ಯಾವಾಗ ನೋಡಿದ್ರು, ನಮ್ದೇ ಕಷ್ಟ ಕಷ್ಟ ಅಂತ ಹೇಳ್ತಾ ಇರ್ತೀವಿ..! ನಮಗಿಂತಲೂ ಎಷ್ಟೋ ಜನ ತುಂಬಾ ಕಷ್ಟದಲ್ಲಿದ್ದಾರೆ..! ಈ ಚಿತ್ರದಲ್ಲಿ ಕಾಣ್ತಾ ಇರೋ ಹುಡುಗನೂ ಕೂಡ ತುಂಬಾ ಅಂದ್ರೆ ತುಂಬಾನೇ ಕಷ್ಟದಲ್ಲಿದ್ದಾನೆ..! ಆಟ ಆಡ್ಕೊಂಡು ಕಾಲ ಕಳೆಯಬೆಕಾದ ವಯಸ್ಸಲ್ಲಿ ಶೂ ಪಾಲಿಶ್ ಮಾಡಿ ತನ್ನ ತಾಯಿ ಜೊತೆ ಜೀವನ ನಡೆಸುತ್ತಾ ಇದ್ದಾನೆ..! 14-15 ವರ್ಷ ಆಸುಪಾಸಿನ ಈ ಹುಡುಗ ಇರೋದು ಮುಂಬೈನಲ್ಲಿ.
ಜನ ಬರ್ತಾರೆ, ಗಡಿಬಿಡಿಯಿಂದ ಇವನತ್ರ ಶೂ ಪಾಲಿಶ್ ಮಾಡಿಸಿಕೊಳ್ತಾರೆ..ಬೇಗ ಬೇಗನೆ ಆಫೀಸ್ ಗೆ ಹೋಗ್ತಾರೆ..! ಆದ್ರೆ ಈ ಹುಡುಗನ ಅಳು ಮಾತ್ರ ಯಾರೂ ಕೇಳಲ್ಲ..! `ನಾನು ದಿನಾ ಶೂಪಾಲೀಶ್ ಮಾಡ್ತೀನಿ, ಮನೆಯಲ್ಲಿ ಅಮ್ಮನ ಜೊತೆ ಇದ್ದೇನೆ…! ಕೇವಲ 50-60 ರೂಪಾಯಿಗಳನ್ನು ಮಾತ್ರ ಸಂಪಾದನೆ ಮಾಡೋಕೆ ಆಗೋದು ಅಂತ ಅಳ್ತಾನೆ..! ಇಲ್ಲಿ ಓಡಾಡೋ ಜನರಿಗೆ, ಶೂ ಪಾಲೀಶ್ ಮಾಡಿಸಿಕೊಳ್ಳುವವರಿಗ್ಯಾರಿಗೂ ಈ ಪುಟ್ಟ ಹುಡುಗನ ಸಂಕಟ ಅರ್ಥವಾಗಲ್ವಲ್ಲಾ..? ಹೆಚ್ಚು ಕಡಿಮೆ 15000-20000 ಐಟಿ ಇಂಜಿನಿಯರ್ ಗಳು ಇದ್ದಾರೆ..! ಇವರಲ್ಲಿ ಒಂದಿಷ್ಟು ಜನ ಆದ್ರೂ ಈ ಪುಟ್ಟ ಬಾಲಕನಿಗೆ ಸಹಾಯ ಮಾಡ್ಬಹುದು..! ಈ ಹುಡುಗ ಅನೇಕರಲ್ಲಿ ಒಬ್ಬ..ಇವನಂಥೆ ಕಷ್ಟದಲ್ಲಿರುವವರು ತುಂಬಾ ಜನ ಇದ್ದಾರೆ..! ನಮ್ಮ ಬಳಿ ಓಡಾಡೋಕೆ ಬೈಕಿದೆ, ಕಾರಿದೆ.. ಮನೆಯಲ್ಲಿ ಟಿವಿ ಇದೆ, ಮೊಬೈಲ್ ಇದೆ , ಇಂಟನೆಟ್ ಇದೆ ಎಲ್ಲಾ ಇದೆ..! ಆದ್ರೂ ಕಷ್ಟ ಕಷ್ಟ ಅಂತ ಹೇಳ್ತೀವಿ..! ಆದ್ರೆ, ಇಂಥಾ ಪುಟ್ಟ ಮಕ್ಕಳ ಲೈಫ್ ಬಗ್ಗೆ ಯಾವತ್ತಾದ್ರು ಯೋಚನೆ ಮಾಡಿದ್ದೀವಾ..?!
- ಶಶಿಧರ ಡಿ ಎಸ್ ದೋಣಿಹಕ್ಲು
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com