ಕಾಗಿ ಟೆಂಟ್ ಹಾಕಲಾಗಿತ್ತು. ಅಲ್ಲದೇ ಬಾಲಕ್ ರಾಮ್ ರವರ ಸಂಬಂಧಿಕರು ಗೆಳೆಯರನ್ನು ಕರೆಯಲಾಗಿತ್ತು. ಅಲ್ಲದೇ ಗ್ರಾಮಸ್ಥರು ಕೂಡಾ ಇದಕ್ಕೆ ಸಾಕ್ಷಿಯಾಗಿದ್ದರು..!
ಐದು ಮರಿಗಳಿಗೆ ಜನ್ಮ ನೀಡಿದ ಹೆಣ್ಣು ನಾಯಿಗೂ ಬೃಂದಾ ದೇವಿ ಎಂಬ ಹೆಸರಿದ್ದು, ಜನವರಿ 17ರಂದು ಐದು ಮರಿಗಳಿಗೆ ಜನ್ಮ ನೀಡಿದೆ. ಆ ಎಲ್ಲಾ ಮರಿಗಳನ್ನು ಬಾಲಕ್ ರಾಮ್ ರವರು ನೋಡಿಕೊಳ್ಳುತ್ತಿದ್ದಾರೆ..! `ನಾನು ಬೃಂದಾಳನ್ನು ಮಗಳ ರೀತಿ ಕಾಣುತ್ತೇನೆ. ಆಕೆ ಈ ಹಿಂದೆ ಎರಡು ಬಾರಿ ಜನ್ಮ ನೀಡಿದಾಗ ಆರ್ಥಿಕ ಕಾರಣಗಳಿಂದಾಗಿ ನಾಮಕರಣ ಕಾರ್ಯಕ್ರಮ ಹಮ್ಮಿಕೊಂಡಿರಲಿಲ್ಲ. ಆದರೆ ಈ ಬಾರಿ ಆ ಕನಸು ನನಸಾಗಿದೆ’ ಎಂದು ಬಾಲಕ್ ರಾಮ್ ಹೇಳಿಕೊಂಡಿದ್ದಾರೆ.
ಕೆಲವೊಂದು ನಾಯಿಗಳು ಆಹಾರ ಇಲ್ಲದೇ ಸಾಯುತ್ತಿವೆ. ಆದರೆ ಈ ನಾಯಿ ಅಲ್ಲಲ್ಲ ಬೃಂದಾ ಮಾತ್ರ ತುಂಬಾ ಅದೃಷ್ಟವಂತೆ. ಆಕೆಗಿಂತಲೂ ಆಕೆಯ ಮರಿಗಳು ಮತ್ತಷ್ಟು ಮಾತ್ರ ಹೆಚ್ಚು ಅದೃಷ್ಟಶಾಲಿಗಳು ಎಂದರೆ ಅಚ್ಚರಿ ಇಲ್ಲ..!

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

11ರ ಪೋರ 8 ಮಕ್ಕಳ ಪ್ರಾಣರಕ್ಷಿಸಿದ ಧೀರ..! ತನ್ನ ಪ್ರಾಣವನ್ನೇ ಒತ್ತೆಯಾಗಿಟ್ಟು ಸಹಪಾಠಿಗಳ ಪ್ರಾಣ ಉಳಿಸಿದ ಕೆಚ್ಚೆದೆಯ ಬಾಲಕ..!

ಜುಕರ್ ಬರ್ಗ್ ಯಾಕೆ ಒಂದೇ ಬಣ್ಣದ ಶರ್ಟ್ ಧರಿಸುತ್ತಾರೆ..?

ಟ್ರಾಫಿಕ್ ಪೊಲೀಸ್ ಮೇಲೆ ಯುವತಿಯಿಂದ ಹಲ್ಲೆ…! ನಾರಿ ಮುನಿದರೆ ಮಾರಿ ಅನ್ನೋದು ಇದಕ್ಕೇ ಇರಬೇಕು..?!

ಜೈಲಲ್ಲಿ ಅರಳಿದ ಪ್ರೀತಿ..! ಜೈಲು ದಾಂಪತ್ಯ ನಡೆಸಿದ ಜೋಡಿಗಳೀಗ ದೂರ ದೂರ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article