2014-15ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಇಂದು ಪ್ರಕಟವಾಗಿದೆ. `ನಾನು ಅವನಲ್ಲ ಅವಳು’ ಚಿತ್ರ ಅತ್ಯುತ್ತಮ ಕಥೆ ಪ್ರಶಸ್ತಿಯನ್ನು ಮತ್ತು ಆ ಸಿನಿಮಾದಲ್ಲಿನಟನೆಗೆ ಸಂಚಾರಿ ವಿಜಯ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ.
ಹರಿವು ಸಿನಿಮಾ ಪ್ರಥಮ ಅತ್ಯುತ್ತಮ ಸಿನಿಮಾವಾಗಿ ಆಯ್ಕೆಯಾಗಿದೆ. ದ್ವಿತೀಯ ಅತ್ಯುತ್ತಮ ಸಿನಿಮಾವಾಗಿ ಅಭಿಮನ್ಯು ಸಿನಿಮಾ ಮತ್ತು ಮೂರನೇ ಅತ್ಯುತ್ತಮ ಸಿನಿಮಾವಾಗಿ ಹಗ್ಗದ ಕೊನೆ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ.
ಇನ್ನುಳಿದಂತೆ ಪ್ರಥಮ ನಿದರ್ೇಶನದ ಅತ್ಯುತ್ತಮ ಚಿತ್ರವಾಗಿ ಉಳಿದವರು ಕಂಡಂತೆ, ಅತ್ಯುತ್ತಮ ಮನರಂಜನಾ ಸಿನಿಮಾವಾಗಿ ಗಜಕೇಸರಿ, ಅತ್ಯುತ್ತಮ ಪ್ರಾದೇಶಿಕ ಸಿನಿಮಾವಾಗಿ ವಿಷದ ಮಳೆ ಪ್ರಶಸ್ತಿಯನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.
ವಿದಾಯ ಚಿತ್ರದ ನಟೆನೆಗಾಗಿ ಲಕ್ಷ್ಮೀ ಗೋಸ್ವಾಮಿ ಉತ್ತಮ ನಟಿ ಪ್ರಶಸ್ತಿಗೆ ಭಾಜರಾಗಿದ್ದಾರೆ. ಪುಟ್ಟಣ್ಣ ಕಣಗಲ್ ಪ್ರಶಸ್ತಿ ಬರಗೂರು ರಾಮಚಂದ್ರಪ್ಪನವರಿಗೆ, ಡಾ. ರಾಜ್ ಕುಮಾರ್ ಪ್ರಶಸ್ತಿಗೆ ಬಸಂತ್ ಕುಮಾರ್ ಪಾಟೀಲ್ ಆಯ್ಕೆಯಾಗಿದ್ದಾರೆ. ಸಂಕಲಗಾರ ಸುರೇಶ್ ಅರಸ್ ವಿಷ್ಣುವರ್ಧನ್ ಪ್ರಶಸ್ತಿಗೂ, ಕೌದಿ ಚಿತ್ರದ ನಟನೆಗೆ ಡಾ. ಬಿ ಜಯಶ್ರೀ ಪೋಷಕ ನಟಿ ಪ್ರಶಸ್ತಿಗೂ ಪರಿಗಣಿಸಲ್ಪಟ್ಟಿದ್ದಾರೆ. ಅತ್ಯುತ್ತಮ ಕಥೆ ಲಿವಿಂಗ್ ಸ್ಮೈಲ್ ವಿದ್ಯಾ, ಅತ್ಯುತ್ತಮ ಚಿತ್ರಕಥೆ ಪಿ. ಶೇಷಾದ್ರಿ (ವಿದಾಯ ಚಿತ್ರಕ್ಕೆ) ಹಾಗೂ ಅತ್ಯುತ್ತಮ ಗೀತರಚನೆಗೆ ಹುಲಿಕುಂಟೆ ಮೂರ್ತಿ (ಕೌದಿ ಚಿತ್ರ) ಆಯ್ಕೆ ಮಾಡಲ್ಪಟ್ಟಿದ್ದಾರೆ.
ಶಿವರುದ್ರಯ್ಯ ನೇತೃತ್ವದಲ್ಲಿ ರಚಿಸಿದ್ದ ಸಮಿತಿ ಹೀಗೆ ಒಟ್ಟು 29 ವಿಭಾಗಗಳಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಆಯ್ಕೆ ಮಾಡಿದೆ. ಈ ವಿಚಾರವನ್ನು ವಾರ್ತಾ ಇಲಾಖೆ ಸಚಿವ ಆರ್ ರೋಷನ್ ಬೇಗ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?
ಸಾವು ಗೆದ್ದು ಬಂದ ಕನ್ನಡದ ವೀರಯೋಧ..! 25 ಅಡಿ ಆಳದ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾದ ಯೋಧ..! Video
ಎರಡೂ ಕೈಲಿ ಬೌಲಿಂಗ್ ಮಾಡುವ ಭಾರತದ ಸ್ಪಿನ್ನರ್..! ಇವರು ಎಡಗೈ ಮತ್ತು ಬಲಗೈಲೂ ಬೌಲ್ ಮಾಡ್ತಾರೆ..!
20 ರೂಪಾಯಿ ಎಲ್ಲಿ..? 160 ರೂಪಾಯಿ ಎಲ್ಲಿ..? ಇದು ಹಗಲು ದರೋಡೆ ಅಲ್ಲದೇ ಇನ್ನೇನು..?