ಕೀಬೋರ್ಡ್ ಆಲ್ಫಾಬೆಟಿಕಲ್ ಆರ್ಡರ್ ನಲ್ಲಿ ಯಾಕಿಲ್ಲ??? ನಿಮಗಿದು ಗೊತ್ತೇ???

0
57

ನಾವಾಗ 90ನೇ ಇಸವಿಯ ಆಸುಪಾಸಿನಲ್ಲಿದ್ದ 7-8 ವಯಸ್ಸಿನ ಮಕ್ಕಳು, ನಾವು ಮೊತ್ತಮೊದಲು ನೋಡಿದ್ದು ಪೆನ್ಟಿಯಂ 3 ಕಂಪ್ಯೂಟರ್ ಹಾಗೂ ಕಲಿತ ಗಿಳಿಪಾಟ “CPU IS THE BRAIN OF THE COMPUTER “ಎಂದಾಗಿತ್ತು. ಅಲ್ಲಿಂದ ಇಲ್ಲಿತನಕ ನಾವು ಈಗ ಕಲಿಯುತ್ತಿರೋ ಮಕ್ಕಳ ಬಾಯಲ್ಲೂ ಇದನ್ನೇ ಕೇಳುತ್ತಿದ್ದೇವೆ. ಅಲ್ಲವೇ? ಆದ್ರೆ ಇದೆಲ್ಲಕ್ಕಿಂತಲೂ ತುಂಬಾ ಕಷ್ಟದ ಕೆಲಸವು ಕಂಪ್ಯೂಟರ್ ಕೀಬೋರ್ಡ್ನದಾಗಿತ್ತಪ್ಪ! ಅಬ್ಬಬ್ಬ!.ನಾವು ನಮ್ಮ ಹೆಸರನ್ನು ಟೈಪ್ ಮಾಡಲು ಕೀಬೋರ್ಡ್ ನಲ್ಲಿ ತಡಕಾಡಿ ತಡಕಾಡಿ ಒಂದು ಘಂಟೆ ಮಾಡುತ್ತಿದ್ದುದೂ ಉಂಟು.
ಮುಂದಕ್ಕೆ ಟೈಪ್ ಮಾಡಬೇಕಾಗಿರೋ ಲೆಟರ್ ನ್ನು ಹುಡುಕುತ್ತಾ ಸೃಷ್ಟಿಸುತ್ತಿದ್ದ ಆ ಒಂದು ಗಲಿಬಿಲಿಯ ವಾತಾವರಣವನ್ನು ಸಾಮಾನ್ಯವಾಗಿ ಅನುಭವಿಸದವರಿಲ್ಲ ಅಲ್ಲವೇ? ಆದ್ರೆ ಯಾಕೆ ಹೀಗೆ? ಕಂಪ್ಯೂಟರ್ ತಯಾರಕರು ಯಾಕೆ ನಮಗೆ ಈ ತರಹದ ಒಂದು ಗಂಭೀರ ಸಮಸ್ಯೆಯನ್ನು ತಂದೊಡ್ಡಿದ್ರು? ಯಾಕೆ ಅವರೆಲ್ಲ ಎಲ್ಲಾ ಲೆಟರ್ಸ್ ನ್ನು ಆಲ್ಫಾಬೆಟಿಕಲ್ ಆರ್ಡರ್ ನಲ್ಲಿ ವ್ಯವಸ್ಥಿತವಾಗಿ ತಯಾರು ಮಾಡಿಲ್ಲ‍??ಕಂಪ್ಯೂಟರ್ಸ್ ಆರ್ ಸಿಂಪಲ್ ಯೆಟ್ ಕಾಂಪ್ಲಿಕೇಟೆಡ್ ಎಂಬ ಮಾತಿಗೆ ಇದು ಅನ್ವರ್ಥ ನಾಮವಾಯಿತೆ ಎಂಬ ನಮ್ಮ ಸಂದೇಹಗಳಿಗೆ ಉತ್ತರ ಹುಡುಕುತ್ತಾ ಹೊರಟಾಗ ನಮಗೆ ಈ ಕೆಳಗಿನ ಕೆಲವೊಂದು ಅಂಶಗಳು ಲಭ್ಯವಾಯಿತು. ಅದನ್ನು ನಿಮ್ಮೊಂದಿಗೆ ಶೇರ್ ಮಾಡೋಣಾಂತಾನೂ ಅನ್ನಿಸ್ತು.
ಹೌದು! ನಿಮಗೆ ಗೊತ್ತೇ? ಮೊತ್ತಮೊದಲಿಗೆ ಟೈಪಿಂಗ್ ನಲ್ಲಿ ಆ ರೀತಿಯ ಒಂದು ವ್ಯವಸ್ಥೆಯಿತ್ತು ಆದ್ರೆ ಇದರಿಂದ ಟೈಪಿಂಗ್ ಏನೋ ಈಸಿಯಾಗೇ ವೇಗವಾಗಿನೂ ನಡೆಯುತ್ತಿತ್ತು,ಆದ್ರೆ ಸಮಸ್ಯೆ ಇದ್ದಿದ್ದು ಇಲ್ಲಿ ನೋಡಿ. ಜನರು ಅತ್ಯಧಿಕ ವೇಗದಲ್ಲಿ ಟೈಪ್ ಮಾಡುತ್ತಿರೋವಾಗ ಟೈಪ್ ರೈಟರ್ ನಲ್ಲಿರೋ ಬಟನ್ಸ್ ಗಳು ತಾಂತ್ರಿಕವಾಗಿ ಜಾಮ್ ಆಗುತ್ತಿದ್ದವು.ನೋಡಿ ಫಾಸ್ಟ್ ನೆಸ್ ಒಳ್ಳೆದು ತಾನೇ?ಆದ್ರೆ ಈ ತಾಪತ್ರಯಗಳು ಒಂದೆರಡಲ್ಲ….
ಬದಲಿಗೆ ನಾವೆಷ್ಟು ಅದೃಷ್ಟವಂತರು ನೋಡಿ,ನಮಗೀ ತಾಪತ್ರಯವನ್ನು ಎದುರಿಸಬೇಕಾಗಿಲ್ಲ, ಆದ್ರೆ ಆ ಟೈಪಿಸ್ಟ್ ಬಳಿ ನೀವು ಇದ್ರ ರಹಸ್ಯ ಕೇಳಿದಲ್ಲಿ ನಿಮಗೆ ಟೈಪ್ ರೈಟರ್ ನ ಇಡೀ ಪುರಾಣ ತಯಾರಾಗುತ್ತಿತ್ತು. ಕೇವಲ ಒಂದೇ ಒಂದು ಬಟನ್ ಜಾಮ್ ಆದ್ರೆ ಮುಗೀತು ಕಥೆ ಕೇಳಿ, ಇನ್ನು ಕೀಸ್ ಗಳನ್ನು ಸರಿಪಡಿಸಿ, ಹಾಕಿದ್ದ ಹಳೆ ಪೇಪರ್ ನ ತೆಗೆದು,ನಿಮ್ಮ ಕೈಬೆರಳಿಗಂಟಿದ ಶಾಯಿ ಒರೆಸಿ,ಮತ್ತೆ ಹೊಸ ಶೀಟ್ ಹಾಕಿ ಪುನರಾರಂಭ ಟೈಪಿಂಗ್ ಪುರಾಣ.

