26 ಕೋಟಿ ರೂಪಾಯಿ ವೆಚ್ಚದಲ್ಲಿ ಮೈಸೂರು ದಸರಾ ಮಹೋತ್ಸವ ನಡೆದಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಲೆಕ್ಕ ಕೊಟ್ಟಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತ್ನಾಡಿದ ಅವರು, ಮೈಸೂರು ದಸರಾಗೆ ಒಟ್ಟು 26 ಕೋಟಿ 54 ಲಕ್ಷದ 49 ಸಾವಿರದ 58 ರೂ. ಖರ್ಚು ಮಾಡಲಾಗಿದೆ.
ಮಂಡ್ಯ, ಚಾಮರಾಜನಗರ, ಹಾಸನ ದಸರಾಗೆ 2 ಕೋಟಿಯ 20 ಲಕ್ಷ ರೂಪಾಯಿ ಖರ್ಚಾಗಿದೆ.
ಒಟ್ಟಾಗಿ ದಸರಾ ಮಹೋತ್ಸವಕ್ಕೆ 28 ಕೋಟಿ 74 ಲಕ್ಷ 49 ಸಾವಿರದ 58 ರೂಪಾಯಿ ಬಳಕೆ ಆಗಿದೆ.
ದಸರಾಗೆ ಒಟ್ಟು 31 ಕೋಟಿ 8 ಲಕ್ಷದ 88 ಸಾವಿರ 819 ರೂಪಾಯಿ ಕ್ರೋಢೀಕರಣವಾಗಿತ್ತು. ಈ ಪೈಕಿ 28 ಕೋಟಿ 74 ಲಕ್ಷ 49 ಸಾವಿರದ 58 ರೂ. ಬಳಕೆ ಆಗಿದ್ದು, ಮೈಸೂರು ರಾಜವಂಶಸ್ಥರಿಗೆ 47 ಲಕ್ಷ ಗೌರವ ಧನ ನೀಡಲಾಗಿದೆ. ದಸರಾಗೆ ಕ್ರೋಢೀಕರಣವಾಗಿದ್ದ 31 ಕೋಟಿಯಲ್ಲಿ 1.26 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಲೆಕ್ಕ ನೀಡಿದ್ದಾರೆ .
ಮೈಸೂರು ದಸರಾ ಮಹೋತ್ಸವ ವೆಚ್ಚ ಎಷ್ಟು ಗೊತ್ತಾ ?
Date: