ಕೀರ್ತಿಗೌಡ…ಯಸ್ ದುನಿಯಾ ವಿಜಯ್ ಅವರ ಎರಡನೇ ಹೆಂಡ್ತಿ. ಜಿಮ್ ಟ್ರೈನರ್ ಮಾರುತಿ ಗೌಡ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಿ ಜೈಲಿಗೆ ಹೋಗಿ ಜಾಮೀನು ತಗೊಂಡು ಬರೋವಷ್ಟೆಲ್ಲೀಗ ಅವರ ಇಬ್ಬರು ಹೆಂಡಿರ ಜಗಳ ಬೀದಿಗೆ ಬಂದಿದೆ.
ಮೊದಲ ಪತ್ನಿ ನಾಗರತ್ನ ಮತ್ತು ಎರಡನೇ ಪತ್ನಿ ಕೀರ್ತಿಗೌಡ ಅವರ ವಾಕ್ಸಮರ ತಾರಕಕ್ಕೇರಿರೋದು ಗೊತ್ತೇ ಇದೆ.
ಕೀರ್ತಿ ಗೌಡ ನಟಿ ಅನ್ನೋದು ಗೊತ್ತಿರೋ ವಿಷಯವೇ. ಆದ್ರೆ ಇವರು ಯಾವೆಲ್ಲಾ ಸಿನಿಮಾಗಳಲ್ಲಿ ನಟಿಸಿದ್ರು ಅಂತ ಏನಾದ್ರು ಗೊತ್ತಿದ್ಯ?
ಕೀರ್ತಿ ಮೊದಲು ‘ನನ್ನುಸಿರೇ’ ಸಿನಿಮಾದಲ್ಲಿ ನಟಿಸಿದ್ದರು. ಜಾಲೀಡೇಸ್ ಸಿನಿಮಾದ ನಾಲ್ವರು ಹೀರೋಯಿನ್ ಗಳಲ್ಲಿ ಕೀರ್ತಿಕೂಡ ಒಬ್ಬರು.
ಕಿಚ್ಚ ಸುದೀಪ್ ಅವರ ಜಸ್ಟ್ ಮಾತ್ ಮಾತಲ್ಲಿ ಸಿನಿಮಾದಲ್ಲಿ ಎರಡನೇ ನಾಯಕಿ.
ಈಕೆ ಮಾಡೆಲ್ ಆಗಿಯೂ ಸಾಕಷ್ಟು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. 2016 ರಲ್ಲಿ ಸೌತ್ ಇಂಡಿಯಾ ಕ್ವೀನ್ ಸ್ಪರ್ಧೆಯಲ್ಲೂ ಮಿಂಚಿದ್ದರು.