ಅವನಿಗೆ ಅವಳ ಪರಿಚಯವಾಯಿತು. ಆ ಪರಿಚಯ ಸ್ನೇಹವಾಗಿ ಬೆಳೆಯಿತು. ಆ ಸ್ನೇಹ ಪ್ರೀತಿಯಾಗಿ ಬೇರೂರಿತು. ಪ್ರೀತಿಸಿ ಮದುವೆಯೂ ಆದ…! ಆದರೆ, ಹನಿಮೂನ್ ಬಳಿಕ ಪೊಲೀಸ್ ಠಾಣೆ ಮೆಟ್ಟಲೇರಿದ…! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ…!
ಅವನ ಹೆಸರು ಯಾಮೀನ್ ಸೈಯದ್ ಅಂತ.
ವಯಸ್ಸು 22. ಮುಂಬೈನ ಗೋವಂಡಿಯ ನಿವಾಸಿ. ತಾನು ಓದುತ್ತಿದ್ದ ಕಾಲೇಜಿನ ಯುವತಿಯೊಂದಿಗಿನ ಪರಿಚಯ ಸ್ನೇಹ…ಆ ಸ್ನೇಹ ಕೆಲವೇ ದಿನಗಳಲ್ಲಿ ಪ್ರೀತಿಯಾಗಿ ಮಾರ್ಪಟ್ಟಿತ್ತು. ಇಬ್ಬರ ಪ್ರೀತಿ ವಿಷಯ ಮನೆಯಲ್ಲಿ ತಿಳಿದಿದೆ. ಎರಡೂ ಕುಟುಂಬಸವರು ಒಪ್ಪಿ ಮದುವೆಯನ್ನೂ ಮಾಡಿಸಿದ್ದಾರೆ. ನಂತರ ಹನಿಮೂನ್ ಗೆ ಹೋಗಿದ್ದಾರೆ. ಹನಿಮೂನ್ ನಲ್ಲಿ ಯಾಮೀನ್ ಸೈಯದ್ ಗೆ ತಾನು ಪ್ರೀತಿಸಿ ಮದ್ವೆ ಆಗಿರೋದು ಹುಡುಗಿಯನ್ನಲ್ಲ….ಹುಡುಗನನ್ನು ಎಂಬುದು ತಿಳಿದಿದೆ…!
ಪ್ರೀತಿಸುತ್ತಿದ್ದ ದಿನಗಳಲ್ಲಿ ಆಕೆ ಯಾವಾಗಲೂ ನನ್ನಿಂದ ದೂರ ಇರುತ್ತಿದ್ದಳು. ಕಾರಣ ಕೇಳಿದರೆ ಅನಾರೋಗ್ಯ, ಆಪರೇಷನ್ ಆಗಿದೆ ಎಂದು ಹೇಳುತ್ತಿದ್ದಳು. ಹನಿಮೂನ್ ಗೆ ಹೋದಾಗ ಆಕೆ ಹುಡುಗಿಯಲ್ಲ ಹುಡುಗ ಎಂದು ಗೊತ್ತಾಯ್ತು. ಇದು ನನಗೆ ಮಾಡಿದ ಮೋಸ.ಇದನ್ನು ತಿಳಿದ ನನ್ನ ತಂದೆಗೂ ಶಾಕ್ ಆಗಿದೆ ಎಂದು ಸೈಯದ್ ಹೇಳಿದ್ದಾನೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವುದಾಗಿ ಆತ ತಿಳಿಸಿದ್ದಾನೆ.