ಆ ಮ್ಯಾಚ್ ನ ಸೋಲಿಸಲೇಬೇಕು ಅಂತಾ ಕಣಕ್ಕಿಳಿದಿದ್ರು ನಯನ್ ಮೊಂಗಿಯಾ- ಪ್ರಭಾಕರ್..!

0
75

ಕ್ರಿಕೆಟ್.. ನಮ್ಮ ದೇಶದಲ್ಲಿ ಕೋಟಿ ಕೋಟಿ ಅಭಿಮಾನಿಗಳ ಪಾಲಿನ ಆರಾಧ್ಯ ದೈವದ ಹಾಗೆ.. ಈ ಆಟವನ್ನ ಪೂಜಿಸೋ ಗೌರವಿಸೋ ಇನ್ನೂ ಅದೆಷ್ಟೋ ಕೋಟಿ ಕೋಟಿ ಕ್ರಿಕೆಟ್ ಅಭಿಮಾನಿಗಳು ನಮಲ್ಲಿ ಸಿಗ್ತಾರೆ.. ಇಂತಹ ಮನೋಭಾವಕ್ಕೆ ಕಾರಣ ಒಬ್ಬ ಸಚಿನ್, ಒಬ್ಬ ದ್ರಾವಿಡ್, ಒಬ್ಬ ಶ್ರೀನಾಥ್, ಒಬ್ಬ ಕುಂಬ್ಳೆ ಹೀಗಾಗೆ ಕ್ರಿಕೆಟ್ನ ಮಹಾ ದಿಗ್ಗಜರ ಪಟ್ಟಿ ನಮ್ಮ ಭಾರತೀಯನ ನೆಲೆದಲ್ಲಿದೆ.. ಆದ್ರೆ ಇಂತಹ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಆಶೋತ್ತರಕ್ಕೆ ಬೆಂಕಿ ಇಟ್ಟು ತಮ್ಮ ಬೇಳೆ ಬೇಯಿಸಿಕೊಂಡವರು ನಮ್ಮಲ್ಲಿದ್ಧಾರೆ.. ಈಗಾಗ್ಲೇ ಅಜರ್, ಶ್ರೀಶಾಂತ್ ಸೇರಿದಂತೆ ಮೋಸದಾಟವನ್ನ ಆಡಿ, ಕ್ರಿಕೆಟ್ ಮೇಲಿರೋ ಒಂದಿಷ್ಟು ಪ್ರೀತಿಯನ್ನ ಕಿತ್ತುಕೊಂಡಿದ್ಧಾರೆ.. ಆದ್ರೀಗ ನಿಮಗೊಂದು ಇಂಟ್ರೆಸ್ಟಿಂಗ್ ಮ್ಯಾಚ್ನ ಬಗ್ಗೆ ಹೇಳ ಬೇಕಿದೆ.. ನಾವು ಕೆಳಗಳಡೆ ಪೋಸ್ಟ್ ಮಾಡಿರೋ ವಿಡಿಯೋ ನಿಜವಾದ ಕ್ರಿಕೆಟ್ ಪ್ರೇಮಿಯನ್ನ ಕೆರಳಿಸದೆ ಬಿಡದು.. ಯಾಕಂದ್ರೆ ಅಂತಹದೊಂದು ಮೋಸವನ್ನ ಮಾಡಿದ್ರು ಮನೋಜ್ ಪ್ರಭಾಕರ್ ಹಾಗೆ ನಯನ್ ಮೊಂಗಿಯಾ..
ಅದು 1994 ಆಕ್ಟೋಬರ್ 30ರಂದು ನಡೆದ ವೆಸ್ಟ್ ಇಂಡೀಸ್ ವಿರುದ್ದದ ಪಂದ್ಯ.. ನಮ್ಮ ತಂಡದ 11 ಜನ ಆಟಗಾರರಲ್ಲಿ ಇಬ್ಬರು ಆಟಗಾರರು ಭಾರತವನ್ನ ಸೋಲಿಸಬೇಕು ಅಂತಾ ಕಣಕ್ಕೆ ಇಳಿದಿದ್ರು.. ಒಬ್ಬ ನಯನ್ ಮೊಂಗಿಯಾ ಮತ್ತೊಬ್ಬ ಮನೋಜ್ ಪ್ರಭಾಕರ್..
ಮೊದಲಿಗೆ ಇವ್ರ ಮೋಸದ ಆಟ ಪ್ರೂವ್ ಆಗೋದು ಇಂಡಿಯ ಟೀಮ್ ನ ಬೌಲಿಂಗ್ ನಲ್ಲಿ.. ಯಾಕಂದ್ರೆ ಆ ಪಂದ್ಯದಲ್ಲಿ ವಿಂಡೀಸ್ ನಿಯಮಿತ 50 ಓವರ್ ನಲ್ಲಿ 257ರನ್ ಗಳನ್ನ ಗಳಿಸುತ್ತೆ.. ಈ ಮ್ಯಾಚ್ ನಲ್ಲಿ ಬೌಲಿಂಗ್ ಮಾಡಿದ್ದ ಪ್ರಭಾಕರ್ ತನ್ನ 6 ಓವರ್ನಲ್ಲಿ 8.33ರ ಸರಾಸರಿಯಲ್ಲಿ 50 ರನ್ ನೀಡ್ತಾರೆ.. ಏನು ಮಾಡೋಕೆ ಆಗಲ್ಲ ಬಿಡಿ.. ಅವರ ಕಡೆ ಅಂತಹ ಬ್ಯಾಟಿಂಗ್ ಲೈನ್ ಅಪ್ ಇತ್ತು ಅಂತ ನೀವು ಸಮಧಾನ ತಂದುಕೊಂಡ್ರು ಮುಂದೆ ಓದಿ ಈತನ ಮೋಸದಾಟ ಪ್ರೂವ್ ಆಗುತ್ತೆ.. ಆ ಮ್ಯಾಚ್ ನಲ್ಲಿ ಕನ್ನಡಿಗೆ ಮೈಸೂರು ಎಕ್ಸ್ ಪ್ರೆಸ್ ಶ್ರೀನಾಥ್ ಬೌಲಿಂಗ್ ಮಾಡ್ತಾ ಇರ್ತಾರೆ.. ಆ ಬಾಲ್ ನ ತಡೆದ ಫೀಲ್ಡರ್ ಕೀಪರ್ ಆಗಿದ್ದ ಮೊಂಗಿಯಾ ಕೈಗೆ ಥ್ರೋ ಮಾಡ್ತಾರೆ.. ಆ ಬಾಲ್ ನ ಹಿಡಿದ ಮೊಂಗಿಯಾ ಆಂಡರ್ಸನ್ ರನ್ ಔಟ್ ಮಾಡದೆ, ಆಪೋಸಿಟ್ ನಲ್ಲಿ ಓಡ್ತಿದ್ದವನ ಕಡೆಗೆ ಬಾಲ್ ಎಸೆಯೋಕೆ ಮುಂದಾಗ್ತಾರೆ.. ಇದನ್ನ ಕಂಡ ಶ್ರೀನಾಥ್ ಬೇಸರವನ್ನ ವ್ಯಕ್ತ ಪಡಿಸ್ತಾರೆ.. ಫೈನಲಿ ವೆಸ್ಟ್ ಇಂಡೀಸ್ 50 ಓವರ್ನಲ್ಲಿ 257 ರನ್ ಗಳನ್ನ ಗಳಿಸುತ್ತೆ
ಇದು ಇಂಡಿಯಾ ಟೀಮ್ಗೆ ಅಷ್ಟು ದೊಡ್ಡ ಮೊತ್ತವೇನು ಆಗಿರಲಿಲ್ಲ.. ಯಾಕಂದ್ರೆ ನಮ್ಮ ಕಡೆ ಸಚಿನ್ ತೆಂಡುಲ್ಕರ್, ಅಜಯ್ ಜಡೇಜಾ, ನವ್ಜೋತ್ ಸಿಂಗ್ ಸಿದ್ದು, ವಿನೋದ್ ಕಾಂಬ್ಳಿ, ಅಜರ್ ಬ್ಯಾಟಿಂಗ್ ಲೈನ್ ಅಪ್ ನಲ್ಲಿರ್ತಾರೆ.. ಇನ್ನೂ ಬ್ಯಾಟಿಂಗ್ಗೆ ಇಳಿದಿದ್ದ ಸಚಿನ್ ಭಾರತಕ್ಕೆ ಭರ್ಜರಿ ಓಪನಿಂಗ್ ನೀಡಿ 47 ಎಸೆತಗಳಲ್ಲಿ 34 ರನ್ ಗಳಿಗೆ ಔಟ್ ಆಗಿ ಬಿಡ್ತಾರೆ.. ಇನ್ನೂ ಬ್ಯಾಟಿಂಗ್ ಮುಂದುವರೆಸಿದ ನಮ್ಮ ಟೀಮ್ 41 ಓವರ್ಗಳಿಗೆ 195 ರನ್ ಗಳಿಸುತ್ತೆ.. ಆಗ ಭಾರತಕ್ಕೆ ಗೆಲ್ಲೋಕೆ ಬೇಕಿದದ್ದು 54 ಎಸೆತಗಳಲ್ಲಿ 63 ರನ್ ಗಳಷ್ಟೆ.. ಆದ್ರೆ ಆ ಮೊದಲ ನಾಲ್ಕು ಓವರ್ನಲ್ಲಿ ನಮ್ಮವರು ಗಳಿಸಿದ್ದ ಕೇವಲ 11 ರನ್ ಗಳನ್ನ ಅಂದ್ರೆ ನೀವ್ ನಂಬ್ಲೇಬೇಕು..!
ಹಾಗೆ ಪ್ರಭಾಕರ್ 154 ಬಾಲ್ ಗಳನ್ನ 100 ರನ್ ಗಳಿಸಿ ತನ್ನ ಎರಡನೆ ಸೆಂಚುರಿಯನ್ನ ಬಾರಿಸ್ತಾರೆ.. ಇಷ್ಟು ಚೆನ್ನಾಗಿ ಆಡಿದ ಪ್ರಭಾಕರ್ ಇಂಡಿಯಾ ಟೀಮ್ ಸೋಲೋಕೆ ಹೇಗೆ ಕಾರಣ ಆದ್ರು ಅಂತಾ ನೀವ್ ಯೋಚಿಸ್ತಿರಬೇಕು ಅಲ್ವ..? ಅಸಲಿ ಆಟ ಶುರು ಮಾಡೋದೆ ಇಲ್ಲಿ.. ಯಾಕಂದ್ರೆ ಆ ಮ್ಯಾಚ್ ನ ನಮ್ಮ ತಂಡ 46ರನ್ ಗಳಿಂದ ಸೋತು ಬಿಡುತ್ತೆ.. ಇನ್ ಫ್ಯಾಕ್ಟ್ ಬ್ಯಾಟಿಂಗ್ಗೆ ಬಂದ ನಯನ್ ಮೊಂಗಿಯಾ ಈ ಸಂದರ್ಭದಲ್ಲಿ 