ಕೆಜಿಎಫ್ ಕನ್ನಡ ಚಲನಚಿತ್ರರಂಗದ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದ ಚಿತ್ರ. ಕನ್ನಡ ಚಲನಚಿತ್ರರಂಗದವರು ಸಹ ಕೋಟಿ ಕೋಟಿ ಚಾಚುವಂತಹ ಸಿನಿಮಾವನ್ನು ಮಾಡಬಹುದು ಎಂದು ತೋರಿಸಿ ಕೊಟ್ಟಂತಹ ಚಿತ್ರ ಕೆಜಿಎಫ್. ಇನ್ನು ಕೆಜಿಎಫ್ ಚಾಪ್ಟರ್ ಒಂದರ ಯಶಸ್ಸಿನ ನಂತರ ಇದೀಗ ಚಿತ್ರತಂಡ ಕೆಜಿಎಫ್ ಚಾಪ್ಟರ್ ಎರಡರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಸಾಕಷ್ಟು ಶ್ರಮವನ್ನು ವಹಿಸಿ ಕೆಜಿಎಫ್ ಚಿತ್ರದ ಚಿತ್ರೀಕರಣವನ್ನು ಮಾಡಲಾಗುತ್ತಿದೆ. ಹೀಗೆ ತಮ್ಮ ಪಾಡಿಗೆ ತಾವು ಚಿತ್ರೀಕರಣದಲ್ಲಿ ಬಿಝಿಯಾಗಿರುವ ಕೆಜಿಎಫ್ ತಂಡಕ್ಕೆ ಇದೀಗ ಕಿರಿಕಿರಿಯೊಂದು ಶುರುವಾಗಿದೆ.
ಅದೇನೆಂದರೆ ಕೆಜಿಎಫ್ ಚಿತ್ರ ತಂಡದ ಹೆಸರಿನಲ್ಲಿ ಕೆಜಿಎಫ್ ಚಾಪ್ಟರ್ ಎರಡರ ಚಿತ್ರೀಕರಣಕ್ಕೆ ಅವಕಾಶ ಕೊಡುವುದಾಗಿ ಅನ್ಯ ವ್ಯಕ್ತಿ ಫೇಕ್ ಮೆಸೇಜ್ ಗಳನ್ನು ಕಳುಹಿಸುತ್ತಿರುವುದು. ಹೌದು ಕಿಡಿಗೇಡಿಯೊಬ್ಬ ಪ್ರಶಾಂತ್ ನೀಲ್ ಅವರ ಹೆಸರಿನಲ್ಲಿ ಇ ಮೇಲ್ ಐಡಿ ವೊಂದನ್ನು ಕ್ರಿಯೇಟ್ ಮಾಡಿ ಅದರ ಮುಖಾಂತರ ಆಡಿಷನ್ಗೆ ಜನಸಾಮಾನ್ಯರನ್ನು ಕರೆಯುತ್ತಿದ್ದಾನೆ. ಇನ್ನು ಈ ವಿಷಯ ಪ್ರಶಾಂತ್ ನೀಲ್ ಅವರ ಗಮನಕ್ಕೆ ಬಿದ್ದದ್ದೇ ತಡ ಅವರು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಈ ಐಡಿ ನನ್ನದಲ್ಲ ಯಾರೋ ಫೇಕ್ ಆಗಿ ಕ್ರಿಯೇಟ್ ಮಾಡಿದ್ದಾರೆ ಯಾರು ಇದಕ್ಕೆ ಗಮನ ಕೊಡಬೇಡಿ ಎಂದು ಹೇಳಿದ್ದಾರೆ. ನಮ್ಮ ಚಿತ್ರಕ್ಕೆ ಆಡಿಶನ್ ನಡೆಸಿದರೆ ಹೊಂಬಾಳೆ ಪ್ರೊಡಕ್ಷನ್ ಅಡಿಯಲ್ಲಿಯೇ ನಡೆಯುತ್ತದೆ ಹೊರತು ಬೇರೆ ಯಾರೂ ನಡೆಸುವುದಿಲ್ಲ ಎಂದು ಖಡಕ್ ಆಗಿ ಸಂದೇಶವನ್ನು ನೀಡಿದ್ದಾರೆ.