ಇಂದು ವಿಶ್ವದಾದ್ಯಂತ ಮಾರ್ಟಿನ್ ರಿಲೀಸ್: ಸಿನಿಮಾ ರಿಲೀಸ್ ಗೂ ಮೊದಲೇ ಗೋಪೂಜೆ ಮಾಡಿದ ಧ್ರುವ!

Date:

ಇಂದು ವಿಶ್ವದಾದ್ಯಂತ ಮಾರ್ಟಿನ್ ರಿಲೀಸ್: ಸಿನಿಮಾ ರಿಲೀಸ್ ಗೂ ಮೊದಲೇ ಗೋಪೂಜೆ ಮಾಡಿದ ಧ್ರುವ!

ಧ್ರುವ ಸರ್ಜಾ ಮನೆಯಲ್ಲಿ ಇಂದು ಸಂತಸ ಮನೆ ಮಾಡಿದೆ. ಒಂದೆಡೆ ನಾಡಿನೆಲ್ಲಡೆ ಹಬ್ಬದ ಸಂಭ್ರಮ, ಮತ್ತೊಂದೆಡೆ ಮಾರ್ಟಿನ್ ರಿಲೀಸ್ ಆಗುತ್ತಿರುವುದು ಅಭಿಮಾನಿಗಳು ಹಾಗೂ ಧ್ರುವ ಕುಟುಂಬಕ್ಕೆ ಇನ್ನಿಲ್ಲದ ಸಂತಸ, ಸಂಭ್ರಮ ಮನೆ ಮಾಡಿದೆ.

ಧ್ರುವ ಸರ್ಜಾ ಅವರ ಬಹು ನಿರೀಕ್ಷಿತ ಮಾರ್ಟಿನ್ ಸಿನಿಮಾ ಕೂಡ ಇವತ್ತೇ ಬೆಳ್ಳಿ ತೆರೆಗೆ ಅಪ್ಪಳಿಸುತ್ತಿದೆ. ಇದೇ ಖುಷಿಯಲ್ಲಿದ್ದ ಧ್ರವ ಸರ್ಜಾ ನಿವಾಸಕ್ಕೆ ಕೋಲೆ ಬಸವ ಬಂದಿದೆ. ಹೀಗಾಗಿ ಮನೆ ಬಳಿ ಬಂದ ಗೋವುಗಳಿಗೆ ಕುಂಕುಮವಿಟ್ಟು ಆರತಿ ಬೆಳಗಿ, ಪೂಜೆ ಸಲ್ಲಿಸಿದ್ದಾರೆ. ಬಳಿಕ ಧ್ರುವಾ ಸರ್ಜಾ ಅವರು ತಮ್ಮ ಕೈಯಾರೆ ಹಸುಗಳಿಗೆ ಬಾಳೆಹಣ್ಣು, ಬೆಲ್ಲ ತಿನ್ನಿಸಿದ್ದಾರೆ.

ಗೋಪೂಜೆ ಮುಗಿದ ಮೇಲೆ ತಮ್ಮ ತಾಯಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಮನೆ ಬಳಿ ಇದೆಲ್ಲ ಆದ ಬಳಿಕ ಮಾರ್ಟಿನ್ ಸಿನಿಮಾ ಯಶಸ್ವಿಯಾಗಲೆಂದು ಉಮಾ ಮಹೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್ ಬೆಂಗಳೂರು: ಮುಸ್ಲಿಮರ ಪರವಾದ...

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ ಉದ್ದೇಶವಾಗಿತ್ತು: ಸಿಎಂ ಸಿದ್ದರಾಮಯ್ಯ

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ...

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ!

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ! ಬೆಂಗಳೂರು: ರಿಯಲ್...

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದ...