ಅಭಿಮಾನಿಗಳು ಅವರ ನೆಚ್ಚಿನ ಸ್ಟಾರ್ ಗಳಿಗಾಗಿ ಚಿತ್ರ ವಿಚಿತ್ರ ಸೀನ್ ಕ್ರಿಯೇಟ್ ಮಾಡುವುದನ್ನು ನಾವು ಆಗಾಗ್ಗೆ ನೋಡುತ್ತಿರುತ್ತೇವೆ.ಆದ್ರೆ ಈಗ ನಾವು ಹೇಳುತ್ತಿರೋ ವಿಷಯವನ್ನು ನೀವು ಈ ಹಿಂದೆಂದೂ ಕೇಳಿರಲಾರಿರಿ.
ಮುಂಬಯಿಯ ಜುಹು ಪೋಲೀಸರು ಬಿಗ್ ಬಿ ಅಮಿತಾಬ್ ಬಚ್ಚನ್ ಬಂಗಲೆಯೊಳಗೆ ಬಲವಂತವಾಗಿ ನುಗ್ಗಿದ ಆರೋಪದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಇದು ಬಿಗ್ ಬಿ ಯನ್ನು ಕಣ್ಣು ತುಂಬ ನೋಡುವುದಕ್ಕಾಗಲೀ,ಅವರ ಅಟೋಗ್ರಾಫ್ ಪಡೆಯಲು ಅಥವಾ ಅವರ ಜೊತೆ ಸೆಲ್ಫೀ ಕ್ಲಿಕ್ ಮಾಡಲಾಗಲೀ ಎಂದು ನೀವು ಭಾವಿಸಿದ್ದೀರಾದರೆ ಖಂಡಿತ ಅಲ್ಲ,ನಿಮ್ಮ ಯೋಚನೆ ತಪ್ಪು ಎಂದು ನಾವು ಹೇಳುತ್ತೇವೆ.
ಜಲ್ಸಾ ಅಮಿತಾಬ್ ರ ಜುಹೂ ನಲ್ಲಿ ನಿರ್ಮಿಸಲಾಗಿರೋ ಸುಮಾರು 10,125 ಚದರ ಅಡಿಯವರೆಗೂ ವ್ಯಾಪಿಸಿರೋ ಸುಂದರ 2 ಅಂತ್ತಸ್ಥಿನ ಬಂಗಲೆಯಾಗಿದ್ದು,ಇಲ್ಲಿ ಸ್ಟ್ರಿಕ್ಟ್ ಸೆಕ್ಯೂರಿಟಿ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ.ಇದಾಗ್ಯೂ ಇಲ್ಲಿಗೆ ನುಗ್ಗಿದ ಈ ಫಟಿಂಗನ ಸಾಹಸ ನೋಡಿ.
ಈ ವ್ಯಕ್ತಿಯು ಪೋಲೀಸರಿಗೆ ನೀಡಿದ ಮಾಹಿತಿಯಂತೆ ಈತನೊಬ್ಬ ಪ್ರೊಫೆಷನಲ್ ಸಿಂಗರ್ ಆಗಿದ್ದು,ಈತನಿಗೆ ಅಮಿತಾಭ್ ರಿಗಾಗಿ ಒಂದು ಭೋಜ್ ಪುರಿ ಹಾಡು ಹಾಡಬೇಕಿತ್ತಂತೆ.ಈತನ ಹೆಸರು ಬುಲೆಟ್ ಬನ್ವಾರಿಲಾಲ್ ಯಾದವ್,ಮೂಲತಃ ಬಿಹಾರದವನಾಗಿದ್ದು,ಈಗ ಪೂನಾದಲ್ಲಿ ನೆಲೆಸಿದ್ದಾನಂತೆ.
ಈ ವ್ಯಕ್ತಿ ಗೋಡೆ ಹತ್ತಿ ಜಿಗಿದು ಇನ್ನೇನು ಬಂಗಲೆಯೊಳಗೆ ಪ್ರವೇಶಿಸುವುದರಲ್ಲೇ ಈತ ದುರದೃಷ್ಟವಶಾತ್ ಸೆಕ್ಯೂರಿಟಿ ಕಣ್ಣಿಗೆ ಬಿದ್ದು,ಈತನನ್ನು ಜುಹೂ ಪೋಲೀಸರಿಗೆ ಒಪ್ಪಿಸಿದ್ದಾರೆ.ಹಾಗೂ ಈತನನ್ನು IPC 447 ರ ಕಾಯ್ದೆ ಅನ್ವಯ ನ್ಯಾಯಾಲಯದಲ್ಲಿ ನ್ಯಾಯಾಧೀಶರೆದುರು ಹಾಜರುಪಡಿಸಲಾಗುವುದು.
ಭಾನುವಾರ ಮಧ್ಯಾಹ್ನ ಸುಮಾರು 2 ಘಂಟೆಗೆ ಈ ಸಂಪೂರ್ಣ ಘಟನೆ ನಡೆದಿದ್ದು,ಬಂಗಲೆಯ ಹೊರ ಗೇಟಿನ ಆವರಣದಲ್ಲಿ ಜನ ಸಾಮಾನ್ಯರು,ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಸೇರಿದ್ರು.ಅವರು ಸೇರಿದ್ದು ಯಾಕೆಂದು ಹೇಳಬೇಕಾಗಿಲ್ಲ ಅಲ್ಲವೇ..ಮೆಗಾ ಸ್ಟಾರ್ ಅಮಿತಾಭರನ್ನು ಒಂದು ಕ್ಷಣವನ್ನಾದರೂ ನೋಡುವ ಕಾರಣಕ್ಕಾಗಿಯೇ ಅವರೆಲ್ಲಾ ಸೇರಿದ್ರು.
ನಿಜವಾಗಲೂ,ಅಂಥಾ ಟೈಟ್ ಸೆಕ್ಯೂರಿಟಿ ಬಗ್ಗೆ ಗೊತ್ತಿದ್ದೂ, ಜಲ್ಸಾ ಪ್ರವೇಶಿಸಬೇಕಾದರೆ ಭಯಂಕರ ಧೈರ್ಯ ಬೇಕು.ಈ ಬನ್ವಾರಿಲಾಲ್ ನ ಈ ವರ್ತನೆಗೆ ಕಾರಣ ಅಮಿತಾಭ್ ರ ಬಗೆಗಿನ ತೀವ್ರ ಅಭಿಮಾನದ ಹುಚ್ಚೇ ಅಥವಾ ತನ್ನ ಬಗ್ಗೆ ತನಗೇ ಪ್ರೀತಿ ಇಲ್ಲವೇ ಏನಂತೀರಾ?
POPULAR STORIES :
ಸಾಮಾಜಿಕ ಜಾಲತಾಣಗಳಲ್ಲಿ ರಾಕೇಶ್ ಸಿದ್ದರಾಮಯ್ಯಗೆ ನಿಂದನೆ : ಇಬ್ಬರ ವಿರುದ್ದ ಎಫ್‍ಐಆರ್ ದಾಖಲು
ಇನ್ಮುಂದೆ ಈಮೇಲ್ ಐಡಿಗಳು ನಮ್ಮ ದೇಶೀಯ ಭಾಷೆಗಳಲ್ಲಿ..! ಕನ್ನಡದಲ್ಲೂ ಈ ಮೇಲ್ ಐಡಿ ಕ್ರಿಯೇಟ್ ಮಾಡಬಹುದಂತೆ..!!
ಹುಷಾರ್ ಇನ್ಮುಂದೆ ಸರಕಾರವನ್ನು ಟೀಕಿಸುವಂತಿಲ್ಲ..!
ನನ್ ಮಗಂದ್… ನೀರ್‍ದೋಸೆ ಬ್ಯಾನ್ ಆಗ್ಬೇಕ್ ಅಷ್ಟೇ….!! ಯಾಕೆ ಗೊತ್ತಾ..?
ಮೆಟ್ರೋ ಸುರಂಗ ಮಾರ್ಗದಲ್ಲಿ ಭೂ ಕುಸಿತ…!
ನೇತಾಡುತ್ತಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ದಂಪತಿ
ನಿಜವಾದ ಪ್ರೀತಿಗೆ ಸಾವಿಲ್ಲವಂತೆ.. ಇದೊಂದು ಇಂಟ್ರೆಸ್ಟಿಂಗ್ ಪ್ರೇಮ್ ಕಹಾನಿ..!
ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಫೇಸ್‍ಬುಕ್‍ನಲ್ಲಿ ಮುಖ್ಯಮಂತ್ರಿಗಳ ರಾಜೀನಾಮೆ..!!