ಇಂದಿನ ಟಾಪ್ 10 ಸುದ್ದಿಗಳು..! 14.12.2015

1
64

1. ವಿಶೇಷ ಅನುದಾನ ನೀಡುವಂತೆ ಪ್ರಧಾನಿಗೆ ಜಯಾ ಮನವಿ :
ತಮಿಳುನಾಡಲ್ಲಿ ಸಂಭವಿಸಿದ ಪ್ರವಾಹದಿಂದ ನಲುಗಿರುವ ಸಂತ್ರಸ್ತರಿಗೆ ಆಶ್ರಯವನ್ನು ಒದಗಿಸಿ ಕೊಡಲು ಪ್ರಧಾನಮಂತ್ರಿ ಮೋದಿಯವರಲ್ಲಿ ತಮಿಳುನಾಡು ಸಿಎಂ ಜಯಲಲಿತಾ ಮನವಿ ಮಾಡಿದ್ದಾರೆ.
ಪ್ರಧಾನಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ವಸತಿ, ಬಡತನ ನಿರ್ಮೂಲನೆ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯಗಳಿಗೆ ಅಗತ್ಯ ಸೂಚನೆಗಳನ್ನು ನೀಡುವಂತೆ ಜಯಲಲಿತಾ ಕೋರಿದ್ದಾರೆ.
ಸ್ಲಂನಲ್ಲಿ ವಾಸವಿರೋ ಜನರಿಗೆ ಪ್ರವಾಹದಿಂದ ಭಾರಿ ತೊಂದರೆಯಾಗಿದ್ದು 50,000 ಮನೆಗಳನ್ನು ನಿರ್ಮಿಸಲು ಮನೆಯೊಂದಕ್ಕೆ 1.5 ಲಕ್ಷದಂತೆ 750 ಕೋಟಿ ಬಿಡುಗಡೆ ಮಾಡಲು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.

2. ಪೆಟ್ರೋಲ್ ಬೆಲೆ ಲೀಟರ್ ಗೆ 4 ರೂ ಇಳಿಕೆ?

ಅಂತರಾಷ್ಟ್ರೀಯಾ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಪೆಟ್ರೋಲ್ ಬೆಲೆಯೂ ಪ್ರತಿ ಲೀಟರ್ ಗೆ 4 ರೂ ನಷ್ಟು ಇಳಿಕೆ ಆಗವ ಸಾಧ್ಯತೆಯಿದೆ. ಕಳೆದ 15 ದಿವಸಗಳಲ್ಲಿ ಕಚ್ಚಾ ತೈಲಗಳ ಬೆಲೆಯಲ್ಲಿ 11%ನಷ್ಟು ಕಡಿಮೆಯಾಗಿದ್ದು, ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ 35 ಡಾಲರ್ ತಲುಪಿದೆ.

3. ಅಧಿಕಾರಿಗಳ ಮೇಲೆ ಮರಳು ದಂಧೆಕೋರರಿಂದ ಹಲ್ಲೆ

ಕರ್ನಾಟಕದಲ್ಲಿ ಮರಳು ಮಾಫಿಯಾದ ಅಟ್ಟಹಾಸ ಮುಂದುವರೆದಿದೆ. ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣೆ ಮಾಡುವಾಗ ಸ್ಥಳಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಎಚ್, ಎಲ್ ನಾಗರಾಜು ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ಐಯ್ಯನ ಗೌಡರ ಮೇಲೆ ಮರಳು ದಂಧೆಕೋರರು ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಪಾಂಡಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಸಿದ್ಧೇಗೌಡ ಎಂಬಾತನನ್ನು ಬಂಧಿಸಲಾಗಿದೆ. ಇವರನ್ನು ವಶಕ್ಕೆ ಪಡೆದಿರುವುದನ್ನು ವಿರೋಧಿಸಿ ರೈತರು ಠಾಣೆ ಮುಂದೆ ಪ್ರತಿಭಟನೆ ಕೈಗೊಂಡಿದ್ದಾರೆಂದು ವರದಿಯಾಗಿದೆ.

4. ಭಾರತೀಯ ಸೇನೆಗೆ ಬರಲಿದೆ `ಘಟಕ್ ಡ್ರೋಣ್’
ಅತೀ ಶೀಘ್ರದಲ್ಲಿಯೇ ಭಾರತೀಯ ಸೇನೆಗೆ ಇನ್ನೊಂದು ಹೊಸ ಮಹತ್ತರ ಶಕ್ತಿ ಒದಗಿ ಬರಲಿದೆ. ಆ ಘಾತುಕ ಶಕ್ತಿಯೇ ಘಟಕ್ ಡ್ರೋನ್..! ನಮ್ಮ ಸೈನಿಕರಿಗೆ ಯಾವುದೇ ರೀತಿಯ ಸಮಸ್ಯೆಯಾಗದೇ ಶತ್ರು ರಾಷ್ಟ್ರದ ಸೈನಿಕರನ್ನು ಹೊಡೆದು ಹಾಕುತ್ತೆ ಈ ಘಟಕ್ ಡ್ರೋನ್..! ಈಗಾಗಲೇ ಮೋದಿ ಈ ಘಟಕ್ ದ್ರೋಣ್ಗೆ ಪ್ರಧಾನಿ ಸಮ್ಮತಿ ಸೂಚಿಸಿದ್ದು, ಈ ಘಟಕ್ ಡ್ರೋಣ್ದ ನಿರ್ಮಾಣಕ್ಕೆ ಸುಮಾರು 2,650 ಕೋಟಿ ದೊರೆಯಲಿದೆ ಎಂಬುದು ತಿಳಿದು ಬಂದಿದೆ. ಈಗಾಗಲೆ ರಷ್ಯಾ, ಫ್ರಾನ್ಸ್, ಚೀನಾಗಳು ಡ್ರೋನ್ ಅನ್ನು ತಮ್ಮ ದೇಶದಲ್ಲಿ ಹೊಂದಿವೆ..!

5. ಸ್ಯಾಮುಯೆಲ್ಸ್ 1 ವರ್ಷ ಬೌಲಿಂಗ್ ಮಾಡುವಂತಿಲ್ಲ..!

ವೆಸ್ಟ್ಇಂಡಿಸ್ ನ ಆಲ್ರೌಂಡರ್ ಸ್ಯಾಮುಯೆಲ್ಸ್ ಬೌಲಿಂಗ್ ನಲ್ಲಿ ಲೋಪ ಕಂಡುಬಂದಿರೋದ್ರಿಂದ ಒಂದು ವರ್ಷದ ಮಟ್ಟಿಗೆ ಅವರನ್ನು ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ಅಮಾನತು ಮಾಡಲಾಗಿದೆ.
6. ಕರ್ನಾಟಕದಲ್ಲಿ ಮತ್ತೆ ಬರಲಿದೆಯೇ ಅಗ್ಗದ ಮದ್ಯ..?!
ರಾಜ್ಯದಲ್ಲಿ ಮತ್ತೆ ಅಗ್ಗದ ಮದ್ಯ ಮಾರುಕಟ್ಟೆಗೆ ಬರುವ ಸಂಭವವಿದೆ..! ಈ ಸೂಕ್ಷ್ಮವನ್ನು ಅಬಕಾರಿ ಮತ್ತು ಮುಜರಾಯಿ ಸಚಿವ ಮನೋಹರ್ ಎಚ್ ತಹಶೀಲ್ದಾರ್ ತಿಳಿಸಿದ್ದಾರೆ..! ಅಗ್ಗದ ಮದ್ಯ ಜಾರಿಗೆ ತಂದರೂ ಗುಣಮಟ್ಟ ಕಡಿಮೆ ಆಗಲ್ಲ ಎಂದು ಅವರು ತಿಳಿಸಿದ್ದಾರೆ..!
7. ಅಯ್ಯಂಗಾರ್ ಹುಟ್ಟುಹಬ್ಬಕ್ಕೆ ಗೂಗಲ್ ಡೂಡಲ್..!
ಭಾರತೀಯ ಯೋಗವನ್ನು ವಿಶ್ವಮಟ್ಟದಲ್ಲಿ ಪಸರಿಸಲು ಶ್ರಮಿಸಿದ ಪದ್ಮಭೂಷಣ, ಪದ್ಮವಿಭೂಷಣ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದ ಯೋಗಗುರು ಬಿಕೆಎಸ್ ಅಯ್ಯಂಗರ್ ಅವರ 97ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಂತಜರ್ಾಲ ಲೋಕದ ದೈತ್ಯ ಸರ್ಚ್ ಇಂಜಿನ್ ಅಯ್ಯಂಗಾರ್ ಅವರ ವಿವಿಧ ಯೋಗಾಸನಗಳನ್ನು ಅಕ್ಷರಗಳ ಡೂಡಲ್ ಮೂಲಕ ಗೌರವ ಸಮರ್ಪಿಸಿದೆ..!

8. ದೇವಾಲಯಕ್ಕೆ ಹೋಗದಂತೆ ತಡೆಯಲು ಆರ್.ಎಸ್.ಎಸ್.ನವರ್ಯಾರು..?
ಅಸ್ಸಾಂನಲ್ಲಿನ ಬರ್ಪೇಟಾ ಸತ್ರಾ ದೇವಾಲಯಕ್ಕೆ ಹೋಗಬೇಕೆಂಬ ಇಚ್ಚೆ ಇತ್ತು..! ಆದರೆ ನಾನು ದೇವಾಲಯ ಪ್ರವೇಶಿಸದಂತೆ ಆರ್.ಎಸ್.ಎಸ್.ನವರು ತಡೆದಿದ್ದಾರೆ..! ಬರ್ಪೇಟ್ ದೇವಾಲದೊಳಗೆ ಹೋಗಲು ಮುಂದಾದಾಗ ಮಹಿಳೆಯೊಬ್ಬಳನ್ನು ನನ್ನ ಎದುರು ನಿಲ್ಲಿಸಿ ದೇವಾಲಯಕ್ಕೆ ಹೋಗದಂತೆ ತಡೆದಿದ್ದಾರೆಂದು ಆರ್.ಎಸ್.ಎಸ್.ನವ ಮತ್ತು ಬಿಜೆಪಿಯನ್ನು ಪ್ರಶ್ನಿಸಿರೋ ರಾಹುಲ್ ಗಾಂಧಿ, ನನ್ನ ಪ್ರವೇಶ ತಡೆಯಲು ಅವರ್ಯಾರೆಂದು ಖಾರವಾಗಿ ಪ್ರಶ್ನಿಸಿದ್ದಾರೆ..!

9. ಸೌದಿಯಲ್ಲಿ ಮೊದಲ ಬಾರಿಗೆ ಚುನಾವಣೆಗೆ ಮಹಿಳೆಯರ ಪರಿಗಣನೆ..!
ಸಂಪ್ರದಾಯವಾದಿ ದೇಶ ಸೌದಿಯಲ್ಲಿ ನಡೆದ ಚುನಾವಣೆಯಲ್ಲಿ ಮೊಟ್ಟ ಮೊದಲಬಾರಿಗೆ ಮಹಿಳೆಯರಿಗೆ ಮತದಾನ ಮಾಡುವ ಮತ್ತು ಸ್ಪರ್ಧಿಸುವ ಹಕ್ಕನ್ನು ನೀಡಲಾಗಿತ್ತು..! ಈ ಚುನಾವಣೆಯಲ್ಲಿ ಹೆಚ್ಚು ಮಹಿಳೆಯರು ಗೆಲುವಿನ ನಗೆ ಬೀರಿದ್ದಾರೆ.
ಮೆಕ್ಕಾದ ಭಾಗವಾದ ಮದ್ರಖಾ ಮುನ್ಸಿಪಲ್ನಲ್ಲಿ ಸಲ್ಮಾ ಬಿಂತ್ ಹಿಜಬ್ ಅಲಬ್ ಎಂಬ ಮಹಿಳೆ ಜಯದ ನಗು ಬೀರಿದ್ದಾರೆ..! ಇವರು 7 ಜನ ಪುರುಷ ಸಹ ಸ್ಪರ್ಧಿಗಳನ್ನು, ಇಬ್ಬರು ಮಹಿಳಾ ಸಹ ಸ್ಪರ್ಧಿಗಳನ್ನು ಹಿಂದಿಕ್ಕೆ ಗೆಲುವು ಪಡೆದಿದ್ದಾರೆ..! 2150 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 6440 ಪುರುಷ, 900 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರು.

10 ಮನೆ ನೀಡಿಲ್ಲ ಅಂತ ಪ್ರಶಸ್ತಿಯನ್ನೇ ವಾಪಸ್ ಮಾಡಿದ ತಿಮ್ಮಕ್ಕ..!

ವಾಸಿಸಲು ಒಂದು ಮನೆ, ನೆಮ್ಮದಿ ಜೀವನ ನಡೆಸಲು ಕೊನೆಗಾಲದಲ್ಲಿ ಮಾಸಾಶನ ನೀಡಿವಂತೆ ಕೋರಿ ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದ್ದರೂ.., ಸರ್ಕಾರ ಮನವಿಗೆ ಸ್ಪಂದಿಸದೇ ಇರುವುದರಿಂದ ಬೇಸತ್ತಿರುವ ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಸಾಲುಮರದ ತಿಮ್ಮಕ್ಕ ತಾನು ಪಡೆದ ಎಲ್ಲಾ ಪ್ರಶಸ್ತಿಗಳನ್ನು ವಾಪಸು ನೀಡುವುದಾಗಿ ಹೇಳಿಕೊಂಡಿದ್ದಾರೆ..! ನನಗೆ ಮನೆ ನಿರ್ಮಾಣವೂ ಮಾಡಿಕೊಟ್ಟಿಲ್ಲ, ನನ್ನೂರಿನಲ್ಲೊಂದು ಹೆರಿಗೆ ಆಸ್ಪತ್ರೆ ಕಟ್ಟಿಸಿಕೊಡಿ ಅಂತ ಹೇಳಿದ್ದರೂ ಆ ಮನವಿಗೂ ಸರ್ಕಾರ ಸ್ಪಂದಿಸಿಲ್ಲ ಅಂತ ಪರಿಸರ ಪ್ರೇಮಿ ತಿಮ್ಮಕ್ಕ ಬೇಸರದಿಂದ ಹೇಳಿಕೊಂಡಿದ್ದಾರೆ

1 COMMENT

LEAVE A REPLY

Please enter your comment!
Please enter your name here