ದುಡ್ಡು ಮಾಡೋದು ಹೇಗೆ ಗೊತ್ತಾ..? ನೀವು ಬೇಜಾನ್ ದುಡ್ಡು ಮಾಡ್ಬೇಕೆ..? ಹಾಗಾದ್ರೆ ಈ ಸ್ಟೋರಿ ಓದಿ..!

Date:

ದುಡ್ಡು ಮಾಡೋದು ಹೆಂಗಪ್ಪಾ..! ಅನ್ನೋ ಚಿಂತೆ ಇಲ್ದೆ ಇರೋರು ಇದ್ದಾರೆಯೇ..? ದುಡ್ಡು ಇಲ್ಲದವನಿಗೂ ದುಡ್ಡು ಮಾಡೋ ಚಿಂತೆ.. ದುಡ್ಡು ಇದ್ದವನಿಗೆ ದುಡ್ಡನ್ನು ದುಪ್ಪಟ್ಟು ಮಾಡೋ ಚಿಂತೆ..! ಒಟ್ನಲ್ಲಿ ದುಡ್ಡಿನ ಚಿಂತೆ ಇಲ್ದೇ ಇರೋ ಜನರೇ ಇಲ್ಲ..! ದುಡ್ಡಿದ್ದವನೇ ದೊಡ್ಡಪ್ಪ..! ಸೋ, ನೀವು ಏನ್ ಮಾಡ್ತೀರೋ, ಬಿಡ್ತೀರೋ ದುಡ್ ಮಾತ್ರ ಮಾಡಿ..! ಹೆಂಗಪ್ಪಾ ದುಡ್ ಮಾಡೋದು ಅಂತ ತಲೆ ಕೆರೆದು ಕೊಳ್ತಾ ಇದ್ದೀರಾ..? ವೆರಿ ವೆರಿ ಸಿಂಪಲ್..! ಬಟ್ ಸ್ವಲ್ಪ ಮನಸ್ಸು ಮಾಡ್ಬೇಕು.. ಸ್ವಲ್ಪ ಪ್ರಯತ್ನನೂ ಪಡ್ಬೇಕು..! ನೀವು ಪ್ರಯತ್ನಪಡ್ತೀರಾ.., ದುಡ್ ಮಾಡ್ಕೊಳ್ತೀರ.., ನಿಮಗೆ ಒಳ್ಳೆಯದಾಗ್ಲಿ.., ನೀವು ಸಿಕ್ಕಾಪಟ್ಟೆ ದುಡ್ಡು ಮಾಡುವಂತಾಗಲಿ ಎಂಬ ಉದ್ದೇಶದಿಂದ ನಾವು ನಿಮಗೆ ಇವತ್ತು “ದುಡ್ಡು ಮಾಡೋದು ಹೇಗೆಂದು ತಿಳಿಸ್ತೀವಿ..! ದುಡ್ಡು ಮಾಡೋಕೆ ಸಿಕ್ಕಾಪಟ್ಟೆ ದಾರಿಗಳಿವೆ..! (ಅಡ್ಡದಾರಿ ಅಲ್ಲ ಗುರೂ..,) ಆ ದಾರಿಯಲ್ಲಿ ಕೆಲವೇ ಕೆಲವು ದಾರಿಗಳನ್ನು ನಿಮಗೆ ತಿಳಿಸ್ತೀವಿ..!

1.ಟಿ ಎಸ್ ಯು – ಸೋಷಿಯಲ್ ಮೀಡಿಯಾ :
ಎಲ್ಲರೂ ಜುಕರ್ ಬರ್ಗ್ ತರ ದುಡ್ಡೆಲ್ಲಾ ಅವರೇ ಇಟ್ಟುಕೊಳ್ಳಲ್ಲ..! ಕೆಲವರು ನಮಗೂ ಶೇರ್ ಕೊಡ್ತಾರೆ.!  ಇದು ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣ..! ಅದೇರೀತಿ ಇಲ್ಲಿಯೂ ಫೋಟೋ, ವೀಡಿಯೋಗಳನ್ನು ಅಪ್ ಲೋಡ್ ಮಾಡ್ಬಹುದು..! ಫ್ರೆಂಡ್ಸ್ಗಳನ್ನು ಹೊಂದಬಹುದು..! ಮೆಸೇಜ್ ಮಾಡ್ಬಹುದು..! ಇದಕ್ಕೆ ನೀವೂ ಮೆಂಬರ್ ಆದ್ರೆ ನೀವು ಮಾಡೋ ಪೋಸ್ಟ್, ಶೇರ್, ಲೈಕು, ಕಮೆಂಟಿಗೆ ಈ ವೆಬ್ ಸೈಟ್ ದುಡ್ಡು ಕೊಡುತ್ತೆ..! ಹೀಗೆ ಇತರೆ ಎಲ್ಲಾ ಸಾಮಾಜಿಕ ಜಾಲತಾಣಗಲ್ಲಿ ಲಭ್ಯವಾಗುವ ಎಲ್ಲಾ ಅವಕಾಶಗಳು ಇಲ್ಲಿಯೂ ಲಭ್ಯವಾಗುತ್ತೆ..! ನೀವೂ ಉಪಯೋಗಿಸುವುದಕ್ಕೆ ಪ್ರೋತ್ಸಾಹ ಧನದ ರೂಪದಲ್ಲಿ ನಿಮಗೆ ದುಡ್ಡನ್ನೂ ಕೊಡ್ತಾರೆ..! Click here to Join TSU and Follow Me

2. ಫ್ರೀ ಲ್ಯಾನ್ಸ್ :
ಇವತ್ತು ಬೇಜಾನ್ ದುಡ್ಡು ಮಾಡ್ಬೇಕು ಅಂದ್ರೆ ನೀವು “ಫ್ರೀ ಲ್ಯಾನ್ಸರ್” ಆಗ್ಬೇಕು..! ನೀವು ಫ್ರೀ ಲ್ಯಾನ್ಸರ್ ಆಗಿ ಆರಂಭದಲ್ಲಿ ಸ್ವಲ್ಪ ಪ್ರಯತ್ನಪಟ್ಟರೆ..! ಮುಂದೆ ನೀವು ಫುಲ್ ಟೈಮ್ ವರ್ಕ್ ಗಿಂತ ತುಂಬಾ ಬ್ಯುಸಿ ಆಗ್ತೀರ..! ತುಂಬಾ ಬ್ಯುಸಿ ಆಗೋದ್ರಿಂದ ದುಡ್ಡು ಕೂಡ ನಿಮ್ಮ ಅಕೌಂಟ್ ಗೆ ಬಂದು ಬಿಳ್ತಾನೆ ಇರುತ್ತೆ..! ನಿಮ್ಮಲ್ಲಿ ಸ್ಕಿಲ್( ಕೌಶಲ್ಯ) ಇದ್ದೀದ್ದೇ ಆದ್ರೆ ಖಂಡಿತ ಫ್ರೀ ಲ್ಯಾನ್ಸಿಂಗ್ ಅಥವಾ ಹವ್ಯಾಸಿ ಕೆಲಸದಿಂದ ಬೇಜಾನ್ ದುಡ್ಡು ಮಾಡ್ಬಹುದು..! LinkedIn ಇದೊಂದು ಬ್ಯಸ್ನೆಸ್ ಒರಿಯನ್ಟೆಡ್ ಸೋಶಿಯಲ್ ನೆಟ್ ವರ್ಕ್..! ಇದರಲ್ಲಿ ನೀವು ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳುವುರಿಂದ ನಿಮಗೆ ಹೆಚ್ಚು ಹೆಚ್ಚು ಕಾಂಟೆಕ್ಟ್ ಬೆಳೆಯುತ್ತೆ..! ನೀವು ನಿಮ್ಮ ಕೌಶಲ್ಯಕ್ಕೆ ಅನುಗುಣವಾದ ಕೆಲಸ ಮಾಡಿ ದುಡ್ಡನ್ನು ಮಾಡಲು ಇದು ನೆರವಾಗುತ್ತೆ..! Mediabistro ಎಂಬ ಪತ್ರಿಕೋದ್ಯಮ ಸೈಟ್ ಇದೆ..! ಇದರಲ್ಲೂ ಫ್ರೀಲ್ಯಾನ್ಸ್ ಗೆ ಬಹಳಷ್ಟು ಅವಕಾಶವಿದೆ..! ಇದರಲ್ಲಿ ನಿಮ್ಮ ಅನುಭವ(ಎಕ್ಸಿಪಿರಿಯನ್ಸ್) ಒಳಗೊಂಡ ಪ್ರೊಫೈಲ್ ಅಪ್ ಲೋಡ್ ಮಾಡಿದ್ರೆ ಸಾಕಷ್ಟು ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ..! ನೀವು ಅತ್ಯುತ್ತಮ ವಿನ್ಯಾಸಗಾರರಾಗಿದ್ದರೆ 99Designs.com ಅಥವಾ Threadless ಸೈಟ್ ಗಳಿಗೆ ನಿಮ್ಮ ವಿನ್ಯಾಸವನ್ನು ಪೋಸ್ಟ್ ಮಾಡೋ ಮೂಲಕ ಹಣಗಳಿಸಲೂ ಅವಕಾಶವಿದೆ..!

3. ಬ್ಲಾಗ್ :
ಇಂದು ಬ್ಲಾಗ್ ಪತ್ರಿಕೋದ್ಯಮ ಬೆಳೆಯುತ್ತಿದೆ..! ನೀವು ನಿಮ್ಮದೇ ಆದ ಬ್ಲಾಗ್ ಮೂಲಕ.. ಉತ್ತಮ ಬರಹದೊಂದಿಗೆ ದುಡ್ಡನ್ನು ಮಾಡ್ಬಹುದು..! ನೀವು ನಿಮಗೆ ತೋಚಿದ್ದನ್ನು ಬ್ಲಾಗ್ ಗೋಡೆಯ ಮೇಲೆ ಗೀಚಿದರೂ ದುಡ್ಡು ಬರುತ್ತೆ..! ಆ ಬ್ಲಾಗ್ ನಲ್ಲಿ ಜಾಹಿರಾತುಗಳನ್ನು ಬಿತ್ತರಿಸುವುದರಿಂದ ಹಣಗಳಿಕೆ ಸಾಧ್ಯವಾಗುತ್ತದೆ…! ಜೆ. ಮನಿ ಎಂಬಾತ ಇಧೇ ಬ್ಲಾಗ್ ನಲ್ಲಿ ಸಾಮಾನ್ಯವಾದ ಬರಹಗಳನ್ನು ಗೀಚಿತ್ತಾ..ಕೇವಲ ಏಳೇ ವರ್ಷದಲ್ಲಿ $400,000 (26144180.00 Indian Rupee) ರಷ್ಟುಗಳಿಕೆ ಮಾಡಿದ್ದಾರೆ..! ಅದೇರೀತಿ ಪ್ಯಾಟ್ ಫೈನ್ ಎಂಬಾತ 3ಮಿಲಿಯನ್ ನಷ್ಟು  (19598985.00 Indian Rupee) ದುಡ್ಡು ಮಾಡಿಕೊಂಡಿದ್ದಾನೆ..! ಸಾರ್ ಇವರಂತೆ ನೀವೂ ದುಡ್ಡು ಮಾಡಿ..! ನೀವು ಯಾವುದೇ ಕೆಲಸ ಮಾಡ್ತಾ ಇರಿ.. ಆದ್ರೆ ಅದರ ಜೊತೆ ಜೊತೆಗೇನೇ ನಿಮ್ಮ ಬ್ಲಾಗ್ ನಲ್ಲಿ ಆ್ಯಕ್ಟಿವ್ ಆಗಿರೋ ಮೂಲಕ ಕೂಡ ದುಡ್ಡು ಮಾಡಿ..!

4.ಆ್ಯಡ್ ಫ್ಲೈ :
adf.ly ಇದೊಂದು ಲಿಂಕ್ ಶೇರಿಂಗ್ ಆ್ಯಡ್ ಕಂಪನಿ..! ಇದಕ್ಕೆ ನೀವು ಜಾಯಿನ್ ಆದ್ರೆ ನಿಮಗೆ ಲಿಂಕ್ ಗಳನ್ನು ಕಳುಹಿಸ್ತಾ ಇರ್ತಾರೆ! ಅವರು ಕಳುಹಿಸಿದ ಲಿಂಕ್ ಗಳನ್ನು ಶೇರ್ ಮಾಡಿದ್ರೆ ನಿಮಗೆ ದುಡ್ಡನ್ನೂ ಕೊಡ್ತಾರೆ..!

5. ಡ್ರೈವರ್ :
ನೀವು ಡ್ರೈವರ್ ಆಗಿಯೂ ಬೇಜಾನ್ ದುಡ್ಡು ಮಾಡಲು ಸಾಧ್ಯವಿದೆ..! ನೋಡಿ, ಇವತ್ತು ಖಾಸಗಿ ಕ್ಯಾಬ್ ಗಳಿಗೆ ನಗರದಲ್ಲಿ ಬೇಡಿಕೆ ಇದೆ..! ನೀವು ಈ ಕ್ಯಾಬ್ ಗಳಿಗೆ ಡ್ರೈವರ್ ಆಗಿ ಕೆಲಸಕ್ಕೆ ಸೇರಿದ್ರೆ ಕೈತುಂಬಾ ಸಂಬಳ + ಕೆಲವೊಮ್ಮೆ ಹಂಗೂ ಹಿಂಗೂ ಒಂದಷ್ಟು ದುಡ್ಡನ್ನು ಮಾಡಿಕೊಳ್ಳಲೂ ಬಹುದು..! ನಿಮ್ಮದೇ ಆದ ಕ್ಯಾಬ್ ಅನ್ನು ಮಾಡಿಕೊಂಡರೂ ದುಡ್ಡೋ ದುಡ್ಡೋ..!
6. ಬೇಬಿ ಸಿಟ್ಟರ್ :
ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗ್ತಾರೆ..! ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಅಜ್ಜ-ಅಜ್ಜಿಯೂ ಇಲ್ಲ..! ಆದ್ರಿಂದ ಬೇಬಿ ಸಿಟ್ಟರ್ ಗಳಿಗೆ ಭಾರಿ ಬೇಡಿಕೆ ಇದೆ..! ಮಕ್ಕಳ ಜೊತೆ ಕಾಲ ಕಳೆದಂಗೂ ಆಗುತ್ತೆ..! ದುಡ್ಡು ಮಾಡಿದಂಗೂ ಆಗುತ್ತೆ..! ವಾಟ್ ಆ್ಯನ್ ಐಡಿಯಾ ಸರ್.ಜಿ..! ಬೇಬಿ ಸಿಟ್ಟರ್ ಶುರುಮಾಡಿ ದುಡ್ಡು ಮಾಡ್ಕೊಳ್ಳಿ..!

7. ಫೋಟೋಗ್ರಫಿ ಮತ್ತು ಹಾಡು :
ಮದುವೆ ಮುಂತಾದ ಸಮಾರಂಭಗಳಿಗೆ ಫೋಟೋ ಮತ್ತು ವೀಡಿಯೋ ಚಿತ್ರೀಕರಣ ಮಾಡಿಕೊಡುವ ಮೂಲಕವೂ ದುಡ್ಡನ್ನು ಮಾಡ್ಬಹುದು..! ಅಷ್ಟೇ ಅಲ್ಲ ಮದುವೆಯಲ್ಲಿ ಹಾಡು ಹೇಳಿ ದುಡ್ಡನ್ನು ಸಂಪಾದಿಸುವ ವರು ಇದ್ದಾರೆ..! ನೀವೂ ಯಾಕೆ ಟ್ರೈ ಮಾಡ್ಬಾರ್ದು..!

08. ಸಾಫ್ಟ್ ವೇರ್ ವಿಮರ್ಶೆ :
ಇದು ಮಾಹಿತಿ ತಂತ್ರಜ್ಞಾನ ಯುಗ..! ಎಲ್ಲಾ ಕೆಲಸವಾಗುವುದು ಸಾಫ್ಟ್ ವೇರ್ ಮೂಲಕವೇ…! ಇಂತಹ ಸಾಫ್ಟ್ ವೇರ್ಸ್ ಬಗ್ಗೆ ತಿಳಿಯುವ ಕುತೂಹಲ ಜನರಿಗಿರುತ್ತೆ, ಆ ಸಾಫ್ಟ್ ವೇರ್ ಕಂಪನಿಗಳಿಗೆ ಫೀಡ್ ಬ್ಯಾಕ್ ಅಗತ್ಯ ಇರುತ್ತೆ..! ಆದ್ದರಿಂದ ನೀವು ಸಾಫ್ಟ್ ವೇರ್ ವಿಮರ್ಶೆ ಬರೆಯುವ ಮೂಲಕವೂ ದುಡ್ಡು ಮಾಡ್ಬಹುದು..! SoftwareJudge.com ಒರಿಜನಲ್ ರಿವ್ಯೂ ಗೆ ದುಡ್ಡು ಕೊಡುತ್ತೆ..!

9. ಟೂರಿಸ್ಟ್ ಗೈಡ್ :
ನಿಮಗೆ ನಿಮ್ಮ ಸ್ಥಳೀಯ ಪ್ರವಾಸಿತಾಣಗಳ ಪರಿಚಯವಿದ್ದರೆ, ಅಲ್ಲಿನ ಸಂಸ್ಕೃತಿ, ಕಲೆ, ಸಂಪ್ರದಾಯದ ಪರಿಚಯ ನಿಮಗಿದ್ದರೆ ಆರಾಮಾಗಿ ದುಡ್ಡು ಮಾಡ್ಬಹುದು..! ಕೆಲವು ಪ್ರವಾಸಿಗರು ನಿಮಗೆ ಆ ಪ್ರವಾಸಿತಾಣದ ಬಗ್ಗೆ ಮಾಹಿತಿ ನೀಡಲು ದುಡ್ಡು ಕೊಟ್ಟು ಕರೆಯುತ್ತಾರೆ..! ಮತ್ತೆ ಕೆಲವರು ಫೊಟೋಗ್ರಫಿಗಾಗಿಯೂ ನಿಮ್ಮನ್ನು ಕರೆಸಿಕೊಂಡು ನಿಮಗೆ ದುಡ್ಡು ನೀಡ್ತಾರೆ..!

10. ವಿತರಕ ಅಥವಾ ಡೆಲುವರಿ ಪರ್ಸನ್ :
ನಗರ ಪ್ರದೇಶಗಳಲ್ಲಿ ಮನೆಮನೆಗೆ ಸರಕುಗಳನ್ನು ವಿತರಿಸುವ ಕೆಲಸಗಾರರಿಗೂ ಭಾರೀ ಬೇಡಿಕೆ ಇದೆ..! ಕೆಲವು ರೆಸ್ಟೋರೆಂಟ್ ಗಳಲ್ಲಿಯೂ ಕೆಲಸಕ್ಕೆ ನೀವು ಟ್ರೈ ಮಾಡ್ಬಹುದು..! ಅಥವಾ ಫೋಸ್ಟ್ ಮೇಟ್ಸ್ ನಂತಹ ಸರ್ವೀಸ್ ಗಳಲ್ಲಿಯೂ ಅವಕಾಶವಿದೆ..!

11. ಫೋಟೋ ಪೋಸ್ಟ್ ಮಾಡಿ ಹಣ ಮಾಡಿ ..! :
ನೀವೊಬ್ಬ ಒಳ್ಳೆಯ ಛಾಯಗ್ರಾಹಕ(ಫೋಟೋಗ್ರಾಫರ್) ಆಗಿದ್ದರೆ ಒಳ್ಳೆಯ ಫೋಟೋಗಳನ್ನು Shutterstock, Photoshelter, Fotolia, DreamsTime and/or iStock. ನಂತಹ ಆನ್ ಲೈನ್ ಸೈಟ್ ಗಳಿಗೆ ನೀಡಿದರೆ ಹಣಗಳಿಕೆ ಸಾಧ್ಯವಿದೆ..!

13. ಆನ್ ಲೈನ್ ಹುಡುಕಾಟ :
 Qmee. ಆನ್ ಲೈನನಲ್ಲಿ ಹುಡುಕಾಟ ನಡೆಸುವುದರಿಂದಲೂ ದುಡ್ಡು ಮಾಡ್ಬಹುದು..! ಬಾರಿ ಸುಲಭ ಅಲ್ವೇನ್ರೀ..! ಕ್ಯೂಮಿ ತರಹದ ವೆಬ್ ಸೈಟ್ ಗಳಲ್ಲಿ ಹೀಗೆ ಹಣ ಮಾಡ್ಬಹುದಂತೆ..!

14. ಕೋಚಿಂಗ್ :
ನೀವು ಯಾವುದಾದರೂ ಕ್ಷೇತ್ರದಲ್ಲಿ ಪರಿಣಿತರಾಗಿದ್ದೀರಿಯೇ..? ಹಾಗಾದ್ರೆ ದುಡ್ ಮಾಡೋಕೆ ಯಾಕ್ರೀ ತಲೆ ಕೆಡಿಸಿಕೊಳ್ತಾ ಇದ್ದೀರಿ..! ನೀವು ಪರಿಣಿತರಾಗಿರೋ ಕ್ಷೇತ್ರದ ಬಗ್ಗೆ ಕೋಚಿಂಗ್ ಕೊಡ್ರೀ..! ಆ ಮೂಲಕ ಹಣಗಳಿಸ್ರಿ..!

15. ಆನ್ ಲೈನ್ ಟೀಚಿಂಗ್ :
ನಿಮಗಿಂತ ಕಡಿಮೆ ಜ್ಞಾನ ಇರೋರಿಗೆ ಪಾಠ ಮಾಡಿ ದುಡ್ಡು ಮಾಡ್ಬಹುದು..! ನೀವು “ಕಲ್ಪನಾ”ದಂತಹ ಸಂಸ್ಥೆಯೊಡನೆ ಸೇರಿ ಉಪಗ್ರಹ ಮೂಲಕ ಆಲ್ ಲೈನ್ ನಲ್ಲಿಯೇ ಪಾಠ ಮಾಡಿ ಕೂತಲ್ಲೇ ದುಡ್ಡು ಮಾಡ್ಬಹುದು..! ನಿಮ್ಮದೇ ಆದ ಆನ್ ಲೈನ್ ಕೋಚಿಂಗ್ ಕಂಪನಿಯನ್ನು ಸಣ್ಣದಾಗಿಯೇ ಹುಟ್ಟು ಹಾಕುವ ಮೂಲಕವೂ ದುಡ್ಡೇ ನಿಮ್ಮನ್ನು ಹುಡುಕಿಕೊಂಡು ಬರುವಂತೆ ಮಾಡ್ಬಹುದು..! ಅಷ್ಟೇ ಅಲ್ದೆ.. Udemy or Skillshare. ನಂತಹ ಆನ್ ಲೈನ್ ಕೋಚಿಂಗ್ ಕ್ಲಾಸ್ ಗಳಲ್ಲಿ ಟೈಮ್ ಸಿಕ್ಕಾಗ ಪಾಠ ಮಾಡೋ ಮೂಲಕವೂ ದುಡ್ಡು ಮಾಡಲು ಸಾಧ್ಯವಿದೆ..!

ಕ್ಲಿಕ್ ಮಾಡಿ  ಇದನ್ನೂ ಓದಿ..

ಮನೆಯಿಂದ ಹೊರಗಡೆ ಕಾಲಿಡಲ್ಲ.. ಆದ್ರೆ ಕೋಟಿ ಕೋಟಿ ದುಡೀತಾನೆ..! ಯೂಟ್ಯೂಬ್ ಪ್ರಪಂಚದಲ್ಲಿ ಇವನೇ ಸಖತ್ ಶ್ರೀಮಂತ..!

ಕ್ಲಿಕ್ ಮಾಡಿ  ಇದನ್ನೂ ಓದಿ.. 

 ಯೂಟ್ಯೂಬ್ ಮೂಲಕ ನೀವೂ ಹಣ ಗಳಿಸಿ…! ನಿಮ್ಮ ವೀಡಿಯೋಗಳೇ ಇಲ್ಲಿ ಇನ್ವೆಸ್ಟ್ ಮೆಂಟ್..!

