ತನ್ನದೇ ದಾಖಲೆಯನ್ನ ಮುರಿದ ಪ್ರಧಾನಿ ಮೋದಿ..!

Date:

ನಮ್ಮ ಪ್ರಧಾನಿಯವರು ಪ್ರತೀ ವರುಷದಂತೆ ಈ ಬಾರಿಯೂ ದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಸಿದ್ದಲ್ಲದೆ,ತನ್ನ ಸುದೀರ್ಘವಾದ ಅದ್ಭುತ ಭಾಷಣದಿಂದ ಮತ್ತೊಮ್ಮೆ ನಮ್ಮೆಲ್ಲರ ಮನ ತಟ್ಟಿದ್ದಾರೆ.ಪ್ರಧಾನಿಯವರು ಬೆಳಗ್ಗೆ ಘಂಟೆ 7.34 ಕ್ಕೆ ಆರಂಭಿಸಿದ ತನ್ನ ಭಾಷಣವನ್ನು ಸಮಯ ಘಂಟೆ 9.08 ಕ್ಕೆ ಸರಿಯಾಗಿ ಮುಕ್ತಾಯಗೊಳಿಸಿದ್ದಾರೆ.ಈ ಬಾರಿ ನಮ್ಮ ಪ್ರಧಾನಿಯವರು ತನ್ನ 94 ನಿಮಿಷದ ಸುದೀರ್ಘ ಭಾಷಣದೊಂದಿಗೆ ಕಳೆದ ವರುಷದ 86 ನಿಮಿಷದ ತನ್ನದೆ ದಾಖಲೆಯನ್ನು ಮುರಿದದ್ದಲ್ಲದೆ,1947 ರಲ್ಲಿ ನೆಹರೂ ರವರು ಮಾಡಿರೋ 72 ನಿಮಿಷದ ಭಾಷಣದ ದಾಖಲೆಯನ್ನೂ ಮುರಿದಿದ್ದಾರೆ.ನಮ್ಮಲ್ಲಿ ಕೆಲವರು ಆ ಸಮಯದಲ್ಲಿ ಇನ್ನೂ ತಮ್ಮ ಆರಾಮವಾದ ಹಾಸಿಗೆಯಿಂದಲೇ ಎದ್ದಿರಲಾರರು ಇನ್ನೂ ಕೆಲವರು ಅದೀಗ ತಾನೇ ಎದ್ದು ಕಾಫಿಯ ಸವಿಯನ್ನು ಹೀರುತ್ತಿದ್ದಿರಬಹುದು,.ಮತ್ತಿನ್ನು ಕೆಲವರು ಸ್ವಾತಂತ್ರ ದಿನದ ರಜೆಯ ಮಜವನ್ನು ಸವಿಯಲು ತಮ್ಮ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಜೊತೆಗೆ ಎತ್ತಲೋ ಪ್ರವಾಸ ಹೋಗಿರಬಹುದು.ಆದ್ರೆ ನಮ್ಮ ಈ ಎಲ್ಲಾ ಖುಷಿಗೆ ಕಾರಣ ನಮ್ಮ ಇಂದಿನ ದಿನ ವಿಶೇಷ.ಸ್ವಾತಂತ್ರ್ಯ ದಿನ.ನಮ್ಮ ದೇಶದ ಹಬ್ಬ.
ಇಂದು ತನ್ನ ಭಾಷಣದಲ್ಲಿ ಆರಂಭದಲ್ಲಿ ಮೋದಿಜೀಯವರು ಎಲ್ಲಾ ದೇಶವಾಸಿಗಳಿಗೆ ಸ್ವಾತಂತ್ರ ದಿನದ ಶುಭವನ್ನು ಕೋರುತ್ತಾ, ಸಾವಿರಾರು ವರುಷಗಳ ಸಾಂಸ್ಕೃತಿಕ ಪರಂಪರೆಯ ಬಗೆಗೆ ಹೇಳುತ್ತಾ,ವೇದಗಳಿಂದ ವಿವೇಕಾನಂದರ ವರೆಗೂ,ಉಪದೇಶದಿಂದ ಉಪನಿಷತ್ತಿನ ವರೆಗೂ,ಸುದರ್ಶನಧಾರೀ ಕೃಷ್ಣನಿಂದ ಚರಕಧಾರೀ ಮಹಾತ್ಮಾಗಾಂಧಿ ವರೆಗೂ ನಮ್ಮ ಇತಿಹಾಸದ ಹಾಗೂ ಅದು ಬೆಳೆದು ಬಂದ ಪಯಣ ಸುದೀರ್ಘವಾದದ್ದು ಹಾಗೂ ಅನವರತವಾದದ್ದು ಎಂದು ಅದ್ಭುತವಾಗಿ ಬಣ್ಣಿಸಿ ಹೇಳಿದರು.
