ಕೊಹ್ಲಿ ಕಣ್ಣು ಈಗ ಅಜರುದ್ದೀನ್ ದಾಖಲೆ ಮೇಲೆ..!

Date:

ಕಳೆದ ನ್ಯೂಜಿಲ್ಯಾಂಡ್ ವಿರುದ್ದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಅಮೋಘ ಪ್ರದರ್ಶನದಿಂದ ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಮೂಲಕ ಐಸಿಸಿ ಟೆಸ್ಟ್ ಕ್ರಿಕೆಟ್‍ನಲ್ಲಿ ನಂ.1 ಸ್ಥಾನಕ್ಕೇರಿದೆ. ಆದರೆ ಈಗ ಟೀಂ ಇಂಡಿಯಾ ಟೆಸ್ಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತೊಂದು ಸಾಧನೆಯ ಬೆನ್ನತ್ತಿದ್ದಾರೆ. ಭಾರತದ ಯಶಸ್ವಿ ಟೆಸ್ಟ್ ನಾಯಕ ಎಂಬ ಹೆಗ್ಗಳಿಕೆ ಗಳಿಸಿದ್ದ ಮಹಮ್ಮದ್ ಅಜರುದ್ದೀನ್ ಅವರ ದಾಖಲೆ ಮುರಿಯಲು ಮುಂಬರುವ ಇಂಗ್ಲೆಂಡ್ ವಿರುದ್ದದ ಪಂದ್ಯ ಮಹತ್ವದ್ದಾಗಿದೆ. ನ್ಯೂಜಿಲ್ಯಾಂಡ್ ವಿರುದ್ದ ಮೂರು ಟೆಸ್ಟ್ ಸರಣಿಯನ್ನು ತಮ್ಮ ವಶಕ್ಕೆ ಪಡೆದ ಟೀಂ ಇಂಡಿಯಾ ಈಗ ಇಂಗ್ಲೆಂಡ್ ವಿರುದ್ದ ಐದು ಟೆಸ್ಟ್ ಪಂದ್ಯಗಳನ್ನಾಡಲು ಸಿದ್ಧತೆ ನಡೆಸಿದೆ. ರಾಜ್‍ಕೋಟ್‍ನಲ್ಲಿ ನ.9 ರಿಂದ ಮೊದಲ ಏಕದಿನ ಪಂದ್ಯ ನಡೆಯಲಿದೆ. ನಾಯಕತ್ವ ಜವಾಬ್ದಾರಿಯನ್ನು ಹೊತ್ತ ನಂತರ ಕೊಹ್ಲಿ ಒಟ್ಟು 17 ಟೆಸ್ಟ್ ಪಂದ್ಯಗಳನ್ನು ಮುನ್ನಡೆಸಿದ್ದಾರೆ. ಅದರಲ್ಲಿ 10 ಪಂದ್ಯ ಗೆದ್ದರೆ ಎರಡರಲ್ಲಿ ಸೋಲನ್ನನುಭವಿಸಿದ್ದಾರೆ. ಇನ್ನು 5ರಲ್ಲಿ ಡ್ರಾ ಸಾಧಿಸಿದ್ದಾರೆ. ಆದರೆ ಕೊಹ್ಲಿ ಪಡೆ ಇಂಗ್ಲೆಂಡ್ ವಿರುದ್ದದ 5 ಟೆಸ್ಟ್ ಪಂದ್ಯದಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದಲ್ಲಿ ಅಜರುದ್ದೀನ್ ದಾಖಲೆಯನ್ನು ಕೊಹ್ಲಿ ಸರಿಗಟ್ಟಲಿದ್ದಾರೆ.
ನಾಯಕನಾಗಿ ಅತೀ ಹೆಚ್ಚು ಗೆಲುವು ಸಾಧಿಸಿದ ಪಟ್ಟಿಯಲ್ಲಿ ಮಹಮ್ಮದ್ ಅಜರುದ್ದೀನ್ 3ನೇ ಸ್ಥಾನದಲ್ಲಿದ್ದು ಒಟ್ಟು 47 ಪಂದ್ಯಗಳಲ್ಲಿ 14 ಜಯ ಸಾಧಿಸಿದ್ದಾರೆ. ಈಗ ಕೋಹ್ಲಿ ಇಂಗ್ಲೆಂಡ್ ವಿರುದ್ದ 4 ಪಂದ್ಯ ಗೆದ್ದರೆ ಅಜರುದ್ದೀನ್ ದಾಖಲೆ ಮುರಿಯಲಿದ್ದಾರೆ. ಇನ್ನು ಸೀಮಿತ ಓವರ್ ಪಂದ್ಯದ ನಾಯಕ ಮಹೆಂದ್ರ ಸಿಂಗ್ ಧೋನಿ 60 ಪಂದ್ಯಗಳಲ್ಲಿ 27 ಪಂದ್ಯಗಳನ್ನು ಗೆದ್ದು ಮೊದಲ ಸ್ಥಾನದಲ್ಲಿದ್ದರೆ, 49 ಪಂದ್ಯಗಳಲ್ಲಿ 21 ಜಯ ಸಾಧಿಸಿದ್ದ ಸೌರವ್ ಗಂಗೂಲಿ ಎರಡನೇ ಸ್ಥಾನ ಅಲಂಕರಿಸಿಕೊಂಡಿದ್ದಾರೆ. ಆದರೆ ಕೊಹ್ಲಿಗೆ ಇಂಗ್ಲೆಂಡ್ ವಿರದ್ದದ ಪಂದ್ಯವೇ ಮಹತ್ವದ್ದೇನಲ್ಲ. ಬದಲಾಗಿ ಅದಾದ ನಂತರ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ವಿರುದ್ದ ಟೆಸ್ಟ್ ಪಂದ್ಯಗಳೂ ಇದೆ. ಅದರಲ್ಲಿ ಗೆಲುವು ಸಾಧಿಸಿದರೆ ಅಜರುದ್ದೀನ್ ದಾಖಲೆಯನ್ನು ಹಿಂದಿಕ್ಕಬಹುದು.

Like us on Facebook  The New India Times

POPULAR  STORIES :

ಇಂಡಿಯನ್ ಸ್ಟೀಲ್ ಮ್ಯಾನ್ ಸಾಹಸ ನೋಡುದ್ರೆ ಬೆಚ್ಚಿ ಬೀಳ್ತೀರ..!

ಲವ್ ಅಟ್ ಫಸ್ಟ್ ಸೈಟ್ ಅಂದ್ರೆ ಇದೇನಾ..!

ಹಾಲಿಗಿಂತ ಬಿಯರ್ ಆರೋಗ್ಯಕ್ಕೆ ಒಳ್ಳೆಯದು…!

ಟಾಪ್-2 ನಿಂದ ಮೈಕ್ರೋಮ್ಯಾಕ್ಸ್ ಔಟ್.. ನಂ.1 ಯಾರ್ ಗೊತ್ತಾ..?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...