1
ಆದ್ರೆ ನಾವೀಗ ಬಳಸೋ ಪದ್ದತಿಯು “QUERTY” ಎಂಬುದಾಗಿ ಕರೆಯಲ್ಪಡುತ್ತದೆ.ಈ QUERTY ಪದ್ದತಿಯನ್ನು ಮೊತ್ತಮೊದಲು ಮಿಲ್ವಾಕೀಯಲ್ಲಿ ವಾಸಿಸೋ ವಾರ್ತಾ ಪತ್ರಿಕೆಯ ಸಂಪಾದಕ ಹಾಗೂ ಮುದ್ರಣಾಕಾರನಾಗಿರೋ ಕ್ರಿಸ್ಟೋಫರ್ ಲಾಥಂ ಶೋಲ್ಸ್ ಎಂಬವನು 1870 ರಲ್ಲಿ ಕಂಡುಹಿಡಿದನು. ನಮಗೆ ಆಗ ಆದ ಕಷ್ಟಕರವಾದ ಅನುಭವದಿಂದಲೇ ಈಗ ನಾವು ತೀರಾ ಸರಳ ವಿಧಾನದಲ್ಲಿ ಅದೂ ವೇಗದಲ್ಲಿ ಯಾವುದೇ ಕೀಸ್ ಗಳು ಜಾಂ ಆಗದ ರೀತಿಯಲ್ಲಿ ಟೈಪ್ ಮಾಡತ್ತೇವೆ.

3
ಜಾಂ ಪ್ರಾಬ್ಲಂ ನ ಹೊರತಾಗಿ ಇನ್ನೊಂದು ಮುಖ್ಯವಾಗಿ ಗಮನಿಸಬೇಕಾದ ವಿಷ್ಯವೇನೆಂದರೆ, ಕೀಸ್ ಗಳು ದೂರದಲ್ಲಿ ಇರುವುದರಿಂದ ನಮ್ಮ ಟೈಪಿಂಗ್ ಸಾಮರ್ಥ್ಯ ತನ್ನಿಂತಾನಾಗಿಯೇ ಹೆಚ್ಚಾಗುತ್ತದೆ.ಯಾಕಂದ್ರೆ ಇದು ನಮ್ಮ ಕೈಯನ್ನು ಪದೇ ಪದೇ ಬದಲಾಯಿಸುತ್ತಿರುತ್ತದೆ.ಪ್ರತೀ ಇಂಗ್ಲೀಷ್ ಶಬ್ದಗಳಲ್ಲಿ ಒಂದಾದರೂ ವೊವೆಲ್ಸ್(A,E,I,O,U) ಇರುತ್ತದೆ ಎಂಬುದು ನಮಗೆಲ್ಲಾರಿಗೂ ತಿಳಿದಿರೋ ವಿಷ್ಯ.ಆದ್ರೆ QUERTY ಕೀ ಬೋರ್ಡ್ನಲ್ಲಿ ವೊವೆಲ್ ಆಲ್ಫಾಬೆಟ್ A ಯನ್ನು ಹೋಂರೋದಲ್ಲಿಡಲಾಗಿದೆ,ಇದರಿಂದಾಗಿ ಟೈಪಿಸ್ಟ್ ಬೆರಳುಗಳು ಅನೇಕ ಶಬ್ದಗಳಿಗೆ ಹೋಂರೋ ಬಿಡುವಂತೆ ಮಾಡುತ್ತದೆ.
ಯಾಂತ್ರಿಕವಾಗಿ ನೋಡುವುದಾದಲ್ಲಿ ,ಈ ಕೆಳಗಿನ ಇಂಗ್ಲೀಷ್ ಶಬ್ದಗಳು ಹೆಚ್ಚಾಗಿ ಬಳಕೆಯಲ್ಲಿರುತ್ತದೆ.

4

ನಾವೀಗ ಮಾನವನ ದೇಹದ ರಚನೆಯನ್ನು ಗಮನಿಸಿದಲ್ಲಿ,ವಿಶೇಷವಾಗಿ ನಮ್ಮ ಬೆರಳುಗಳು,ಅದರಲ್ಲೂ ನಮ್ಮ ತೋರು ಬೆರಳು ಹಾಗೂ ಮಧ್ಯದ ಬೆರಳುಗಳು ಉಳಿದ ಬೆರಳುಗಳಿಗಿಂತಲೂ ಹೆಚ್ಚು ಶಕ್ತಿಯುತವಾಗಿದೆ.ನಿಜ ನಿಮಗೆ ಹೆಬ್ಬೆರಳು ಯಾಕೆ ಶಕ್ತಿಯುತವಾಗಿಲ್ಲವೇ?ಎಂಬ ಸಂದೇಹ ಬೇಡ.ಹೆಬ್ಬೆರಳೂ ಬಲಿಷ್ಟನೇ,ಆದ್ರೆ ಅದು ಸ್ವಲ್ಪ ಅಗಲವಾಗಿದೆ.ಇದರಿಂದಾಗಿ ನೀವು ಎರಡೆರಡು ಶಬ್ದಗಳನ್ನು ಒಟ್ಟೊಟ್ಟಿಗೆ ಉಪಯೋಗಿಸಿ ನಿಮ್ಮ ಟೈಪಿಂಗ್ ವೇಗಕ್ಕೆ ಕಡಿವಾಣ ಹಾಕುವಂತಾಗಬಾರದಲ್ಲವೇ?ಅದಕ್ಕಾಗಿ ಅದರ ಆಕಾರಕ್ಕೆ ಸಮದೂಗೋ ಸ್ಪೇಸ್ ಬಾರೇ ಅದಕ್ಕೆ ಸರಿಸಾಟಿ!
ಈಗ ನಮ್ಮ ತೋರುಬೆರಳು ಹಾಗೂ ಮಧ್ಯದ ಬೆರಳುಗಳು ಶಕ್ತಿಯುತವಾಗಿರುವುದಲ್ಲದೆ,ವೇಗದ ಮಿತಿಗೆ ಕರೆಕ್ಟಾಗಿ ಅಡ್ಜಸ್ಟ್ ಆಗುತ್ತದೆ.
ವೇಗದ ಮಿತಿಗೆ ಕರೆಕ್ಟಾಗಿ ಹೊಂದಿಕೊಳ್ಳುವುದರಿಂದಲೂ,ಉಳಿದವುಗಳಿಗಿಂತಲೂ ಅಧಿಕ ಶಕ್ತಿಯಿರುವುದರಿಂದಲೂ,ಈ ಕಾರಣಕ್ಕಾಗಿಯೇ ತೋರು ಬೆರಳು ಹಾಗೂ ಮಧ್ಯದ ಬೆರಳನ್ನುಕೀ ಬೋರ್ಡ್ ನ ಮಧ್ಯಭಾಗ ಹಾಗೂ ಟಾಪ್ ಪೊಸಿಷನ್ ನಲ್ಲಿರೋ ಕೀಸ್ ಗಳಾದ ‘E,T.O,I,S,F,N’ ಇವೇ ಮೊದಲಾದ ಕೀಸ್ ಗಳಿಗೆ ಈ ಬೆರಳನ್ನು ಬಳಸುತ್ತೇವೆ.ಆದರೆ ನಮ್ಮ ಕಿರು ಬೆರಳು ಹಾಗೂ ರಿಂಗ್ ಫಿಂಗರ್, ವೇಗದ ಮಿತಿಗೆ ಸರಿಯಾಗಿ ಹೊಂದಿಕೊಳ್ಳದ ಕಾರಣ ಅದನ್ನುಕೆಳಗಿನ ಬದಿಯಲ್ಲಿ ಅಥವಾ ಕೊನೇಯಲ್ಲಿ ಇಡಲಾಗಿರೋ ಅತೀ ಕಡಿಮೆ ಬಳಕೆಯಾಗುವ ಕೀಸ್ ಗಳಾದ ‘Q,X,Z,J,K,B,V,W,P,Y’ ಗಳಿಗಾಗಿ ಬಳಸುತ್ತೇವೆ.
ನೋಡಿದಿರಲ್ಲ?ನಮಗೆ ಮೊದಮೊದಲು ಭಾರೀ ಕಾಟಕೊಡುತ್ತಿರುವ ಕೀಬೋರ್ಡ್ ಕೀಗಳ ಸೃಷ್ಟಿಯ ರಹಸ್ಯ!!!!ನಿಮಗಿನ್ನೂ ಒಂದು ತಮಾಷೆಯ ವಿಷ್ಯ ಹೇಳ್ತೀವಿ ನೋಡಿ…ನಮ್ಮ ಟೈಪರೈಟರ್ ಗಳಿಗೆ ಗೌರವಾರ್ಥವಾಗಿ ನಮ್ಮ QUERTY ತಯಾರಕರು ಒಂದು ಅದ್ಭುತ ಕೊಡುಗೆಯನ್ನು ನೀಡಿದ್ದಾರೆ.ಅದೇನು ಗೊತ್ತೆ???
TYPEWRITER…ಅರ್ಥವಾಗಲಿಲ್ಲವೇ??ಎನೀ ಗೆಸ್! ಈ TYPEWRITER ನಲ್ಲಿ ಬರೋ ಎಲ್ಲಾ ಲೆಟರ್ಸ್ ಗಳನ್ನು ಕೇವಲ ಒಂದೇ ಒಂದು ಸಿಂಗಲ್ ಲೈನ್ಸ್ ನಲ್ಲಿ ಬರೋ ತರಹ,ಕೀ ಬೋರ್ಡ್ ಮಧ್ಯಭಾಗದ ಟಾಪ್ ಪೊಸಿಷನ್ ನಲ್ಲಿಡಲಾಗಿದೆ.ಹಾಗಿದ್ರೆ…ಹೋಗಿ…ಇನ್ಯಾಕೆ ತಡ..ಈ ಕೂಡ್ಲೇ ಚೆಕ್ ಮಾಡಿ ನೋಡಿ.

  • ಸ್ವರ್ಣಲತ ಭಟ್

POPULAR  STORIES :

ಆಸ್ತಿಗಾಗಿ ಐಸಿಯುನಲ್ಲಿದ್ದ ತಂದೆಯ ಆಕ್ಸಿಜನ್ ಪೈಪ್ ಕಿತ್ತು ಹಾಕಿದ ಪುತ್ರಿ..!

ರೈಲು ನಿಲ್ದಾಣದಲ್ಲಿ ಸೆಲ್ಫಿ ತೆಗೆದರೆ ಐದು ವರ್ಷ ಜೈಲು..!

ಕಿಂಗ್ ಖಾನ್‍ಗೆ ಅಮೇರಿಕಾ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಪಪ್ಪಿ ಶೇಮ್…!

ಸೈಕಲ್ ಕದಿಯಲು ಇಡೀ ಮರವನ್ನೇ ಕತ್ತರಿಸಿದ ಕತರ್ನಾಕ್ ಕಳ್ಳ…!

ಸ್ಯಾಮ್ ಸಂಗ್ ಕಂಪನಿಯು ಭೀಕರ ರಹಸ್ಯದ ಬಗ್ಗೆ ಬಾಯ್ಮುಚ್ಕೊಂಡು ತೆಪ್ಪಗಿರೋಕೆ ಕೆಲಸಗಾರರಿಗೆ ಭಾರೀ ಮೊತ್ತ ನೀಡಿತ್ತಂತೆ

ಈ ಹಾಡನ್ನು ಕೇಳಿದವ್ರೆಲ್ಲಾ ಸುಸೈಡ್ ಮಾಡ್ಕೊಂಡ್ರಂತೆ…!

ದೇಶೀ ತಳಿ ಹಸುವಿನ ಸಗಣಿ ಸೇವಿದರೆ ನಾರ್ಮಲ್ ಡಿಲೆವರಿ…!

ಚಲಿಸುತ್ತಿರೋ ಟ್ರೈನ್ ನಲ್ಲಿದ್ದ R.B.I ನ 225 ಬಾಕ್ಸ್ ನಿಂದ 5.78 ಕೋಟಿ ರೂಪಾಯಿಗಳ ದರೋಡೆ ಮಾಡಿದ ಖದೀಮರು

ಒಲಿಂಪಿಕ್ಸ್ ನಲ್ಲಿ ಕಳ್ಳರ ಕಾಟ, ಭಯಭೀತರಾಗಿರುವ ಪ್ರವಾಸಿಗರು..! #Video

LEAVE A REPLY

Please enter your comment!
Please enter your name here