ಹಿಂದಿ ಕೆಜಿಎಫ್ ನಲ್ಲಿ ತಮನ್ನಾ ಔಟ್..!! ಈಕೆ ಬದಲಿಗೆ ಯಶ್ ಜೊತೆಗೆ ಬಳುಕುವ ಚೆಂದುಳ್ಳಿ ಚೆಲುವೆ ಯಾರು ಗೊತ್ತಾ..!!
ಈಗಾಗ್ಲೇ ಕೆಜಿಎಫ್ ಟ್ರೇಲರ್ ಹಾಗೆ ಸಲಾಂ ರಾಕಿ ಭಯ್ ಹಾಡುಗಳು ಪ್ರೇಕ್ಷಕರಿಗೆ ಕಿಕ್ ಹೆಚ್ಚಿಸಿದೆ.. ಇದರ ಜೊತೆಗೆ ಕನ್ನಡದ ಎವರ್ ಗ್ರೀನ್ ಹಾಡು ಜೋಕೆ ನಾನು ಬಳ್ಳಿಯ ಮಿಂಚು ಸಾಂಗ್ ಅನ್ನ ಬಳಸಲಾಗಿದೆ.. ಇದರಲ್ಲು ಯಶ್ ಜೊತೆಗೆ ತಮನ್ನಾ ಹೆಜ್ಜೆ ಹಾಕಿದ್ದಾರೆ.. ಈಗ ಹಿಂದಿಯಲ್ಲಿ ತೆರೆಗೆ ಬರೋಕೆ ಸಿದ್ದವಾಗಿರೋ ಕೆಜಿಎಫ್ ಚಿತ್ರದಿಂದ ಈ ಹಾಡು ಹಾಗೆ ತಮನ್ನಾರನ್ನ ಕಟ್ ಮಾಡಲಾಗಿದೆ..
ಹೌದು ಹಿಂದಿ ಆಡಿಯನ್ಸ್ ಗೆ ರೀಚ್ ಆಗಬೇಕಾಗಿರೋದ್ರಿಂದ ಅಲ್ಲಿನ ಸೂಪರ್ ಹಿಟ್ ಹಳೆ ಗೀತೆಗೆ ಮತ್ತೆ ಯಶ್ ಡ್ಯಾನ್ಸ್ ಮಾಡಲ್ಲಿದ್ದಾರೆ.. ಅದು ಜಾಕಿ ಶ್ರಾಫ್ – ಸಂಗೀತ ಬಿಜ್ಲಾನಿ ನಟನೆಯ ‘ತ್ರಿದೇವ್’ ಬಿ ಟೌನ್ನ ಸೂಪರ್ ಹಿಟ್ ಸಿನಿಮಾದ್ದಾಗಿದೆ.. ಈ ಸಿನಿಮಾದ ‘ಗಲ್ಲಿ ಗಲ್ಲಿ ಮೇನ್ ಪಿಥ್ರಾ ಹೈ..’ ಎಂಬ ಹಿಟ್ ಪಾರ್ಟಿ ಸಾಂಗ್ ಈಗ ಹಿಂದಿ ಕೆಜಿಎಫ್ನಲ್ಲಿ ಇರಲಿದೆ..
ತಮನ್ನಾ ಬದಲಾಗಿ ಬಾಲಿವುಡ್ ಬ್ಯೂಟಿ ಮೌನಿ ರಾಯ್ ಯಶ್ ಜೊತೆಗೆ ಈ ಹಾಡಿಗೆ ಸಖತ್ತಾಗೆ ಸ್ಟೆಪ್ ಹಾಕಲ್ಲಿದ್ದು ನಾಳೆಯಿಂದಲೇ ಶೂಟಿಂಗ್ ಶುರುವಾಗಲಿದ್ದು, ಮುಂಬೈನ ಗೊರೆಗಾಂವ್ ಸ್ಟುಡಿಯೋನಲ್ಲಿ ಚಿತ್ರೀಕರಣ ಜರುಗಲಿದೆ..