ಅವರು ಈ ಭಾಷಣದಲ್ಲಿ ಹಳ್ಳಿ,ಬಡವರು,ರೈತ ಹಾಗೂ ನಾರಿಶಕ್ತಿಯ ಬಗೆಗೆ ವಿಶೇಷವಾಗಿ ಒತ್ತುನೀಡಿದ್ದಾರೆ.ಅದಲ್ಲದೆ,ಆತಂಕವಾದದ ಬಗೆಗೆ ನಮ್ಮ ಹಾಗೂ ನಮ್ಮ ನೆರೆ ರಾಷ್ಟ್ರದೊಳಗೆ ಯಾವ ತರಹದ ವ್ಯತ್ಯಸ್ತ ಅಭಿಪ್ರಾಯಗಳಿವೆ ಎಂತಲೂ ಹೇಳಿದ್ದಾರೆ.ಬರಗಾಲದ ನಂತರವೂ ಬೇಳೆ ಕಾಳು,ತರಕಾರಿಗಳ ಬೆಲೆ ಹೆಚ್ಚಾಗಲಿಲ್ಲ.ಕಭೀ ಗರೀಬ್ ಕೀ ಥಾಲೀ ಮಹಂಗೀ ಹೋನೇ ನಹೀ ದೂಂಗಾ ಅಂದರೆ,ಬಡವರ ಅನ್ನದ ಬೆಲೆಯನ್ನು ಎಂದಿಗೂ ನಾನು ಹೆಚ್ಚಿಸುವುದಿಲ್ಲ,ಎಂದೂ ಅವರು ಹೇಳಿದರು.ಅವರ ಭಾಷಣದ ಮುಖ್ಯಾಂಶಗಳು ನಿಮಗಾಗಿ:
1.ಹೊಣೆಗಾರಿಕೆಯು ನಮ್ಮ 125 ಕೋಟಿ ಭಾರತೀಯರಲ್ಲಿದೆ,ಅದು ಸ್ವರಾಜ್ ನಿಂದ ಸುರಾಜ್ಯದ ತನಕ ಬದಲಾಗುವಂತಾಗಬೇಕು. ಪಾರ್ಲಿಮೆಂಟಿನಿಂದ ಪಂಚಾಯತ್,ಗ್ರಾಮ ಪ್ರಧಾನ ಹಾಗೂ ಪ್ರಧಾನಿಯ ತನಕ ನಮ್ಮ ದೇಶದ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು ಆಗಲೇ ಸುರಾಜ್ಯದ ಕನಸು ನನಸಾಗುವುದು.
2.ದೇಶದಲ್ಲಿ ಭಯೋತ್ಪಾದನೆ ಹಾಗೂ ಮಾವೋವಾದಿತ್ವಗಳಿಗೆ ಅವಕಾಶ ಮಾಡಿಕೊಡದೆ ಅದನ್ನು ನಿರ್ಮೂಲನಮಾಡಬೇಕು.ಇದು ಯುವ ಜನತೆಯ ಹೊಣೆ.
3.ಎಲ್ಲವನ್ನು ಸುಧಾರಿಸುತ್ತಾ,ನಿರ್ವಹಿಸುತ್ತಾ ಸಂಪೂರ್ಣವಾಗಿ ಬದಲಾಯಿಸುವತ್ತ ನಮ್ಮ ಪ್ರಯತ್ನ ಹಾಗೂ ಅಲ್ಲಿ ಯಾವುದೇ ರಾಜಕೀಯಕ್ಕೆ ಆಸ್ಪದವಿರಬಾರದು.
4.ಸರಕಾರದ ಬಗೆಗೆ,ಮಾಡಿದ ಕೆಲಸಗಳ ಬಗೆಗೆ ಲೆಕ್ಕ ವಿಡುವುದು ಸುಲಭ,ಆದ್ರೆ ಆಳವಾಗಿ ನೋಡಿದಾಗ,ಅಲ್ಲಿ ಅಷ್ಟೆಲ್ಲಾ ಅರಂಭಿಸಲು ಪಟ್ಟ ಶ್ರಮದ ಬಗ್ಗೆ ತಿಳಿಯುವುದು ಅಸಾಧ್ಯ.ಇಂದು ನಾನು ಸರಕಾರದ ಕಾರ್ಯಕ್ಕಿಂತಲೂ ಹೆಚ್ಚಾಗಿ,ಕಾರ್ಯ ಸಂಸ್ಕೃತಿಯ ಬಗ್ಗೆ ಮಾತಾಡಲು ಇಚ್ಛಿಸುತ್ತೇನೆ.
5.ಸಮಾಜದ ಒಗ್ಗಟ್ಟು ಮುಖ್ಯ.ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ನಡೆಯುವ ತಾರತಮ್ಯದಿಂದ ದೇಶಕ್ಕೆ ನೋವಾಗುತ್ತದೆ.ಈ ಎಲ್ಲಾ ವಿಷ್ಯಗಳಲ್ಲಿ ನಾವು ಎಚ್ಚೆತ್ತುಕೊಳ್ಳಬೇಕು.
6.ಹಣ ದುಬ್ಬರವನ್ನು ನಾವು 6% ಗೆ ಇಳಿಸಿದ್ದೇವೆ,ಬಡವನ ತಟ್ಟೆಗೆ ಯಾವ ಹಾನಿಯೂ ಆಗದಂತೆ ನಾನು ಎಚ್ಚರವಹಿಸಿದ್ದೇನೆ.
7.ಒಂದು ಸಮಯದಲ್ಲಿ ಸರಕಾರ ಕೇವಲ ಆಕ್ಷೇಪಣೆಯಿಂದ ಸುತ್ತುವರಿದಿತ್ತು,ಆದ್ರೆ ಈಗ ಸರಕಾರ ಅಪೇಕ್ಷೆಗಳಿಂದ ಸುತ್ತುವರಿದಿದೆ.ನಾನು ನಮ್ಮ ಹಿಂದಿನ ಸರಕಾರದ ವಿಚಾರಗಳನ್ನು ತುಲನೆ ಮಾಡುತ್ತಿಲ್ಲ,ಬದಲಾಗಿ ಅವರಿಗೆ ಗೌರವಿಸುತ್ತಾ ತಲೆ ಬಾಗಿ ನಮಿಸುತ್ತೇನೆ.
8.ನಾವೆಲ್ಲಾರೂ ಒಟ್ಟಾಗಿ ಸಮಾಜದಲ್ಲಿರೋ ದುಷ್ಟ ಕೃತ್ಯಗಳ ಬಗೆಗೆ ಹೋರಾಡಬೇಕು.ಸಮಾಜದ ನ್ಯಾಯದ ಪರವಾಗಬೇಕು.ಮಹಾತ್ಮಾ ಗಾಂಧಿ ಹಾಗೂ ಅಂಬೇಡ್ಕರ್ ಮೊದಲಾದವರು ಯಾವಾಗಲೂ ಸಮಾಜದ ಒಗ್ಗಟ್ಟಿಗಾಗಿ ಹೋರಾಡಿದ್ದಾರೆ.
ಇವಿಷ್ಟು ನಮ್ಮ ಮೋದಿಜೀಯವರ ಭಾಷಣದ ಮುಖ್ಯ ಅಂಶಗಳು.
ಫ್ರೆಂಡ್ಸ್ !!! ನಿಮ್ಮ ಸ್ವಾತಂತ್ರ್ಯಕ್ಕೆ ನೀವು ರುಣಿಯಾಗಿರಿ,ನಿಮಗೆ ಕೇವಲ ಪೌರತ್ವವಷ್ಟೇ ಅಲ್ಲ ಅದಕ್ಕಿಂತಲೂ ಹೆಚ್ಚಿನದನ್ನು ಕೊಟ್ಟಿರೋ ದೇಶಕ್ಕಾಗಿ ರುಣಿಯಾಗಿ,ಏನೆಲ್ಲಾ ಸಣ್ಣ ಸಣ್ಣ ಅಭಿವೃದ್ದಿಯನ್ನು ಮಾಡುತ್ತಿದ್ದೇವೆಯೋ,ಆ ಅತೀ ಸಣ್ಣ ಸಣ್ಣ ಬೆಳವಣಿಗೆಗೂ ಧನ್ಯವಾದ ಹೇಳಿ,ಕೊನೇಯದಾಗಿ,ನಮ್ಮ ದೇಶಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಅನೇಕ ಹುತಾತ್ಮರಿಗೂ,ಹಾಗೂ ದೇಶ ರಕ್ಷಣೆಗೆ ಪಣ ತೊಟ್ಟು ನಿಂತಿರೋ,ನಮ್ಮನ್ನು ಪ್ರತೀ ಕ್ಷಣವೂ ನೆಮ್ಮದಿಯಾಗಿ ಉಸಿರಾಡುವಂತೆ ಮಾಡುತ್ತಿರೋ ಅನೇಕ ಸೈನಿಕರಿಗೂ ನೀವು ಚಿರರುಣಿಯಾಗಿರಿ.ಇದೇ ಈ ಸ್ವಾತಂತ್ರ್ಯ ದಿವಸದಂದು ನಾವು ನಿಮಗೆ ನೀಡುತ್ತಿರೋ ಪುಟ್ಟ ಸಂದೇಶ.

  • ಸ್ವರ್ಣಲತ ಭಟ್

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...