ಕರ್ನಾಟಕ ಚಲನಚಿತ್ರ ಕಪ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ತಂಡದ ಪಾಲಾಗಿದೆ.
ನೆಲಮಂಗಲದಲ್ಲಿ ಬಳಿ ನಡೆದ ಕೆಸಿಸಿ ಕಪ್ ನಲ್ಲಿ ಶಿವಣ್ಣ ಪ್ರತಿನಿಧಿಸಿದ್ದ ಕ್ಯಾಮರಮನ್ ಕೃಷ್ಣ ನೇತೃತ್ವದ ವಿಜಯ ನಗರ ಪ್ಯಾಟ್ರಿಯಾಟ್ಸ್ ವಿಜಯಿಯಾಗಿದೆ.
ಪತ್ರಕರ್ತ ಸದಾಶಿವ ಶಣೈ ಅವರ ನೇತೃತ್ವದ ಒಡೆಯರ್ಸ್ ಚಾರ್ಜರ್ಸ್ ತಂಡವನ್ನು ಫೈನಲ್ ನಲ್ಲಿ ಮಣಿಸುವ ಮೂಲಕ ಶಿವಣ್ಣ ಪ್ರತಿನಿಧಿಸಿದ್ದ ತಂಡ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಒಡೆಯರ್ಸ್ ತಂಡದ ವಿರುದ್ಧ ಶಿವಣ್ಣ ಅವರ ವಿಜಯ ನಗರ ಪ್ಯಾಟ್ರಿಯಾಟ್ಸ್ ತಂಡ ನಿಗಧಿತ 10ಓವರ್ ಗಳಲ್ಲಿ 7ವಿಕೆಟ್ ಕಳೆದುಕೊಂಡು 120 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಒಡೆಯರ್ಸ್ ಕೇವಲ 112ರನ್ ಗಳಿಸಿ ಸೋಲೊಪ್ಪಿಕೊಂಡಿತು.