ದರ್ಶನ್, ಯಶ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವು ನಟರ ಸಿನಿಮಾಗಳನ್ನ ನೋಡುವ ಅವಕಾಶ ಮುಂದಿನ ವರ್ಷದ ನವ ವಸಂತದಲ್ಲಿ ಅಭಿಮಾನಿಗಳಿಗೆ ