ಭಾರತದಲ್ಲಿದ್ದಾರೆ ಮೂವತ್ತು ಲಕ್ಷಕ್ಕಿಂತ ಹೆಚ್ಚು ವೇಶ್ಯೆಯರು..!? ಮೈ ಮಾರಾಟ ದಂಧೆ ಲೀಗಲೈಜ್ ಆಗುತ್ತಾ..?

0
67

 

ಹಲವರಿಗೆ ಅನಿವಾರ್ಯ, ಕೆಲವರಿಗೆ ವಿಲಾಸ ಜೀವನದ ಹರಕತ್ತು. ಹೆಣ್ಣನ್ನು ಮುಂದಿಟ್ಟುಕೊಂಡು ಹಣದ ರಾಶಿಯಲ್ಲಿ ಮಿಂದೇಳುವ ತಲೆ ಹಿಡುಕರು, ಎಲ್ಲವೂ ಕಣ್ಣೆದುರೇ ನಡೆಯುತ್ತಿದ್ದರೂ ತಿಂಗಳ ವಸೂಲಾತಿಗೆ ಕುರುಡರಂತೆ ನಟಿಸುವ ಕಾನೂನು, ಇವೆಲ್ಲವನ್ನೂ ಮೀರಿ ಎಲ್ಲವನ್ನೂ ನಿಭಾಯಿಸುವ ಅಂಡರ್ವರ್ಲ್ಡ್. ಬೆವರ ಹಸಿವಾಸನೆಯಲ್ಲಿ ನಿರಂತರವಾಗಿ ನರಳುವ ಅವಳನ್ನು ಸಮಾಜ ನಿಷ್ಕಾರುಣ್ಯದಿಂದ ವೇಶ್ಯೆ ಎಂದು ಕರೆದುಬಿಡುತ್ತದೆ.

ಎಲ್ಲಾ ದೇಶದಲ್ಲಿ, ಎಲ್ಲಾ ರಾಜ್ಯದಲ್ಲಿ, ಎಲ್ಲಾ ಪ್ರದೇಶಗಳಲ್ಲಿ ರಾಜಾರೋಷವಾಗೇನು ವೇಶ್ಯಾವಾಟಿಕೆ ನಡೆಯುವುದಿಲ್ಲ. ಬಹುತೇಕ ಗುಪ್ತವಾಗಿ ನಡೆದುಹೋಗುವ ಕರಾಳ ಕಸುಬುಗಳಿವು. ಮಾಂಸದ ದಂಧೆ ಮನೆಯನ್ನು ಪ್ರವೇಶಿಸುವ ಗಿರಾಕಿಗಳ ಮಧ್ಯೆ ವ್ಯವಹಾರ ಕುದುರಿಸಲು ಬ್ರೋಕರ್ಗಳು ಬೇಕು. ಗಿರಾಕಿಗಳ ಜೊತೆ ಮಲಗೇಳುವ ಹೆಣ್ಣು ದುಡಿಯುವ ಮೊತ್ತದಲ್ಲಿ ಇಂತಿಷ್ಟು ಕಮೀಷನ್ ಅವರಿಗೆ ಹೋಗುತ್ತದೆ. ಮತ್ತಷ್ಟು ದಂಧೆ ನಡೆಸುವವರಿಗೆ ಸೇರುತ್ತದೆ. ಅಂದರೆ ಐನೂರು ರೂಪಾಯಿಗೆ ಪರಪುರುಷನ ಜೊತೆ ಮಲಗೇಳುವ ವೇಶ್ಯೆಯ ಕೈಗೆ ಇನ್ನೂರು ರೂಪಾಯಿ ಸಿಕ್ಕರೇ ದೊಡ್ಡ ಮಾತು. ಇದು ಸಣ್ಣಪುಟ್ಟ ವೇಶ್ಯಾವಾಟಿಕೆ ಅಡ್ಡೆಗಳ ಲೆಕ್ಕಾಚಾರ.

ವೇಶ್ಯಾವಾಟಿಕೆಗೆ ನಾನಾ ಪ್ರಕಾರ. ಲೋಪ್ರೊಫೈಲ್ನಿಂದ ಹಿಡಿದು ಹೈಟೆಕ್ ಪ್ರೊಫೈಲ್ವರೆಗೂ ವೇಶ್ಯಾವಾಟಿಕೆ ನಡೆಯುತ್ತದೆ. ಐನೂರು ರೂಪಾಯಿಯಿಂದ ಹಿಡಿದು ಐದು ಲಕ್ಷ, ಹತ್ತು ಲಕ್ಷ, ಕೋಟಿಗಳಿಗೆಲ್ಲ ದಂಧೆ ನಡೆದುಬಿಡುತ್ತದೆ. ಈ ಜಗತ್ತಿನಲ್ಲಿ ಸಿನಿಮಾ, ಸೀರಿಯಲ್ ಮಂದಿಯ ನೆರಳಿದ್ದರಂತೂ ಮುಗೀತು. ಇವಕ್ಕೆಲ್ಲಾ ನಿದರ್ಶನವೆಂಬಂತೆ, ಹಲವಾರು ನಟಿಮಣಿಯರು ಅವರ ಬ್ರೋಕರ್ಗಳ ಸಮೇತ ಸಿಕ್ಕಿಬಿದ್ದಿದ್ದಾರೆ. ಸುಮ್ಮನೇ ಮುಂಬೈಯ ಕಾಮಾಟಿಪುರದ ರಸ್ತೆಯಲ್ಲಿ ಒಂದು ರೌಂಡ್ ಹಾಕಿಬಂದರೇ ಸಾಕು. ನೈಜ ವೇಶ್ಯಾವಾಟಿಕೆಗಿಂತ, ಬದುಕಿನ ಕ್ರೂರ ಮುಖಗಳ ಪರಿಚಯವಾಗಿಬಿಡುತ್ತದೆ. ಅಲ್ಲಿ ಚಿಲ್ಲರೆ ಕಾಸಿನಿಂದ ಹಿಡಿದು, ಲಕ್ಷ-ಲಕ್ಷಗಳ ವಹಿವಾಟು ನಡೆಯುತ್ತದೆ. ಅಲ್ಲೆಲ್ಲಾ ನಡುಬೀದಿಯಲ್ಲಿ ವ್ಯವಹಾರ ಕುದುರುತ್ತದೆ. ಪೊಲೀಸ್ ಇಲಾಖೆಯಿಂದ ಹಿಡಿದು, ಶಾಸಕಾಂಗದ ವ್ಯವಸ್ಥೆಗಳಿಗೆ ಮಾಮೂಲು ಹೋಗುತ್ತದೆ. ವೇಶ್ಯಾವಾಟಿಕೆ ಓಪನ್ ಆದಷ್ಟು, ಅತ್ಯಾಚಾರಗಳಿಗೆ ಕಡಿವಾಣ ಹಾಕಬಹುದು ಎನ್ನುವವರು ಅಂತಹ ಅಡ್ಡೆಗಳಲ್ಲಿ ಕವುಚಿ ಮಲಗಿಬಂದವರೇ ಆಗಿರುತ್ತಾರೆ.

ಇದೀಗ ದೇಶದಲ್ಲಿ ಒಂಬತ್ತು ಲಕ್ಷ ಹೆಣ್ಣುಮಕ್ಕಳು ಮೈ ಮಾರುತ್ತಿದ್ದಾರೆ. ಅವರಲ್ಲಿ ಬಹುತೇಕ ಹೆಣ್ಣುಮಕ್ಕಳು ಜೀವನ ನಡೆಸಲೇಬೇಕಾದ ಅನಿವಾರ್ಯತೆಯಿಂದ ಆ ಪಂಜರದಲ್ಲಿ ಬಂಧಿಯಾಗಿದ್ದಾರೆ ಎಂಬ ವರದಿ ಬಂದಿದೆ. ಕೆಲವು ಮಂದಿಗೆ ವಿಲಾಸ ಜೀವನದ ಉದ್ದೇಶಗಳಿರುವುದರಿಂದ ಹೈಟೆಕ್ ತೆವಲಿನಲ್ಲಿ ಈಜಾಡಿ ಏಳುತ್ತಿದ್ದಾರೆ. ವೇಶ್ಯಾವಾಟಿಕೆಯಲ್ಲಿ ಚಂದ್ರಬಾಬು ನಾಯ್ಡು ಅವರ ಆಂಧ್ರಪ್ರದೇಶ ಅರ್ಥಾತ್ ಹೈದ್ರಾಬಾದ್ಗೆ ಮೊದಲ ಸ್ಥಾನ ಸಿಕ್ಕಿದೆ. ಅಲ್ಲಿ ಅಂದಾಜು ಒಂದು ಲಕ್ಷದ ಐವತ್ತಾರು ಸಾವಿರ ಮಂದಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾರಂತೆ. ಅರವಿಂದ್ ಕೇಜ್ರಿವಾಲ್ ಅವರ ದೆಹಲಿ ಸಾಮ್ರಾಜ್ಯಕ್ಕೆ ಎರಡನೇ ಸ್ಥಾನ ಸಿಕ್ಕಿದೆ. ಅವರೇಕೋ ಗುಡಿಸಬೇಕಾದದ್ದನ್ನು ಗುಡಿಸುತ್ತಿಲ್ಲ. ದೇಶದ ರಾಜಧಾನಿಯಲ್ಲಿ ಅಂದಾಜು ಅರವತ್ತೊಂದು ಸಾವಿರ ವೇಶ್ಯೆಯರಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಮೂರನೇ ಸ್ಥಾನದಲ್ಲಿರುವುದು ಕರ್ನಾಟಕ. ಸಿದ್ದಾರಾಮಯ್ಯ ನಿದ್ದೆಯಿಂದ ಎದ್ದು ನೋಡಿದರೇ ಮಾತ್ರ ಇಂತಹ ಅಭಾಸಗಳು ಕಾಣಿಸುತ್ತದೆ. ಅವರಿಗೆ ಮುಗಿಯದ ಮಂಪರು. ಯಕಃಶ್ಚಿತ್ ಮೆಜೆಸ್ಟಿಕ್ ಆಸುಪಾಸಿನಲ್ಲಾದರೂ ನಿದ್ರೆಯಿಂದ ಎದ್ದರೇ ಎಲ್ಲವೂ ಸ್ಪಷ್ಟವಾಗುತ್ತದೆ. ಅದೇಕೋ ಬರ್ತಾ ಬರ್ತಾ ಮೆಜೆಸ್ಟಿಕ್ ಕಾಮಾಟಿಪುರ ಆಗುತ್ತಿದೆ. ಅಲ್ಲಿರೋ ಬಹುತೇಕ ಲಾಡ್ಜ್ ಗಳು ವೇಶ್ಯಾವಾಟಿಕೆಗೆ ಸೀಮಿತವಾಗಿವೆ. ಸ್ವಲ್ಪ ಕ್ವಾಲಿಟಿ, ಹೈಟೆಕ್ ಬೇಕಾದ್ರೇ ಆನ್ಲೈನ್ ಮೂಲಕ ಹುಡ್ಗೀರನ್ನು ಸೆಟ್ ಮಾಡಿಕೊಂಡುಬಿಡಬಹುದು. ಇವೆಲ್ಲ ಕೋರಮಂಗಲ, ಹೊಸೂರು ರೋಡ್ ಮುಂತಾದ ಕಡೆ ನಡೆಯುವ ದಂಧೆಗಳು. ಅಷ್ಟೆಲ್ಲಾ ಯಾಕೆ ವಿದೇಶಿ ಹೆಣ್ಣುಮಕ್ಕಳೇ ರಾಜಾರೋಷವಾಗಿ ವೇಶ್ಯಾವಾಟಿಕೆಗಿಳಿದಿರುವ ಸಾಕಷ್ಟು ದೃಷ್ಟಾಂತಗಳಿವೆ. ಕರ್ನಾಟಕದ ನಂತರದ ಸ್ಥಾನದಲ್ಲಿರೋದು ಓಪನ್ ವೇಶ್ಯಾವಾಟಿಕೆಯ ಅಡ್ಡಾ ಮಹಾರಾಷ್ಟ್ರ. ಅದೇ ಅಚ್ಚರಿಗೆ ಕಾರಣವಾಗಿದೆ. ಮಹಾರಾಷ್ಟ್ರದಂತೆ ಕೋಲ್ಕತ್ತಾವೂ ಖುಲ್ಲಾ ಪ್ರಾಸ್ಟಿಟ್ಯೂಷನ್ಸ್ ಗೆ ಫೇಮಸ್. ಅದೇಕೋ ಕೋಲ್ಕತ್ತಾದ ಹೆಸ್ರು ಎಲ್ಲೂ ಕಂಡುಬಂದಿಲ್ಲ. ಇವೆಲ್ಲ ಅಂದಾಜು ಲೆಕ್ಕಾಚಾರವಾಗಿರುವುದರಿಂದ ಒಂಬತ್ತು ಲಕ್ಷಕ್ಕಿಂತ ಹೆಚ್ಚು ವೇಶ್ಯೆಯರಿದ್ದಾರೆ ಎನ್ನಬಹುದು.

ಅಂದಹಾಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರ್ಟಿಐನಲ್ಲಿ ಈ ಬಗ್ಗೆ ವರದಿ ಕೇಳಿತ್ತು. ಏಡ್ಸ್ ನಿಯಂತ್ರಣ ಸಂಸ್ಥೆಯಲ್ಲಿ 6.96 ಲಕ್ಷ ಮಂದಿ ಮಾತ್ರ ರಿಜಿಸ್ಟ್ರಾರ್ ಮಾಡಿಕೊಂಡಿದ್ದಾರೆ. ಮಿಕ್ಕವರು ಮಾಡಿಕೊಂಡಿಲ್ಲ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಸಚಿವಾಲಯ ಹೇಳಿದೆ. ಅವರು ಕ್ರಮ ತೆಗೆದುಕೊಳ್ಳುತ್ತಾರೋ.. ಇಲ್ಲವೋ.. ಹೆಣ್ಣು ಮಾತ್ರ ಈ ನರಕದಲ್ಲಿ ಪ್ರತಿಕ್ಷಣ ನರಳುತ್ತಿದ್ದಾಳೆ.

ವೇಶ್ಯಾವಾಟಿಕೆಯನ್ನು ನಿಯಂತ್ರಿಸಲು ಸಾಕಷ್ಟು ರಕ್ಷಣಾ ಪ್ರಯತ್ನಗಳು ನಡೆದಿವೆಯಾದರೂ, ಈ ದಂಧೆಯಲ್ಲಿರುವ ಬಹುತೇಕ ಮಹಿಳೆಯರು ಮತ್ತು ಮಕ್ಕಳನ್ನು ಗುರುತಿಸಿ ಅವರನ್ನು ಸಾಮಾನ್ಯ ಜೀವನಕ್ಕೆ ಮರಳುವಂತೆ ಮಾಡುವುದು ಬಹಳ ಕಷ್ಟಕರ ಎಂದು ಕೈಲಾಶ್ ಸತ್ಯಾರ್ಥಿಯವರ “ಗ್ಲೋಬಲ್ ಮಾರ್ಚ್ ಎಗೇನ್ಸ್ಟ್ ಚೈಲ್ಡ್ ಲೇಬರ್” ವರದಿ ಹೇಳಿದೆ. ಅಲ್ಲದೆ ಈ ದಂಧೆಯಲ್ಲಿ ತೊಡಗಿರುವವರ ಪೈಕಿ ಶೇಕಡಾ 93ರಷ್ಟು ಮಂದಿ ಜೀವನದಲ್ಲಿ ಜಿಗುಪ್ಸೆಗೆ ತುತ್ತಾಗಿ ತೀರಾ ಚಿಕ್ಕ ವಯಸ್ಸಿನಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. “ಗ್ಲೋಬಲ್ ಮಾರ್ಚ್ ಎಗೇನ್ಸ್ಟ್ ಚೈಲ್ಡ್ ಲೇಬರ್” ತಂಡದ ಸದಸ್ಯೆ ಇಸಾಬೆಲ್, “ಈ ದಂಧೆಯಲ್ಲಿರುವ ಬಹುತೇಕ ಮಹಿಳೆಯರು ಮತ್ತು ಮಕ್ಕಳು ಅಕ್ರಮ ಕಳ್ಳ ಸಾಗಣೆದಾರರಿಂದ ಮೋಸಕ್ಕೆ ಒಳಗಾದವರಾಗಿದ್ದಾರೆ. ಹೆಚ್ಚು ಸಂಬಳ ನೀಡುವುದಾಗಿ ಹೇಳಿ ಅವರನ್ನು ನಂಬಿಸಿ ಕರೆತಂದು ಈ ದಂಧೆಯಲ್ಲಿ ಬಿಡಲಾಗುತ್ತಿದೆ. ಶಾಲಾಮಕ್ಕಳು ಕೂಡ ಈ ದಂಧೆಯಲ್ಲಿ ಪಾಲ್ಗೊಂಡಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಕೆಲವರು ಸಿನಿಮಾದಲ್ಲಿ ಅಭಿನಯಿಸುವುದಕ್ಕಾಗಿ ಬಂದು ಈ ದಂಧೆಯ ಮೋಸಗಾರರಿಗೆ ಬಲಿಯಾಗಿದ್ದರೇ, ಮತ್ತೆ ಕೆಲವರು ಈ ದಂಧೆಯ ನೆಟ್ವರ್ಕ್ ನಲ್ಲಿರುವ ಯುವಕರ ಪ್ರೇಮ ಪಾಶಕ್ಕೆ ಸಿಲುಕಿ ಮೋಸಹೋಗಿದ್ದಾರೆ” ಎಂದಿದ್ದರು.

“ವೇಶ್ಯಾವಾಟಿಕೆ ತನ್ನದೇ ಆದ ಅನಾರೋಗ್ಯಕರ ಪ್ರಪಂಚವನ್ನು ಸೃಷ್ಟಿಸಿಕೊಂಡಿದೆ. ಒಮ್ಮೆ ಈ ಪ್ರಪಂಚವನ್ನು ಪ್ರವೇಶಿಸಿದರೆ ಮತ್ತೆ ಹಿಂದಿರುಗುವುದು ಬಹಳ ಕಷ್ಟ. ಹೆಚ್ಚು ಹಣ ಗಳಿಕೆ ಮಾಡಬಹುದು ಎಂಬ ಆಸೆಯಲ್ಲಿ ಸಾಕಷ್ಟು ಮಂದಿ ಈ ದಂಧೆಗೆ ಪ್ರವೇಶ ಮಾಡುತ್ತಾರೆ. ಆರಂಭದಲ್ಲಿ ಇದರಿಂದ ಹೆಚ್ಚು ಹಣ ಕೂಡ ಗಳಿಸಬಹುದು. ಆದರೆ ಕ್ರಮೇಣ ಇದು ಚಟವಾಗಿ ಪರಿಣಮಿಸಿ ಹೋಗುತ್ತದೆ. ಒಮ್ಮೆ ಈ ದಂಧೆಗೆ ಪ್ರವೇಶ ಮಾಡಿ ಬಳಿಕ ಬಿಟ್ಟು ಬರುತ್ತೇನೆ ಎಂದರೂ ಅಷ್ಟು ಸುಲಭವಾಗಿ ಬಿಟ್ಟು ಬರಲು ಸಾಧ್ಯವಿಲ್ಲ. ಹಾಗೆ ಬಿಟ್ಟು ಬಂದರೂ ಸಮಾಜ ಇಂಥವರನ್ನು ಸುಲಭವಾಗಿ ಸ್ವೀಕಾರ ಮಾಡುವುದಿಲ್ಲ. ಹೀಗಾಗಿ ಇಂತಹ ಮಹಿಳೆಯರು ಸಮಾಜದಲ್ಲಿ ಸಾಕಷ್ಟು ಕಷ್ಟಕರ ಅನುಭವಗಳನ್ನು ಎದುರಿಸುತ್ತಾರೆ. ಹೀಗಾಗಿ ಮತ್ತೆ ತಮ್ಮ ಹಳೆಯ ಜೀವನಕ್ಕೆ ಅವರು ಮರಳುವಂತಾಗುತ್ತದೆ. 100ರಲ್ಲಿ ಕೇವಲ ಒಬ್ಬರು ಮಾತ್ರ ಇದರಲ್ಲಿ ಯಶಸ್ವಿಯಾಗಬಲ್ಲರು” ಎಂದು ಇಸಾಬೆಲ್ ಅಭಿಪ್ರಾಯಪಟ್ಟಿದ್ದಾರೆ.

`ಸಾಮಾಜಿಕ ಜಾಲತಾಣಗಳು ವ್ಯಾಪಕವಾಗಿರುವ ಈ ಸಂದರ್ಭದಲ್ಲಿ ಎಲ್ಲ ಪೋಷಕರು ತಮ್ಮ ಮಕ್ಕಳ ಬಗ್ಗೆ ಹಾಗೂ ಅವರ ಚಟುವಟಿಕೆಗಳ ಬಗ್ಗೆ ಗಮನ ಹರಿಸುವುದು ಅತ್ಯವಶ್ಯಕ. ಪ್ರಮುಖವಾಗಿ ಎಲ್ಲ ಪೋಷಕರು ತಮ್ಮ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಬೇಕು. ಯಾವುದೇ ವಿಚಾರಗಳ ಬಗ್ಗೆ ಚರ್ಚಿಸುವಷ್ಟು ಸ್ನೇಹಮಯ ವಾತಾವರಣ ನಿರ್ಮಾಣ ಮಾಡಬೇಕು. ಪ್ರಮುಖವಾಗಿ ಮಧ್ಯಪಾನ ಮಾಡುವ ಪೋಷಕರು ಪರೋಕ್ಷವಾಗಿ ತಮ್ಮ ಮಕ್ಕಳು ಮಾಂಸದಂಧೆಯತ್ತ ಮುಖ ಮಾಡುವಂತೆ ಮಾಡುತ್ತಿದ್ದಾರೆ’ ಎಂದಿದ್ದು ಇಸಾಬೆಲ್.

ಮೊದಲೇ ಹೇಳಿದಂತೆ ವೇಶ್ಯಾವಾಟಿಕೆಗೆ ಹಲವು ಮುಖ. ನಾನಾ ಕಾರಣಗಳಿಂದ ಅದು ಶುರುವಾಗುತ್ತದೆ. ನಾನಾ ಕಾರಣಗಳಿಂದ ಅಲ್ಲಿಂದ ಹೊರಬರಲಾಗದೇ ಪರಿತಪಿಸುವ ಸ್ಥಿತಿ ಬಂದೊದಗುತ್ತದೆ. ಹಾಗಾಗಿಯೇ ಬಹುತೇಕರು ತಮ್ಮ ಜೀವನವನ್ನೇ ಮುಗಿಸಿಕೊಳ್ಳುತ್ತಾರೆ. ಹಾಗೇ ದುರಂತವಾಗಿ ಸಾವಿಗೀಡಾಗುವ ವೇಶ್ಯೆಯರು ಶೇಕಡಾ ತೊಂಭತ್ತಮೂರರಷ್ಟಿದ್ದಾರೆ. ಬರೀ ಇವಿಷ್ಟು ಮಾತ್ರವಲ್ಲ. “ಗ್ಲೋಬಲ್ ಮಾರ್ಚ್ ಎಗೇನ್ಸ್ಟ್ ಚೈಲ್ಡ್ ಲೇಬರ್” ವೇಶ್ಯಾವಾಟಿಕೆಯ ಹಲವು ಮುಖವಾಡಗಳನ್ನು ಕಳಚಿಡುತ್ತದೆ.

ನಮ್ಮ ದೇಶದಲ್ಲಿ ಒಬ್ಬ ಮಹಿಳೆ ಗೌಪ್ಯವಾಗಿ ತನ್ನ ದೇಹದ ಮೂಲಕ ಕಾಮಸುಖವನ್ನು ಹಣಕ್ಕಾಗಿ ಮಾರಾಟ ಮಾಡುವುದು ಅಪರಾಧ ಅಲ್ಲವೇ ಅಲ್ಲ! ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಚಾರ ಮಾಡುವುದು, ಮಾರಾಟಕ್ಕೆ ಅಡ್ಡದಾರಿಗಳನ್ನು ಹಿಡಿಯುವುದು, ವೇಶ್ಯಾಗೃಹಗಳನ್ನು ಸ್ಥಾಪಿಸುವುದು ಮತ್ತು ನಡೆಸುವುದು, ಹಾಗೂ ಇದಕ್ಕಾಗಿ ಮಧ್ಯಸ್ಥಿಕೆ ವ್ಯವಹಾರ ಮಾಡುವುದು, ಅಪ್ರಾಪ್ತ ಮಕ್ಕಳನ್ನು ಲೈಂಗಿಕ ಚಟುವಟಿಕೆಗೆ ಬಳಸಿಕೊಳ್ಳುವುದು, ಯಾರನ್ನಾದರೂ ಈ ವೃತ್ತಿಗೆ ಬಲವಂತದಿಂದ ತಳ್ಳುವುದು ಹಾಗೂ ಸಲಿಂಗಕಾಮದಲ್ಲಿ ತೊಡಗುವುದು ಮಾತ್ರ ಅಪರಾಧವೆನಿಸಿಕೊಳ್ಳುತ್ತದೆ.

ವೇಶ್ಯಾವಾಟಿಕೆ ಜಗತ್ತಿನಾದ್ಯಂತ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕೆಲವು ದೇಶಗಳಲ್ಲಿ ಅದು ಲೀಗಲೈಜ್ ಆಗಿದೆ. ನಮ್ಮ ದೇಶದಲ್ಲಿ ವೇಶ್ಯಾವಾಟಿಕೆ ಅಪರಾಧವಾಗಿರುವುದರಿಂದ ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ಈ ಅಪರಾಧಕ್ಕಾಗಿ ಚಿಕ್ಕಪುಟ್ಟವರು ಸಿಕ್ಕಿಬಿದ್ದು ಬಂಧನಕ್ಕೊಳಗಾಗುತ್ತಾರೆಯೇ ವಿನಃ ಹೆಚ್ಚಿನ ಬಾರಿ ಕಾನೂನು ಕಾಯುವವರ ಮಾಫಿಗಳು, ನಿರ್ಲಕ್ಷ್ಯಗಳು, ಒಳ ಒಪ್ಪಂದಗಳು, ರಾಜೀಸೂತ್ರಗಳು, ಮಧ್ಯಸ್ಥಿಕೆ, ಕಪ್ಪಕಾಣಿಕೆ ಅಥವಾ ದೇಹಸುಖ ಸಂದಾಯಗಳಿಂದಲೇ ಬಹುತೇಕ ಈ ಅಪರಾಧಗಳು ಮುಚ್ಚಿಹೋಗುತ್ತವೆ!

ಹಸಿವಿಗೆ ಒಂದು ವೃತ್ತಿ, ಒಂದು ಕೆಲಸ, ಇರಲು ಒಂದು ನೆರಳು ಇಲ್ಲದ ಈ ಸಮಾಜದಲ್ಲಿ ಹೆಣ್ಣು ಅಸಹಾಯಕ ಸ್ಥಿತಿಗೆ ತಳ್ಳಲ್ಪಟ್ಟು ರೋಗಗ್ರಸ್ತ ಸಮಾಜ ನಿರ್ಮಾಣಗೊಳ್ಳುತ್ತಿದೆ. ಜತೆಗೆ ನಮ್ಮ ನ್ಯಾಯಸ್ಥಾನಗಳು ನೀಡಿರುವ ಯಾವುದೇ ತೀರ್ಪು ಇದನ್ನು `ವೃತ್ತಿ’ ಎಂದು ಪರಿಗಣಿಸಿಲ್ಲ. ಬದಲಿಗೆ ಅದನ್ನು `ಲೈಂಗಿಕ ಜೀತ’ವೆಂದು ಪ್ರತಿಪಾದಿಸಿವೆ! ವೇಶ್ಯಾವಾಟಿಕೆಯಲ್ಲಿ ಅನಿವಾರ್ಯವಾಗಿ ತೊಡಗುವ ಮಹಿಳೆ-ಮಕ್ಕಳ ಪರವಾಗಿಯೇ ಶಾಸನ ಮತ್ತು ಕಾನೂನುಗಳ ರಚನೆಯಾಗಿದೆ. ಇದನ್ನು ವಾಣಿಜ್ಯೀಕರಣಗೊಳಿಸುವ ಚಟುವಟಿಕೆಯಲ್ಲಿ ತೊಡಗಿರುವ ಪುರುಷ-ಮಹಿಳೆ ಇಬ್ಬರೂ ಅಪರಾಧಿಗಳೆನಿಸಿಕೊಳ್ಳುತ್ತಾರೆ.

ಹಾಗೆಯೇ ವ್ಯಾಪಕವಾಗಿ ಹರಡುತ್ತಿರುವ ಹೆಚ್ಐವಿ, ಏಡ್ಸ್ನಂತಹ ಮಾರಕ ರೋಗಗಳು ವೇಶ್ಯಾವಾಟಿಕೆಯ ದೊಡ್ಡ ಬಳುವಳಿ. ಇದನ್ನು ಮೂಲದಲ್ಲಿ ಚಿವುಟಿ ಹಾಕದೆ, ಸಕರ್ಾರವೇ ತನ್ನ ಅಂಗ ಸಂಸ್ಥೆಯಾದ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಯ ಮೂಲಕ ಈ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಎನ್ಜಿಓಗಳ ಸಹಕಾರದೊಂದಿಗೆ ವೇಶ್ಯಾವಾಟಿಕೆಯಲ್ಲಿ ತೊಡಗಿರುವವರನ್ನು ಹುಡುಕಿ ನೋಂದಣಿ ಮಾಡಿಸಿ, ಅವರಿಗೆ ಕಾಂಡೋಮ್ ವಿತರಣೆ, ರಕ್ತ ಮತ್ತು ನಿಯಮಿತ ಆರೋಗ್ಯ ತಪಾಸಣೆ, ಆಪ್ತಸಮಾಲೋಚನೆ, ಇದಕ್ಕೆ ಸಂಬಂಧಿಸಿದ ಏಡ್ಸ್, ಹೆಚ್ಐವಿ, ಇನ್ನಿತರ ಗುಪ್ತ ರೋಗಗಳ ನಿರ್ವಹಣೆಯ ತರಬೇತಿ ಮತ್ತು ಚಿಕಿತ್ಸೆ ನೀಡುವ ಮೂಲಕ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ನೆರವಾಗುತ್ತಿದೆ. ಅಂದರೇ `ಸುರಕ್ಷಿತ ಲೈಂಗಿಕತೆಗೆ’ ಮಾತ್ರ ಸಹಕಾರಿಯಾಗಿವೆ. ಈ ಎಲ್ಲಾ ವ್ಯವಸ್ಥೆಗಾಗಿಯೇ ಬಜೆಟ್ನಲ್ಲಿ ಲಕ್ಷಾಂತರ ರೂಪಾಯಿ ಹಣವನ್ನೂ ಪ್ರತ್ಯೇಕವಾಗಿ ತೆಗೆದಿರಿಸುತ್ತಿವೆ. ರೋಗಗಳ ನಿಯಂತ್ರಣದ ಹೆಸರಿನಲ್ಲಿ ಸದ್ದಿಲ್ಲದೇ ಬೇಡಿಕೆ ಮತ್ತು ಪೂರೈಕೆಗಳನ್ನೂ ನಿರ್ವಹಿಸಲಾಗುತ್ತಿದೆ.

ಕರ್ನಾಟಕದಲ್ಲಿ ಸದ್ಯ 2.50ಲಕ್ಷಕ್ಕೂ ಅಧಿಕ ಹೆಚ್ಐವಿ ಪೀಡಿತರಿದ್ದಾರೆ. 1998-2013ರವರೆಗೆ 29000 ರೋಗಿಗಳು ಮೃತಪಟ್ಟಿದ್ದಾರೆ! ಸೋಂಕಿನ ವ್ಯಾಪಕತೆ, ಪೀಡಿತರು ಮತ್ತು ಜನಸಂಖ್ಯೆಯ ದೃಷ್ಟಿಯಿಂದ ದೇಶದಲ್ಲೇ ಕರ್ನಾಟಕ ಮೂರನೆಯ ಸ್ಥಾನದಲ್ಲಿದೆ! ಕರ್ನಾಟಕದಲ್ಲಿ ಇದೇ ನವೆಂಬರ್ 2012ರವರೆಗೆ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಯಲ್ಲಿ ತೀವ್ರ ಅಪಾಯದ ಗುಂಪಿನಲ್ಲಿ ನೋಂದಣಿಯಾದವರು 79169 ಮಂದಿ. ಸಲಿಂಗಕಾಮಿ ಪುರುಷರ ಸಂಖ್ಯೆ 25244. ವೇಶ್ಯೆಯರಲ್ಲಿ ಹೆಚ್ಚಿನವರು ಬಡವರು ಮತ್ತು ಹಿಂದುಳಿದ ಜಾತಿ-ಮತ, ವರ್ಗದವರೆಂಬುದು ಅಧ್ಯಯನದಿಂದ ತಿಳಿದುಬಂದಿದೆ. ಆದರೆ ದೇಶದಲ್ಲಿ ಒಟ್ಟು ಒಂಬತ್ತು ಲಕ್ಷ ಮಂದಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬುದೇ ಶಂಕಾಸ್ಪದ. ಏಕೆಂದರೇ 2010ರ ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ವರದಿಯಂತೆ ಆಗಲೇ 30 ಲಕ್ಷಕ್ಕೂ ಹೆಚ್ಚಿನ ಮಹಿಳೆಯರು ವೇಶ್ಯಾವಾಟಿಕೆಯಲ್ಲಿದ್ದರು. ಈಗದರ ಸಂಖ್ಯೆ ದುಪ್ಪಟ್ಟಾಗಿರುವ ಸಾಧ್ಯತೆಗಳಿವೆ!. ವಿಶ್ವಸಂಸ್ಥೆಯ `ಮಾನವಹಕ್ಕುಗಳ ವಾಚ್’ನ ವರದಿಯಂತೆ ಇದುವರೆಗೆ ಭಾರತದ ಸುಮಾರು 150 ಲಕ್ಷಕ್ಕೂ ಹೆಚ್ಚು ಹೆಣ್ಣುಮಕ್ಕಳು ದೇಶ-ವಿದೇಶಗಳಲ್ಲಿ ವೇಶ್ಯಾವಾಟಿಕೆಗೆ ದೂಡಲ್ಪಟ್ಟಿದ್ದಾರೆ! ಇದರಲ್ಲಿ 40%ಗಿಂತ ಹೆಚ್ಚಿನವರು ಅಪ್ರಾಪ್ತ ಹೆಣ್ಣುಮಕ್ಕಳು..!

ಒಂದು ವೇಳೆ- ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವುದಾದರೇ, ಇಲ್ಲಿಯವರೆಗೆ ಕಾನೂನುಬದ್ಧಗೊಳಿಸಿರುವ ಬೇರೆ ದೇಶಗಳಲ್ಲಿ ಸಾಮಾಜಿಕ ಸ್ವಾಸ್ತ್ಯ ಹೇಗಿದೆ? ಈ ಕುರಿತೂ ವಿಸ್ತ್ರತ ಅಧ್ಯಯನಗಳಾಗಬೇಕಿದೆ. ನೆದರ್ ಲ್ಯಾಂಡ್, ಜರ್ಮನಿ, ನ್ಯೂಜಿಲೆಂಡ್, ಥಾಯ್ಲೆಂಡ್ನಂತಹ ದೇಶಗಳಲ್ಲಿ ಹೆಣ್ಣುಮಕ್ಕಳ ಅಕ್ರಮ ಸಾಗಾಣಿಕೆ ಮತ್ತು ಮಾರಾಟ ಹೆಚ್ಚಿರುವುದನ್ನು ಅಧ್ಯಯನಗಳು ದಾಖಲಿಸಿವೆ. ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸುವುದೆಂದರೆ ಅದನ್ನು ಪ್ರೋತ್ಸಾಹಿಸಿದಂತೆಯೇ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಜಾಗತೀಕರಣದ ವಿಕೃತಿಗಳು, ಸೆಕ್ಸ್ ಟೂರಿಸಂ ಇಂದು ಬಹಳಷ್ಟು ದೇಶಗಳ ಹೆಚ್ಚಿನ ಆದಾಯ ಮೂಲವಾಗಿರುವುದರಿಂದ ಹೆಣ್ಣನ್ನು ಭೋಗದವಸ್ತುವೆಂದೂ, ಸರಕೆಂದೂ ಭಾವಿಸಿ ಅವಳಿಗೆ ಸಂಬಂಧಿಸಿದ ಅಪಾಯಗಳನ್ನು ನಿರ್ಲಕ್ಷಿಸಿ ಸರ್ಕಾರಗಳೇ ನಡೆಸುವ ವೇಶ್ಯಾವಾಟಿಕೆಯಾಗಿ ಪರಿಣಮಿಸಿಬಿಡುತ್ತವೆ..!

ಭಾರತದಲ್ಲಿ ಮಡಿವಂತಿಕೆ ಮಾತಾಡುವವರ ಕಣ್ಣಳತೆಯಲ್ಲಿಯೇ ದೇವದಾಸಿ, ಜೋಗಿಣಿ, ಬಸವಿ ಪದ್ಧತಿಯಂತ ಅನಾಚಾರಗಳು ನಡೆಯುತ್ತವೆ. ಅವುಗಳನ್ನು ಕಣ್ಣಲ್ಲೇ ಸವಿಯುವ ಮಡಿವಂತರು ವೇಶ್ಯಾವಾಟಿಕೆಯನ್ನು ಲೀಗಲೈಜ್ ಮಾಡ್ತೀವಿ ಎಂದಾಗ, `ಯಪ್ಪಾ.. ಹಂಗೆಲ್ಲಾ ಮಾಡಿಬಿಟ್ಟೀರಿ’ ಎನ್ನುತ್ತಲೇ, ಕಳ್ಳ ಕಿಂಡಿಯಿಂದ ಹೋಗಿ ಕಾರುಬಾರು ಮುಗಿಸಿಬರುತ್ತಾರೆ. ಮೊದಲೇ ಹೇಳಿದಂತೆ- ವೇಶ್ಯಾವಾಟಿಕೆಯನ್ನು ಕಾನೂನಬದ್ಧಗೊಳಿಸಿರುವ ದೇಶಗಳ ಪರಿಸ್ಥಿತಿಯನ್ನು ಅಧ್ಯಯನ ಮಾಡಿ, ಎಲ್ಲವೂ ಅಂದುಕೊಂಡಂತೆ ಸೋಬಿಯಾಗಿದೆ ಎಂದು ಮನದಟ್ಟಾದ ಮೇಲೆ ಸೂಕ್ತ ನಿರ್ಧಾರಕ್ಕೆ ಬರಬೇಕಿದೆ. ಏಕೆಂದರೇ ಅದೇನೇ ನಿಷಿದ್ಧ ಶಿಕ್ಷೆಗಳಿದ್ದರೂ ಈ ದೇಶದಲ್ಲಿ ವೇಶ್ಯಾವಾಟಿಕೆಗೆ ಕಡಿವಾಣ ಬಿದ್ದಿಲ್ಲ. ಕಾನೂನು ಕಾಯುವವರು ಪೊಗದಸ್ತಾಗಿ ದುಂಡಾಗಾಗುತ್ತಿದ್ದಾರೆ. ಕಾಮಾಟಿಪುರದಂತ ಅಡ್ಡೆಗಳು ಖುಲ್ಲಾ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿವೆ. ಅದರ ಬದಲು ಸೂಕ್ತ ಮುಂಜಾಗರೂಕತೆ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಸೀಮಿತ ಪ್ರದೇಶದಲ್ಲಿ ನಡೆಸಿಕೊಳ್ಳಿ ಅಂತ ಲೈಸೆನ್ಸ್ ಕೊಟ್ಟುಬಿಡುವುದು ಒಳಿತು..!

  •  ರಾ ಚಿಂತನ್.

POPULAR  STORIES :

ಪಾಕಿಸ್ತಾನಕ್ಕಾಗಿ ಖಂಡೀಲ್ ಬಲೋಚ್ ಬೆತ್ತಳಾಗುತ್ತಾಳಂತೆ..!? #Video

`ಆ್ಯಮ್ ಸಾರೀ ಗೇಲ್’ ಅಂದ ಬಿಗ್ಬಿ ಅಮಿತಾಬ್..!? ಅಮಿತಾಬ್ ಮಾಡಿದ ತಪ್ಪೇನು..?

ಇಸ್ಲಾಂ ಮಹಾನ್ ಧರ್ಮ ಎಂದ ನಮೋ..!? ಪಾಕಿಸ್ತಾನ ಮನಃಸ್ಥಿತಿ, ಭಾರತ ಯಥಾಸ್ಥಿತಿ..!?

ಪ್ರೀತಿಗೆ ಬೆಂಕಿಯಿಟ್ಟ ಪಾಗಲ್ ಪ್ರೇಮಿ..! ಪ್ರೀತಿ `ಬೆಂಕಿ’ ಹುಷಾರು..!?

ಪಾಕ್ ನಲ್ಲೂ ಹೋಳಿ, ದೀಪಾವಳಿಗೆ ಸಾರ್ವತ್ರಿಕ ರಜೆ..!

ಸ್ವಲ್ಪ ನಿದ್ರೆಭಾಗ್ಯವನ್ನೂ ಕರುಣಿಸಿ, ಪ್ಲೀಸ್…!

ಥರ್ಡ್ ವರ್ಲ್ಡ್ ವಾರ್ ಗೆ ಕೊರಿಯ ಫೌಂಡೇಶನ್..!?

ಬೆತ್ತಲಾದ ಓವೈಸಿ.. ಬಟ್ಟೆ ಮುಚ್ಚಿಕೊಂಡ ಅಫ್ರಿದಿ..!!

ಪೆಟ್ರೋಲ್ ರೇಟು.. ಮೋದಿ ಏಟು..!? ಒಂದು ಲೀಟರ್ ಪೆಟ್ರೋಲ್ಗೆ ಹನ್ನೆರಡು ರೂಪಾಯಿ..?!!

ಅಬ್ಬಾ ಜಸ್ಟ್ ಮಿಸ್..! ಈ ಮಹಿಳೆಯರ ಅದೃಷ್ಟ ನೆಟ್ಟಗಿತ್ತು..! ಇಲ್ದೇ ಹೋಗಿದ್ರೆ?

LEAVE A REPLY

Please enter your comment!
Please enter your name here