ಅಂಬಿ ಅವರನ್ನ ನೆನೆದು ನಟ ಯಶ್ ಹೀಗೆ ಹೇಳಿದ್ರು..
ಕೆಜಿಎಫ್ ಸಕ್ಸಸ್ ನಲ್ಲಿ ತೇಲುತ್ತಿರುವ ಸಿನಿಮಾ ಟೀಮ್, ಇಂದು ಚಿತ್ರರಸಿಕರಿಗೆ ಸಖತ್ ಮನರಂಜನೆಯ ಔತಣವನ್ನ ಬಡಿಸಿದೆ.. ಕೋಟ್ಯಾಂತರ ಚಿತ್ರಪ್ರೇಮಿಗಳು ಕೆಜಿಎಫ್ ಗೆ ಜೈ ಎನ್ನುತ್ತಿದ್ದಾರೆ.. ಇಡೀ ಯಶ್ ಅಭಿಮಾನಿ ವಲಯದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.. ಈ ನಡುವೆ ಯಶ್ ಅವರಿಗೆ ಅಂಬಿ ಅವರ ನೆನಪು ಕಾಡುತ್ತಿದೆ..
ಇಂದು ಅಂಬರೀಶ್ ಅವರ ಮೊದಲ ಪುಣ್ಯ ತಿಥಿಯನ್ನ ಕುಟುಂಬದವರು ನೆರವೇರಿಸಿದ್ದಾರೆ.. ಈ ಹಿಂದೆ ರೆಬಲ್ ಸ್ಟಾರ್ ಅಂಬರೀಶ್ ಅವರು ಕೆಜಿಎಫ್ ಸಿನಿಮಾ ಪ್ರೆಸ್ ಮೀಟ್ ಒಂದರಲ್ಲಿ ಪಾಲ್ಗೊಂಡು ಇಡೀ ಚಿತ್ರತಂಡಕ್ಕೆ ಶುಭಾಶಯ ಕೋರಿದ್ರು.. ಅಂಬಿ ಅವರು ಇಂದು ನಮ್ಮೊಂದಿಗೆ ಇದ್ದಿದ್ರೆ ಇಷ್ಟರಲ್ಲಾಗಲೇ ಕೆಜಿಎಫ್ ವೀಕ್ಷಿಸಿ ಬರುತ್ತಿದ್ರು.. ಹೀಗಾಗೆ ಯಶ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ‘ಮಿಸ್ ಯು ಅಣ್ಣ‘ ಎನ್ನುತ್ತ ಈ ಸಂದರ್ಭದಲ್ಲಿ ಅಂಬರೀಶ್ ಅವರನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ..