ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಭಾರತಕ್ಕೆ ಡಬಲ್ ಧಮಾಕಾ.. ಒಂದು ತವರಿನಲ್ಲಿ ನಡೆಯುತ್ತಿರುವ 250ನೇ ಟೆಸ್ಟ್ ಪಂದ್ಯವನ್ನು ಗೆಲುವಿನೊಂದಿಗೆ ಸರಣಿ ತಮ್ಮದಾಗಿಸಿಕೊಂಡಿದ್ದು. ಮತ್ತೊಂದು ಐಸಿಸಿ ಟೆಸ್ಟ್ ಕ್ರಿಕೆಟ್ ರ್ಯಾಂಕಿಂಗ್‍ನಲ್ಲಿ ಸಾಂಪ್ರದಾಯಿಕ ಎದುರಾಳಿಯನ್ನು ಕೆಳಗಿಳಿಸಿ ಮತ್ತೆ ನಂ.1 ಪಟ್ಟಕ್ಕೇರಿದ್ದು. ಇವೆಲ್ಲಾ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿದ್ದು ಪ್ರವಾಸಿ ನ್ಯೂಜಿಲೆಂಡ್ ವಿರುದ್ದದ ಎರಡನೇ ಟೆಸ್ಟ್ ಸರಣಿ. ಈಡನ್‍ಗಾರ್ಡನ್‍ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಎಲ್ಲಾ ವಲಯಗಳಲ್ಲೂ ಅಭೂತಪೂರ್ವ ಪ್ರದರ್ಶನ ತೋರಿ ನ್ಯೂಜಿಲೆಂಡ್ ವಿರುದ್ದ 178 ರನ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿಯನ್ನು 2-0 ಅಂತರದಿಂದ ಗೆದ್ದು ಟ್ರೋಫಿ ತಮ್ಮದಾಗಿಸಿಕೊಂಡಿತು. ಆದರೆ ದ್ವಿತೀಯ ಟೆಸ್ಟ್ ನಲ್ಲಿ ಭಾರತದ ಪಾಲಿಗೆ ದಿ ರಿಯಲ್ ಹೀರೋ ಅಂದ್ರೆ ಅದು ಬೇರ್ಯಾರು ಅಲ್ಲ ವೇಗಿ ಮೊಹಮ್ಮದ್ ಶಮಿ..
ಅಕ್ಷರಷಃ ಸತ್ಯ.. ಭಾರತ-ನ್ಯೂಜಿಲೆಂಡ್ ದ್ವಿತೀಯ ಟೆಸ್ಟ್ ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ಶಮಿ ಎರಡು ಇನ್ನಿಂಗ್ಸ್ ನಿಂದ ಪ್ರಮುಖ ಆರು ವಿಕೆಟ್ ಕಬಳಿಸೋ ಮೂಲಕ ಭಾರತದ ಗೆಲುವಿಗೆ ಮುಖ್ಯ ಪಾತ್ರದಾರಿಯಲ್ಲಿ ಬಬ್ಬರಾದರು ನಿಜ. ಅದಕ್ಕಿಂತಲೂ ಮುಖ್ಯವಾಗಿ ಶಮಿ ಓರ್ವ ಅಪ್ರತಿಮ ದೇಶಾಭಿಮಾನಿ ಎಂಬುದು ನಿಮಗೆ ಗೊತ್ತಿರಲಿ.. ಯಾಕಂದ್ರೆ ಟೆಸ್ಟ್ ಸರಣಿಯ ಎರಡನೇ ದಿನದಾಟದಲ್ಲಿ ಶಮಿಯ 14 ತಿಂಗಳ ಮಗಳು ಐರಾ ತೀವ್ರ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕಕ್ಕೆ ದಾಖಲು ಮಾಡಲಾಗಿತ್ತು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಪುಟ್ಟ ಕಂದಮ್ಮ ಐ.ಸಿ.ಯು.ನಲ್ಲಿದ್ದಾಳೆ ಎಂಬ ವಿಷಯ ತಿಳಿದ ಕೂಡಲೇ ಮಗುವಿನ ಕ್ಷೇಮ ವಿಚಾರಿಸಿಕೊಳ್ಳುತ್ತಾ ಮಗಳ ಜೊತೆಗೆ ಕಾಲ ಕಳೆದ ಶಮಿ ಮೂರನೇ ದಿನದಾಟಕ್ಕೆ ಮತ್ತೆ ಮೈದಾನಕ್ಕಿಳಿದು ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ ನೋಡಿ..
ಇದೀಗ ಮಗುವಿನ ಆರೋಗ್ಯದ ಸ್ಥಿತಿ ಚೇತರಿಕೆ ಕಂಡಿದ್ದು ಡಿಸ್ಚಾರ್ಜ್ ಮಾಡಲಾಗಿದೆ. 26 ವರ್ಷದ ಶಮಿ ಕಳೆದ ಜೂನ್ 6, 2014ರಲ್ಲಿ ಹಸೀನ್ ಜಾಹನ್ ಎಂಬಾಕೆಯನ್ನು ವರಿಸಿದ್ದು ಅವರಿಗೀಗ 14 ತಿಂಗಳ ಮಗಳು ಕೂಡ ಇದೆ.
Like us on Facebook The New India Times
POPULAR STORIES :
ಪ್ರತೀಕಾರ ತೀರಿಸಿ ಸಾವನ್ನಪ್ಪಿತು ನೋಡಿ ಈ ಜಿಂಕೆ..!
ಮತ್ತೊಂದು ಮದುವೆ ವದಂತಿ ಸುಳ್ಳು: ರಾಧಿಕಾ ಕುಮಾರ ಸ್ವಾಮಿ.
24ರ ಹರೆಯದ ಯುವತಿ 68ರ ತಾತನ ಅಚ್ಚರಿಯ ಜುಗಲ್‍ಬಂಧಿ…!
ಲೋಧಾ ಶಿಫಾರಸ್ಸು ಉಲ್ಲಂಘನೆ: 3ನೇ ಟೆಸ್ಟ್ ಪಂದ್ಯ ನಡೆಯೋದು ಬಹುತೇಕ ಡೌಟ್..?
ಪಾಕ್ ವಿರುದ್ದದ ಆನ್ಲೈನ್ ಅರ್ಜಿಯನ್ನು ಆರ್ಕೈವ್ ಪಟ್ಟಿಗೆ ಹಾಕಿ ತನ್ನ ದ್ವಂದ್ವ ನಿಲುವು ಪ್ರದರ್ಶಿದ ಅಮೇರಿಕಾ..!
ಚೆನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿರೋ ಜಯಲಲಿತಾ ಈಗ ಹೇಗಿದ್ದಾರೆ?
ಸಲ್ಮಾನ್, ಶಾರುಖ್, ಅಮೀರ್ ಖಾನ್ ಪಾಕಿಸ್ತಾನಕ್ಕೆ ಹೋಗಲಿ : ಸಾದ್ವಿ ಪ್ರಾಚಿ