No menu items!
12.4 C
Munich
Wednesday, April 29, 2026

ಪಾಕ್ ಅಜ್ಜಿ ತವರಿಗೆ ಹೋಗಲು ನೆರವಾದ ಸುಷ್ಮಾಸ್ವರಾಜ್..!

Must read

ಪಾಕ್ ನಿಂದ ಭಾರತಕ್ಕೆ ತೀರ್ಥಯಾತ್ರೆಗಂತ ಅಜ್ಜಿಯೊಬ್ಬಳು ಬರ್ತಾಳೆ..! ಕಾರಣಾಂತರದಿಂದ ಆಕೆ ಭಾರತದಲ್ಲೇ ಉಳಿಯ ಬೇಕಾಗುತ್ತೆ..! ಮನೆ-ಮಠ, ಮಕ್ಕಳೆಲ್ಲಾ ಪಾಕ್ ನಲ್ಲಿ ಇಲ್ಲಿ ಈಕೆ ಒಬ್ಬಳೇ ನೆಂಟರ ಮನೆಯಲ್ಲಿ..! ನೆಂಟರ ಮನೆಯಲ್ಲಿ ಎಷ್ಟು ದಿವಸ ಅಂತ ಇರ್ತಾಳೆ..!? ತವರು ಪಾಕ್ ಗೆ ಹೋಗಲೂ ಆಗ್ತಾ ಇರಲ್ಲ..! ಸಾಮಾಜಿಕ ಜಾಲತಾಣಗಳಲ್ಲಿ ಅಜ್ಜಿಯ ಈ ಕಷ್ಟದ ಬಗ್ಗೆ ಸುದ್ದಿ ವೈರಲ್ ಆಗುತ್ತೆ..! ವಿದೇಶಾಂಗ ಸಚಿವರಿಗೆ ಅವರಿಗೂ `ಅಜ್ಜಿ ಕಥೆ’ ಗೊತ್ತಾಗುತ್ತೆ..! ತಕ್ಷಣವೇ ಅವರನ್ನು ಪಾಕ್ ಗೆ ಕಳುಹಿಸ್ತಾರೆ..!
ಇದು ಬಜರಂಗಿ ಭಾಯಿಜಾನ್ ಸಿನಿಮಾದಂಥಾ ಇನ್ನೊಂದು ಸಿನಿಮಾ ಅಲ್ಲ..! ಅದನ್ನೇ ಯಾರೂ ಕನ್ನಡಕ್ಕೆ ಹಿಂಗೆ ಕಾಪಿ ಅಂಡ್ ಪೇಸ್ಟ್ ಮಾಡ್ತಾ ಇಲ್ಲ..! ಬದಲಾಗಿ ಇದೊಂದು ರಿಯಲ್ ಸ್ಟೋರಿ..!
2014ರಲ್ಲಿ ಪಾಕಿಸ್ಥಾನದಿಂದ 80 ವರ್ಷದ ಅಜ್ಜಿಯೊಬ್ಬಳು ಭಾರತಕ್ಕೆ ಬರ್ತಾಳೆ..! ಹೆಸರು ` ಹವಾದೇವಿ’. ತನ್ನ ಮಗ ಮತ್ತು ಸೊಸೆ ಜೊತೆಗೆ ಭಾರತಕ್ಕೆ ಬಂದ ಆಕೆ ತೀರ್ಥಯಾತ್ರೆ ಸಲುವಾಗಿ ಹರಿದ್ವಾರಕ್ಕೆ ಹೋಗಿ ನಂತರ ರಾಜಸ್ಥಾನದ ಜೋದಾಪುರಕ್ಕೆ ಸಂಬಂಧಿಕರ ಮನೆಗೆ ಹೋಗ್ತಾಳೆ..! ದುರದೃಷ್ಟಕರ ಬೆಳವಣಿಗೆ ಇಂದಾಗಿ ಅವರು ತಾಯಿನಾಡು ಪಾಕ್ಗೆ ಹೋಗೋಕೆ ಆಗಲ್ಲ..! ಭಾರತದಲ್ಲೇ ಉಳಿದುಕೊಳ್ಳ ಬೇಕಾಗಿ ಬರುತ್ತೆ..! ಒಂದು-ಒಂದುವರೆ ವರ್ಷವಾದರೂ ಪಾಕ್ ನಲ್ಲಿದ್ದ ಕುಟುಂಬವನ್ನು ಸೇರಲು ಆಗಲೇ ಇಲ್ಲ..!