ಆಪ್ತಮಿತ್ರ ಸಿನಿಮಾ ರಿಲೀಸ್ ಗೂ ಮುನ್ನ ನಟಿ ಸೌಂದರ್ಯ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ರು. ಆಪ್ತರಕ್ಷಕ ಸಿನಿಮಾ ಬಿಡುಗಡೆಗೆ ಮುನ್ನು ಸಾಹಸಸಿಂಹ ವಿಷ್ಣುವರ್ಧನ್ ಅಗಲಿದರು. ವಿಷ್ಣುವರ್ಧನ್ ಮತ್ತು ಸೌಂದರ್ಯ ಸಾವಿಗೆ ನಾಗವಲ್ಲಿ ಕಾರಣ ಎಂಬುದು ಕೆಲವರ ಅಭಿಪ್ರಾಯ. ವಿಷ್ಣುವರ್ಧನ್ ಮತ್ತು ಸೌಂದರ್ಯ ಸಾವಿಗೆ ನಾಗವಲ್ಲಿ ಹೇಗೆ ಕಾರಣಳಾಗುತ್ತಾಳೆ ಎಂಬುದನ್ನು ಪತ್ತೆ ಮಾಡೋ ಸಾಹಸಕ್ಕೆ ಆಪ್ತಮಿತ್ರರು ಕೈ ಹಾಕಿದ್ದಾರೆ…!
ಇದು ರಿಯಲ್ ಅಲ್ಲ, ರೀಲ್. ಹೌದು ಆಪ್ತಮಿತ್ರ, ಆಪ್ತರಕ್ಷಕ ಸಿನಿಮಾಗಳ ಕಥೆಯನ್ನು ಆಧಾರವಾಗಿಟ್ಟುಕೊಂಡು ವಿಷ್ಣುವರ್ಧನ್ ಹಾಗೂ ಸೌಂದರ್ಯ ಸಾವಿಗೆ ನಾಗವಲ್ಲಿ ಹೇಗೆ ಕಾರಣಳಾಗ್ತಾಳೆ ಎಂಬ ಎಳೆಯನ್ನಿಟ್ಟುಕೊಂಡು ‘ನಾಗವಲ್ಲಿ vs ಆಪ್ತಮಿತ್ರರು’ ಸಿನಿಮಾ ನಿರ್ಮಾಣವಾಗುತ್ತಿದ್ದು, ಈಗಾಗಲೇ ಚಿತ್ರದ ಟ್ರೇಲರ್ ಸದ್ದು ಮಾಡ್ತಿದೆ. ನಾಗವಲ್ಲಿಯ ಕೇರಳ ಅರಮನೆಯಲ್ಲೇ ಚಿತ್ರೀಕರಣ ನಡೆದಿದೆ. ವಿಕ್ರಂ ಕಾರ್ತಿಕ್, ವೈಷ್ಣವಿ ಮೇನನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಷ್ಣು ಸಾವಿಗೆ ನಾಗವಲ್ಲಿ ಕಾರಣ ಹೇಗೆಂದು ತಿಳಿಯಲು ಅವರ ಅಭಿಮಾನಿಗಳು ನಾಗವಲ್ಲಿ ಅರಮನೆಗೆ ಹೋಗುತ್ತಾರೆ. ಕೊನೆಗೆ ಆಕೆ ಅವಳಿಗೆ ಸಿಗುತ್ತಾಳೋ, ಏನಾಗುತ್ತೆ ಎನ್ನೋದೇ ‘ನಾಗವಲ್ಲಿ vs ಆಪ್ತಮಿತ್ರರು’ ಸಿನಿಮಾ. ಶೀಘ್ರದಲ್ಲೇ ನಿಮ್ಮಮುಂದೆ ಬರಲಿದೆ.