2೧ ಬಾಲ್ ಗಳನ್ನ ಫೇಸ್ ಮಾಡಿ ಗಳಿಸಿದ್ದು ಎಷ್ಟು ರನ್ ಗೊತ್ತ..? ಕೇವಲ 4.. ಇನ್ನೂ ಸಚಿನ್ ಜೊತೆ ಬ್ಯಾಟಿಂಗ್ಗೆ ಇಳಿದಿದ್ದ ಪ್ರಭಾಕರ್ ಸಚಿನ್ ಕ್ಯಾಚ್ ಕೊಟ್ಟು ಔಟ್ ಆದ ಬಳಿಕ ಈತನೊಂದಿಗೆ ಬ್ಯಾಟಿಂಗ್ಗೆ ಇಳಿದವರಲ್ಲಿ ಅಜರ್ ಬಿಟ್ಟು ಕಾಂಬ್ಳಿ, ಸಿದ್ದು, ಜಡೇಜ ಈ ಮೂವರು ರನ್ ಔಟ್ ಆಗ್ತಾರೆ.. ಅದ್ರೆ ಪ್ರಭಾಕರ್ ಮಾತ್ರ ತನ್ನ ಆಮೆಗತಿ ಬ್ಯಾಟಿಂಗ್ ಮುಂದುರವೆಸಿದ್ರು..
ಆನಂತರ ಪ್ರಭಾಕರ್ ಜೊತೆ ಸೇರಿದ ನಯನ್ ಮೊಂಗಿಯಾ ಭಾರತದ ಗೆಲುವಿನ ಕನಸನ್ನ ನುಚ್ಚುನೂರು ಮಾಡಿಬಿಟ್ರು.. ಈ ಇಬ್ಬರ ಕಳ್ಳಾಟ ಪ್ರೂವ್ ಆಗಿ ಇವರನ್ನ ಮ್ಯಾಚ್ ನಿಂದ ಬ್ಯಾನ್ ಮಾಡಲಾಗಿತ್ತು.. ನಂತರ ಅಂದ್ರೆ 1997ರಲ್ಲಿ ಈ ಬಗ್ಗೆ ಮಾತಾನಾಡಿ ಪ್ರಭಾಕರ್ `ತಾನು ಬ್ಯಾಟಿಂಗ್ ಮಾಡೋ ಸಂದರ್ಭದಲ್ಲಿ ಬಂದ ನಯನ್ ಮೊಂಗಿಯಾ ನನಗೆ ನಿಧಾನಗತಿಯ ಬ್ಯಾಟಿಂಗ್ ಮಾಡುವಂತೆ ಸೂಚಿಸಿ, ಇದು ಮೇಲಿನವರ ಆರ್ಡರ್ ಅಂತಾ ಕೂಡ ಹೇಳಿದ್ದ.. ಜೊತೆಗೆ ಆತ ಕೂಡ ಹಾಗೆ ಆಡಿದ್ದ.. ಆದ್ರೆ ನಾನು ಕೊನೆಯ 46 ಎಸೆತಗಳಲ್ಲಿ 11 ಬಾಲ್ ಗಳನ್ನ ಪಾತ್ರ ಫೇಸ್ ಮಾಡ್ದೆ.. ಜೊತೆಗೆ 9 ರನ್ ಗಳಿಸಿದೆ.. ಉಳಿದಿದ್ದು ಮೊಂಗಿಯಾ ಆಟವಾಗಿತ್ತು ಅಂತ ಹೇಳಿದ್ಧಾರೆ.. ಜೊತೆಗೆ ನನ್ನದೇನು ತಪ್ಪಿಲ್ಲ ಅಂತಾ 1997ರಲ್ಲಿ ತನ್ನ ವಾದವನ್ನ ಮಂಡಿಸ್ತಾರೆ.. ಇದರಲ್ಲಿ ನನ್ನದೆ ತಪ್ಪಿಲ್ಲ ಇದೆಲ್ಲದಕ್ಕೂ ಕಾರಣ ಮೊಂಗಿಯಾ ಅಂತಾ.. ಆದ್ರೆ ಆಗೀನ ಚೀಫ್ ಜೆಸ್ಟಿಸ್ ಯಶ್ವಂತ್ ವಿಷ್ಣು ಚಂದ್ರಚೂಡ ಅವ್ರು ಈ ವಾದವನ್ನ ಪುರಸ್ಕರಿಸೋದಿಲ್ಲ.. 1994ರಲ್ಲಿ ನಡೆದ ಮ್ಯಾಚ್ ಗೆ ಸಂಬಂದ ಪಟ್ಟಂತೆ ಈಗ ನೀವೂ ವಾದವನ್ನ ಮಂಡಿಸಿ ಪ್ರಯೋಜನವಿಲ್ಲ ಅಂತಾ ತಿಳಿಸ್ತಾರೆ.. ಆದ್ರೆ ದಂಡ ಕಟ್ಲಿ ಅಥವಾ ಮ್ಯಾಚ್ನಿಂದ ಹೊರಹಾಕ್ಲಿ, ಇಂತಹ ಮ್ಯಾಚ್ ಫಿಕ್ಸಿಂಗ್ನಿಂದ ಸುಲಭವಾಗಿ ನಮ್ಮ ತಂಡ ಗೆಲ್ಲುತ್ತೆ ಅಂತಾ ಕಾದವವರಿಗೆ ಈ ಇಬ್ಬರು ಮಾಡಿದ ಮೋಸವಿದ್ಯಲ್ಲ ಅದು ಎಂದಿಗೂ ಕ್ಷಮಿಸಲಾಗದಂತಹದ್ದು ಏನಂತೀರಾ..?

Match Fixing Video :

  • ಅಶೋಕ

If you Like this Story , Like us on Facebook  The New India Times

POPULAR  STORIES :

ಯೂಟ್ಯೂಬ್ ನಲ್ಲಿ ಕಾಣಿಸಿದವಳೇ ಸೋದರಿಯಾಗಿದ್ದಳು..! ಇದು ಅವಳಿ-ಜವಳಿ ಸೋದರಿಯರ ಬ್ಯೂಟಿಫುಲ್ ಸ್ಟೋರಿ…!

ವಿಚಿತ್ರ ಬೌಲಿಂಗ್ ಶೈಲಿ..! ತಬ್ಬಿಬ್ಬಾಗ್ತಾರೆ ಬ್ಯಾಟ್ಸ್ ಮೆನ್ ಗಳು..!

ಪತ್ನಿಯ ಮೊಬೈಲ್ ನಲ್ಲಿ ಅಶ್ಲೀಲ ಸಂದೇಶ..! ಓದಿಕೊಂಡ ಹೆಂಡ್ತೀನಾ ಪ್ರಶ್ನಿಸಬಾರದಾ..!?

ಬಹುನಿರೀಕ್ಷಿತ 3 ಪೆಗ್ ಕನ್ನಡ ರ್ಯಾಪ್ ಸಾಂಗ್ ..!

70 ವರ್ಷದ ಕುರುಡು ಅಜ್ಜಿಗೆ ಕಣ್ಣುಬಂತು..!? ವಿಜ್ಞಾನವನ್ನೇ ಬೆಚ್ಚಿಬೀಳಿಸಿದ ಘಟನೆ..!

ಹಾಸನ ಸೂಸೈಡ್ ಕೇಸ್ಗೆ ಟ್ವಿಸ್ಟ್..! ಅವನ ಸಾವಿಗೆ ಕಾರಣವಾಗಿದ್ದು `ಪ್ರೇಯಸಿ’ ರೂಪದ ಅತ್ತಿಗೆ..!

LEAVE A REPLY

Please enter your comment!
Please enter your name here