ನಿಮಗೆ ಚೆನ್ನಾಗಿ ನೆನಪಿರಬೇಕು, ಎರಡು ಮೂರು ವರ್ಷದ ಹಿಂದೆ ಸಿನಿಮಾವೊಂದು ಸದ್ದಿಲ್ಲದೇ ಬಂದು ಸಿಕ್ಕಾಪಟ್ಟೆ ಸದ್ದು ಮಾಡಿ, ಸುದ್ದಿ ಮಾಡಿ ಬಾಕ್ಸಾಫೀಸ್ ನಲ್ಲಿ ಸಖತ್ ಸೌಂಡ್ ಮಾಡಿತ್ತು. ಅದರ ಟೈಟಲ್ ನೋಡೀನೇ ಕೆಲವರು ಇದ್ರಲ್ಲೇನೋ ಇದೇ ಅಂದಿದ್ರು. ಸಿನಿಮಾ ನೋಡಿದವರು ರಿಯಲ್ ಸ್ಟೋರಿಯನ್ನು ಎಂಜಾಯ್ ಮಾಡಿದ್ರು. ಕೆಲವರು ಅದರ ಸದ್ದಿಗೆ ಬೆಚ್ಚಿಬಿದ್ದಿದ್ರು. ಅದರ ಹೆಸರು 6-5=2. ಈಗ ಈ ವಿಷಯ ಯಾಕಪ್ಪ ಅಂದ್ರೆ ಅದೇ 6-5=2 ಸಿನಿಮಾದ ನಿರ್ಮಾಪಕರಾದ ಕೃಷ್ಣ ಚೈತನ್ಯ ಈಗ ಮತ್ತೆ ಕನ್ನಡ ಪ್ರೇಕ್ಷಕ ಥಿಯೇಟರ್ ನಲ್ಲಿ ಬೆಚ್ಚಿಬೀಳೋ ಹಾಗೆ ಮತ್ತೊಂದು ಸಿನಿಮಾ ಸೈಲೆಂಟಾಗಿ ರೆಡಿ ಮಾಡಿದ್ದಾರೆ. ಚಿತ್ರದ ಹೆಸರು ಕರ್ವ..! ಈ ಸಲವೂ ನಮ್ಮ ಗುರಿ ಸ್ಪಷ್ಟವಾಗಿದೆ, ಕರ್ವ ಸ್ಯಾಂಡಲ್ ವುಡ್ಡಲ್ಲಿ ಮತ್ತೊಂದು ಸೂಪರ್ ಹಿಟ್ ಆಗಲಿದೆ ಅನ್ನೋ ಭರವಸೆಯಲ್ಲಿದ್ದಾರೆ ಕೃಷ್ಣ ಚೈತನ್ಯ. ನಮ್ಮ ಕನ್ನಡದ ಪ್ರೇಕ್ಷಕ ಹಾರರ್ ಸಿನಿಮಾಗಳನ್ನು ಸೋಲಿಸಿದ್ದು ತುಂಬಾ ಕಮ್ಮಿ, ಅದರಲ್ಲೂ ಸೂಪರ್ರಾಗಿರೋ ಹಾರರ್ ಸಿನಿಮಾ ಅಂತೂ ಕನ್ನಡಿಗರ ಫೇವರೇಟ್. ಹಾಗಾಗಿ ಅವರಿಗೆ ಇಷ್ಟ ಆಗೋ ಹಾಗೆ ನವನೀತ್ ಸಿನಿಮಾ ನಿರ್ದೇಶನ ಮಾಡಿದ್ದಾರೆ ಅನ್ನು ಮಾತನ್ನೂ ನಿರ್ಮಾಪಕ ಕೃಷ್ಣ ಚೈತನ್ಯ ಹೇಳಿದ್ದಾರೆ. ತಿಲಕ್ ಪ್ರಮುಖ ಪಾತ್ರದಲ್ಲಿರೋ ಈ ಕರ್ವದಲ್ಲಿ ತಿಲಕ್ ಗೆ ಆರ್.ಜೆ.ರೋಹಿತ್ ಜೊತೆಯಾಗಿದ್ದಾರೆ. ಹೆದರಿಸೋ ಕೆಲಸ ಸಖತ್ತಾಗಿ ಮಾಡಿದ್ದಾರೆ ನಮ್ಮ ನಿರ್ದೇಶಕರು ಅಂತಾರೆ ತಿಲಕ್. ಒಟ್ಟಾರೆ ಅನ್ ಟೋಲ್ಡ್ ಮಿಸ್ಟರಿ ಅನ್ನೋ ಸಬ್ ಟೈಟಲ್ ಜೊತೆ ಬರ್ತಿರೋ ಕರ್ವ ರಿಲೀಸ್ ಗೆ ರೆಡಿ ಇದೆ. ಚಿತ್ರಮಂದಿರ ತುಂಬಿದೆ ಅನ್ನೋ ಬೋರ್ಡು ಕರ್ವ ಹಾಕಿರೋ ಥಿಯೇಟರ್ ಹೊರಗೆ ಕಾಣಿಸಲಿ ಅನ್ನೋದು ನಮ್ಮ ಹಾರೈಕೆ… ಶುಭವಾಗಲಿ ಕರ್ವ ತಂಡಕ್ಕೆ…
POPULAR STORIES :
ಶಾರೂಕ್ ಖಾನ್ ಹತ್ಯೆಗೆ ಸಂಚು..! ಡಾನ್ `ಪೂಜಾರಿ’ ಅದ್ಯಾಕೆ ಮುಹೂರ್ತವಿಟ್ಟ..!?
ಸ್ನೇಹದಿಂದ ಪ್ರೀತಿಯತ್ತ… ಇದೊಂದು ಇಂಟ್ರೆಸ್ಟಿಂಗ್ ಪ್ರೇಮ್ ಕಹಾನಿ!
ಬಿ ಎಸ್ ವೈ ಪತ್ನಿ ಶೋಭಾ ಕರಂದ್ಲಾಜೆ ಅಂತೆ…!
ಮುಂದಿನ ದಿನಗಳಲ್ಲಿ ಪೆಟ್ರೋಲ್ ಸಿಗುವುದಿಲ್ಲ..!! ನೀರಿಗೆ ಮಾತ್ರವಲ್ಲ, ಪೆಟ್ರೋಲ್ಗೂ ಬರಗಾಲ..!
ಯಶವಂತಪುರ ಮತ್ತು ಬುರ್ಖಾದೊಳಗಿನ ಗುಟ್ಟು..! ( ಬೆಗ್ಗರ್ಸ್ ಮಾಫಿಯಾ- ಇನ್ವೆಸ್ಟಿಗೇಶನ್- ಭಾಗ 2 )
ಹುಡುಗಿರಿಗೆ ಈ ಮಾತನ್ನು ಕೇಳಿದ್ರೆ ಬಿಲ್ಕುಲ್ ಇಷ್ಟ ಆಗಲ್ಲ.!!