ಪ್ರೀತಿಗೆ ಕಣ್ಣಿಲ್ಲ ಎನ್ನುವ ಮಾತು ಅಕ್ಷರಶಃ ಸತ್ಯ. ಏಕೆಂದರೆ ಪ್ರೇಮಿಗಳು ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ಪ್ರೇಮ ಪತ್ರ ಕಳುಹಿಸುತ್ತಿದ್ದುದು ಇತಿಹಾಸ. ಈಗ ಮೊಬೈಲ್ ಗಳು ಬಂದ ಮೇಲಂತೂ ಅದರಲ್ಲೇ ಪ್ರೇಮ ನಿವೇದಿಸಿಕೊಳ್ಳುತ್ತಾರೆ. ಆಗ ಹುಡುಗಿ ಒಪ್ಪಿದರೆ ಸರಿ. ಇಲ್ಲದಿದ್ದರೆ ಕಪಾಳಕ್ಕೆ ಬೀಳಬಹುದಾದ ಏಟು ಕೂಡಾ ತಪ್ಪುತ್ತದೆ. ಆದ್ದರಿಂದ ಹೆಚ್ಚಿನ ಪ್ರೇಮಿಗಳು ಇದೀಗ ಮೊಬೈಲ್ ನಲ್ಲೇ ತಮ್ಮ ಮನದ ಮಾತು ಹೇಳಿಕೊಳ್ಳುತ್ತಾರೆ. ಇದರಿಂದ ಪ್ರೇಮಪತ್ರಗಳು ಇತಿಹಾಸ ಪುಟ ಸೇರುತ್ತಿವೆ. ಆದರೆ ಇಲ್ಲೊಬ್ಬ ಪ್ರೇಮಿ ಇದ್ದಾನೆ ಈತ ಮದುವೆಯಾಗಿ 40 ವರ್ಷವಾದರೂ ಕೂಡಾ ತನ್ನ ಪತ್ನಿಗೆ ಪ್ರೇಮ ಪತ್ರ ಬರೆಯುತ್ತಲೇ ಇದ್ದಾನೆ. ಅದೂ ಕೂಡಾ ದಿನಕ್ಕೊಂದರಂತೆ..!
ಯೆಸ್.. ಅಮೆರಿಕಾದ ನ್ಯೂಜರ್ಸಿಯ ನಿವಾಸಿ 74 ವರ್ಷದ ಬಿಲ್ ಬ್ರೆಸ್ನಾನ್ ತನ್ನ ಪತ್ನಿ 74 ವರ್ಷದ ಕರ್ಸ್ಟನ್ ಗೆ ದಿನನಿತ್ಯ ಪ್ರೇಮಪತ್ರ ಬರೆಯುತ್ತಿದ್ದಾನೆ. ಅದೂ ಕೂಡಾ ಬರೋಬ್ಬರಿ 40 ವರ್ಷದಿಂದ ಎಂಬುದು ವಿಶೇಷ..! ಇಲ್ಲಿಯವರೆಗೂ ಆತ ಬರೆದಿರುವ ಪ್ರೇಮ ಪತ್ರಗಳನ್ನು 25 ಬಾಕ್ಸ್ ನಲ್ಲಿ ಇಡಲಾಗಿದ್ದು, ಅವುಗಳ ಸಂಖ್ಯೆ 10 ಸಾವಿರಕ್ಕೂ ಹೆಚ್ಚಿದೆ. ಪ್ರತಿದಿನ ಪತ್ನಿಗೆ ಪ್ರೇಮ ಪತ್ರ ಬರೆಯುವ ಆತ, ವರ್ಷ, ತಾರೀಕು, ದಿನವನ್ನು ನಮೂದಿಸುತ್ತಾನೆ. ಇದರಲ್ಲಿ ಬಿಲ್ ಸಹಿ ಇರುವುದಲ್ಲದೇ ಪ್ರತಿಯೊಂದು ಪತ್ರದಲ್ಲೂ ಲವ್ ಯು ಡಾರ್ಲಿಂಗ್ ಎಂದು ಕೊನೆಯಲ್ಲಿ ಬರೆಯುತ್ತಾನೆ.
1974 ರಲ್ಲಿ ಒಂದೇ ತರಗತಿಯಲ್ಲಿ ಓದುತ್ತಿದ್ದ ಇಬ್ಬರೂ ಪ್ರೇಮ ಪಾಶಕ್ಕೆ ಬಿದ್ದರಂತೆ. ರೈಲಿನಲ್ಲಿ ಸಂಚರಿಸುತ್ತಿದ್ದ ಅವರು, ಅಲ್ಲಿ ಸಿಗುವ ಕಾಗದ, ಕರವಸ್ತ್ರವನ್ನು ಪ್ರೇಮ ಪತ್ರ ಬರೆಯುವುದಕ್ಕೆ ಬಳಸುತ್ತಿದ್ದರಂತೆ. ನಂತರ ಅವರ ಪ್ರೇಮ ಮದುವೆಯಾದ ಬಳಿಕ ಅಂತ್ಯಗೊಳ್ಳುತ್ತದೆ ಎಂದೇ ಎಲ್ಲರು ಭಾವಿಸಿದ್ದರು. ಆದರೆ ಅದು ಹಾಗಾಗಲಿಲ್ಲ. ಬಿಲ್ ಬ್ರೆಸ್ನಾನ್ ತನ್ನ ಪತ್ನಿಗೆ ಪ್ರೇಮ ಪತ್ರ ಬರೆಯುವುದನ್ನು ಮುಂದುವರೆಸಿಕೊಂಡೇ ಬಂದ. ಅದು ಇಂದಿಗೂ ಮುಂದುವರೆದುಕೊಂಡು ಬಂದಿದೆ..!
ಪ್ರೀತಿ ಮದುವೆಯಲ್ಲಿ ಅಂತ್ಯಗೊಳ್ಳುತ್ತದೆ ಎನ್ನುವವರೇ ಹೆಚ್ಚು. ಅದರಲ್ಲೂ ಮದುವೆಯ ಬಳಿಕ ಪ್ರೀತಿ ಮರೆತುಹೋಗುವವರು ಇನ್ನೂ ಹೆಚ್ಚು. ಆದರೆ ಬಿಲ್ ಬ್ರೆಸ್ನಾನ್ ಮಾತ್ರ ಆ ಮಾತಿಗೆ ಅಪವಾದ. ಇಂದಿಗೂ ತನ್ನ ಪತ್ನಿಗೆ ಪ್ರೇಮ ಪತ್ರ ಬರೆಯುವ ಮೂಲಕ ಸುಖ-ಸಂಸಾರ ನಡೆಸುತ್ತಿದ್ದಾನೆ.
- ರಾಜಶೇಖರ ಜೆ
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಇಬ್ಬರ ಜೇಬಲ್ಲೂ ಉಳಿದಿದ್ದು ಮುನ್ನೂರು ರೂಪಾಯಿ ಮಾತ್ರ..! ಆದ್ರೆ…..
ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!
ಇವರು ದಿನನಿತ್ಯ 100 ಮಂದಿಗೆ ಅನ್ನ ನೀಡುವ ಮಹಾದಾನಿ..! ಹಸಿದವರ ಹಸಿವನ್ನು ನೀಗಿಸೋ ಅನ್ನದಾತ ಅಜರ್..!