ಹೀಗೆ ದುಡ್ಡು ಮಾಡೋಕೆ ಅನೇಕ ಒಳ್ಳೆಯ, ಸುಲಭದ ದಾರಿಗಳಿವೆ..! ಯಾವ ದಾರಿ ಆಯ್ಕೆ ಮಾಡಿಕೊಂಡ್ರೂ ದುಡ್ಡು ಮಾಡ್ಬಹುದು..! ಇನ್ನೂ ಕೇಳ್ಬೇಕು ಅಂದ್ರೆ ನೀವುಗಳು ಈಗ ಏನ್ ಕೆಲಸ ಮಾಡ್ತಾ ಇದ್ದೀರೋ ಆ ಕೆಲಸವನ್ನು ಮಾಡ್ತಾ ಮಾಡ್ತಾನೇ ನಾವು ಹೇಳಿದ ದುಡ್ಡಿನ ದಾರಿಯನ್ನೂ ಫಾಲೋ ಮಾಡಿದ್ರೆ…, ಅಂದ್ರೆ ಇದನ್ನು ಪಾರ್ಟ್ ಟೈಮ್ ಆಗಿ ಈ ಕೆಲಸವನ್ನು ಮಾಡ್ತಾ ನಿಮ್ಮ ಪರ್ಮನೆಂಟ್ ಕೆಲಸವನ್ನೂ ನಿಭಾಯಿಸ್ತೀರಾ ಅಂದ್ರೆ ನಿಮಗೇ ಡಬಲ್ ಧಮಾಕ..!
ನಾವು ತಿಳಿಸಿರೋ ನಾನಾ ದಾರಿಯಲ್ಲಿ ಯಾವ ದಾರಿ ಆಯ್ಕೆ ಮಾಡಿಕೊಳ್ತೀರೋ ಮಾಡಿಕೊಳ್ಳಿ..! ಅಷ್ಟೂ ದಾರಿ ಆಯ್ಕೆ ಮಾಡಿಕೊಂಡ್ರೆ ತುಂಬಾ ಕೆಲಸ ಆಗುತ್ತೆ..! ಬಟ್ ಬೇಜಾನ್ ದುಡ್ಡು ಮಾತ್ರ ಮಾಡೇ ಮಾಡ್ತೀರ..! ಸಾರ್, ದುಡ್ಡು ಮಾಡೋದು ಹೆಂಗತ್ತ ಹೇಳಿದ್ದೀವಿ.! ಮುಂದೆನೂ ಹೊಸ ಹೊಸ ಐಡಿಯಾಗಳನ್ನು ಕೊಡ್ತೀವಿ..! ಈ ಬಗ್ಗೆ ನೀವು ಕಾಮೆಂಟ್ ಕೊಡ್ಬಹುದು…! ಇಷ್ಟ ಆದ್ರೆ ಲೈಕ್! ಮಾಡ್ಬಹುದು..! ನೀವು ತಿಳಿದ ಮಾಹಿತಿ ಬೇರೆ ಅವರಿಗೂ ತಿಳಿಯಲಿ, ಅವರಿಗೂ ಒಳ್ಳೆಯದಾಗಲಿ ಅನ್ನೋ ನಿಸ್ವಾರ್ಥಿಗಳು ನೀವಾಗಿದ್ರೆ ಇದನ್ನು ಶೇರ್ ಮಾಡಿ ಎಲ್ಲರಿಗೂ ದುಡ್ಡು ಮಾಡೋದು ಹೆಂಗಪ್ಪಾ ಅಂತ ತಿಳಿಸಿ..! ನಾವು ನಿಮಗೆ ಹೇಳ್ತಾ ಇಲ್ವಾ..?! ನೀವು ಬೇರೆಯವರಿಗೂ ಈ ಸ್ಟೋರಿ ಶೇರ್ ಮಾಡೋ ಮೂಲಕ ಹೇಳಿ..

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಈ ವ್ಯಾಪಾರಿ ಅದೆಂಥಾ “ಬುದ್ಧಿವಂತ ಮೋಸಗಾರ..”! ಇವನ ಮೋಸ ತಿಳಿಯಲು ಈ ವೀಡಿಯೋವನ್ನು ಕನಿಷ್ಟ ಎರಡೆರಡು ಸಲ ಗಮನವಿಟ್ಟು ನೋಡ್ಲೇಬೇಕು..!

ಈ ಗೂಗಲ್ ಟ್ರಿಕ್ಸ್ ಗಳು ನಿಮಗೆ ಗೊತ್ತಾ..!

10,000 ಇದ್ದ ಆದಾಯ 693ಕೋಟಿ ಹೇಗಾಯ್ತು ಗೊತ್ತಾ..?

ಭಾರತದ ಇತಿಹಾಸ ಹಾಗೂ ಅಪೂರ್ವ ಸಾಧನೆಯನ್ನು ತೋರಿಸೋ ಅದ್ಭುತ ಸ್ಯಾಂಡ್ ಆರ್ಟ್.!

ಪಳಪಳನೆ ಹೊಳೆಯುವ ಕೂದಲಿಗಾಗಿ ಕೋಕ ಕೋಲಾ ಬಳಸಿ..!

“ಜುಕರ್ ಬರ್ಗ್”, “ಸ್ಟೀವ್ ಜಾಬ್ಸ್” ರಂತಹ ಉದ್ಯಮಿಗಳ ಯಶಸ್ಸಿಗೆ ಭಾರತದ ದೇವರೇ ಕಾರಣ..!

ಭಾರತೀಯರು ನೋಡಬೇಕಾದ ಭಾರತೀಯರ ವೀಡಿಯೋ..!

ಸಲ್ಮಾನ್ ಖಾನ್ ಹಾಗೂ ಪ್ರೇಮ್ ಗೂ ಎನ್ ಸಂಬಂಧ ಗೊತ್ತಾ…? ಇಲ್ಲಿದೆ ಸಲ್ಮಾನ್ ಪ್ರೇಮ್ ಕಹಾನಿ..

ನೀವು ತಿಳಿದುಕೊಳ್ಳಲೇಬೇಕಾದ ಕಂಪ್ಯೂಟರ್ ಟ್ರಿಕ್ಸ್..!

ಫ್ಲಿಪ್ ಕಾರ್ಟ್ ಗೇ ಬರೋಬ್ಬರಿ 20 ಲಕ್ಷ ಪಂಗನಾಮ ಹಾಕಿದ ಭೂಪ..!

ವಯಸ್ಸು 25, ಆಸ್ತಿ 137697000000.00 ಚಿಕ್ಕ ವಯಸ್ಸಿನಲ್ಲಿ ಅಷ್ಟು ಹಣಗಳಿಸಿದ್ದು ಹೇಗೆ ಗೊತ್ತಾ..?

ಭಾರತದಲ್ಲಿ ಭಾರತೀಯರಿಗೆ “ನೋ ಎಂಟ್ರಿ” ಭಾರತೀಯರಿಗೇ ಪ್ರವೇಶ ನೀಡದ ಭಾರತದ ಸ್ಥಳಗಳು..!

ಅಬ್ಬಾ…! ಈ ಪುಟ್ಟಬಾಲಕಿ ಅದೆಂಥಾ `ಹುಲಿಡ್ಯಾನ್ಸ್’ ಮಾಡ್ತಾಳೆ..!

ಇಂಡೋ-ಪಾಕ್ ವಾರ್ ಮತ್ತೇ ನಡೆಯಿತು..! ಯುದ್ದ ನಡೆದಿದ್ದು ಎಲ್ಲಿ ಗೊತ್ತಾ..?

ಏನಪ್ಪಾ ಇದು ಕಾಶ್ಮೀರದಲ್ಲಿ ಬೀಳೋ ಹಿಮದಂತೆ ಇದೆಯಲ್ಲಾ..?

ಭಕ್ತಿ ಹೆಸರಲ್ಲಿ ಭಕ್ತರಿಂದಲೇ ಗಣೇಶನಿಗೆ ಅವಮಾನ..! ಈ ವೀಡೀಯೋ ನೋಡಿ, ಏನ್ಮಾಡ್ಬೇಕು ಅಂತ ನೀವೇ ಹೇಳಿ

ಅವಮಾನವನ್ನು ಮೆಟ್ಟಿನಿಂತು ಸಾಧಕರಾದವರು..! ಅವಮಾನಿಸಿದವರಿಗೆ ಗೆಲುವಿನ ಮೂಲಕವೇ ಉತ್ತರ ಕೊಟ್ಟವರು..!

ಭಾರತೀಯ ಮೂಲದ ಡಾಕ್ಟರ್ ಮಾಡಿದ ಮಿರಾಕಲ್..! ಕಿವಿ ಇಲ್ಲದ ಬಾಲಕನಿಗೆ ಕಿವಿ ಕರುಣಿಸಿದ ಡಾಕ್ಟರ್..!

ಹೋಗ್ತಾ ಸಿಂಗಲ್ ಬರ್ತಾ ಡಬಲ್..!

ಊದುಗೊಳವೆ ಸಹಾಯದಿಂದ ಬಲ್ಪ್ ಹೊತ್ತಿಸ್ಬಹುದು..! ಬೋರ್ ನಿಂದ ನೀರೂ ಪಡೆಯ ಬಹುದು..!

 

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...