ರಾಕಿಂಗ್ ಸ್ಟಾರ್ ಯಶ್ ಗೆ ಒಂದೊಳ್ಳೆ ಬ್ರೇಕ್ ನೀಡಿ, ಸಖತ್ ನೇಮ್ ಅಂಡ್ ಫೇಮ್ ತಂದುಕೊಟ್ಟಿದ್ದು ಕಿರಾತಕ ಸಿನಿಮಾ.
ಈಗ ಯಶ್ ‘ಮೈ ನೇಮ್ ಈಸ್ ಕಿರಾತಕ’ ಎಂದು ಮತ್ತೆ ಕ್ವಾಟ್ಲೆ ನಂದೀಶ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕೆಜಿಎಫ್ ಚಿತ್ರಕ್ಕಾಗಿ ಎರಡು ವರ್ಷದಿಂದ ಬಿಟ್ಟಿದ್ದ ಗಡ್ಡಕ್ಕೆ ಕತ್ತರಿ ಬಿದ್ದಿದ್ದು ನಿಮಗೆ ಈಗಾಗಲೇ ಗೊತ್ತಿದೆ.
ಮೈ ನೇಮ್ ಈಸ್ ಕಿರಾತಕದ ಗೆಟಪ್ ಅನ್ನು ಯಶ್ ತಮ್ಮ ಫೇಸ್ ಬುಕ್ ಪೇಜಲ್ಲಿ ಹಾಕಿದ್ದಾರೆ. ಶಾರ್ಟ್ ಹೇರ್ ಕಟಿಂಗ್, ರಂಗು ರಂಗಿನ ಬಟ್ಟೆ, ಕನ್ನಡಕ ಕಿರಾತಕನ ಹೊಸ ಅವತಾರ.
ಚಿತ್ರೀಕರಣ ದುಬೈ ಮತ್ತು ಮಂಡ್ಯ ಸುತ್ತಮುತ್ತ ನಡೆಯಲಿದೆ.