ಯಾವ ಅಧಿಕಾರಿಗಳನ್ನು ಕೇಳಿದರೂ ಪ್ರಯೋಜನ ಆಗ್ಲಿಲ್ಲ..! ಅಜ್ಜಿ ಅಯ್ಯೋ ನಾನಿನ್ನೂ ನನ್ನ ಕುಟುಂಬದವರೊಡನೆ ಪಾಕ್ ನಲ್ಲಿ ಕೊನೆಯ ದಿನಗಳನ್ನು ಕಳೆಯಲು ಆಗಲ್ವಲ್ಲಾ ಎಂದು ಬೇಜಾರಲ್ಲಿಯೇ ಕಾಲಕಳೀತಾ ಇರ್ಬೇಕಾದ್ರೆ ಮಾದ್ಯಮದವರಿಗೆ ಈಕೆಯ ಕಥೆ ಗೊತ್ತಾಗಿ ಪ್ರಸಾರ ಮಾಡುತ್ತವೆ..! ಸುದ್ದಿ ಸೋಶಿಯಲ್ ಮೀಡಿಯಾದಲ್ಲಂತೂ ಸಿಕ್ಕಾಪಟ್ಟೆ ಗಿರಿಕಿ ಹೊಡೆಯೋಕೆ ಶುರು ಆಗುತ್ತೆ..! ವಿಷಯ ವಿದೇಶಾಂಗ ಸಚಿವೆ `ಸುಷ್ಮಾ ಸ್ವರಾಜ್’ ಅವರನ್ನೂ ತಲುಪುತ್ತೆ..! ತಕ್ಷಣವೇ ಸುಷ್ಮಾ ಸ್ವರಾಜ್ ಅವರು ಅಜ್ಜಿಯನ್ನು ತವರು ಪಾಕ್ ಗೆ ಕಳುಹಿಸಿ ಕೊಡುವ ವ್ಯವಸ್ಥೆಯನ್ನು ಮಾಡ್ತಾರೆ..! ಮೊನ್ನೆ 15ನೇ ತಾರೀಖು ಸ್ವತಃ ಸುಷ್ಮಾ ಸ್ವರಾಜ್ ಅವರೇ ಹವಾದೇವಿ ಪಾಕ್ಗೆ ಹಿಂತಿರುಗಿದ್ದಾರೆಂಬುದನ್ನು ಟ್ವೀಟ್ ಮಾಡಿದ್ದಾರೆ..

 

 

  • ಶಶಿಧರ ಡಿ ಎಸ್ ದೋಣಿಹಕ್ಲು

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಇಬ್ಬರ ಜೇಬಲ್ಲೂ ಉಳಿದಿದ್ದು ಮುನ್ನೂರು ರೂಪಾಯಿ ಮಾತ್ರ..! ಆದ್ರೆ…..

ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!

ಇವರು ದಿನನಿತ್ಯ 100 ಮಂದಿಗೆ ಅನ್ನ ನೀಡುವ ಮಹಾದಾನಿ..! ಹಸಿದವರ ಹಸಿವನ್ನು ನೀಗಿಸೋ ಅನ್ನದಾತ ಅಜರ್..!

ಈ ಕನ್ನಡತಿ ಆಟೋ ಓಡಿಸುತ್ತಲೇ ಐಎಎಸ್ ಗೆ ತಯಾರಿ ನಡೆಸುತ್ತಿದ್ದಾರೆ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article