ರಾಜ್ಯಾದ್ಯಂತ ಕಿಡ್ನಿ ಕಸಿ ದಂಧೆ

1
50

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಿಡ್ನಿ ಕಸಿ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಖಾಕಿ ರೆಡಿಯಾಗಿದೆ. ದುಡ್ಡಿನ ಆಸೆಗೆ ಕಿಡ್ನಿ ಮಾರುವವರಿಗೆ ಪೊಲೀಸ್​ ಇಲಾಖೆ ಬಿಗ್ ಶಾಕ್ ನೀಡಿದೆ. ಅಕ್ರಮ ಕಿಡ್ನಿ ಕಸಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಹೊಸ ರೂಲ್ಸ್ ಜಾರಿ ಮಾಡಿದೆ. ಕಿಡ್ನಿ ಕಸಿಗೆ ಪೊಲೀಸ್ ಪರ್ಮಿಶನ್ ಬೇಕು, ಪೊಲೀಸ್ ಅನುಮತಿ ಇಲ್ಲದೆ ಕಿಡ್ನಿ ಕಸಿ ಮಾಡುವಂತಿಲ್ಲ. ಕಿಡ್ನಿ ಬೇಕಾದವರು ಮೊದಲು ಕಮಿಟಿಗೆ ಮಾಹಿತಿ ನೀಡಬೇಕು.

ನಂತರ ಕಿಡ್ನಿ ಬೇಕಾದವರ ಕುಟುಂಬದ ಮಾಹಿತಿ ಕೂಡಾ ನೀಡಬೇಕು. ಆಮೇಲೆ ಪೊಲೀಸರಿಂದ ತನಿಖೆ ನಡೆಯುತ್ತೆ. ಸಬ್ ಇನ್ಸ್‌ಪೆಕ್ಟರ್ ಈ ಬಗ್ಗೆ ತನಿಖೆ ನಡೆಸುತ್ತಾರೆ. ಆ ಏರಿಯಾ ಇನ್ಸ್‌ಪೆಕ್ಟರ್ ತನಿಖೆ ನಡೆಸ್ತಾರೆ. ಆಮೇಲೆ ಫ್ಯಾಮಿಲಿ ಬಗ್ಗೆ ತನಿಖೆ ನಡೆಸಲಾಗತ್ತೆ. ಸ್ಟೇಷನ್ ನಿಂದ NOC ಪಡೆದ ಬಳಿಕವೇ ಮುಂದುವರಿಯುವುದು. ಈ ಮೂಲಕ ಖಾಕಿ ಪಡೆ ಅಕ್ರಮ ಕಿಡ್ನಿ ಕಸಿಗೆ ಬ್ರೇಕ್ ಹಾಕಲು‌ ಮುಂದಾಗಿದೆ. ಜನರು ಹಣದ ಆಸೆಗೆ ಕಿಡ್ನಿ ಮಾರಾಟ ಮಾಡುತ್ತಿದ್ದು, ಕಮಿಟಿಗೆ ತಿಳಿಸದೆ ಕಿಡ್ನಿ ಕಸಿಗೆ ಮುಂದಾಗ್ತಿದ್ದರು ಇದಕ್ಕೆಲ್ಲಾ ಬ್ರೇಕ್ ಹಾಕಲು ಖಾಕಿ ಟೀಂ ಮುಂದಾಗಿದೆ. ಇನ್ನು ಮುಂದೆ ಕಿಡ್ನಿ ಕಸಿಗೆ ಪೊಲೀಸ್ ಇಲಾಖೆಗೆ ತಿಳಿಸಿ ಮಾಡಬೇಕಾಗಿದೆ.

1 COMMENT

LEAVE A REPLY

Please enter your comment!
Please enter your name here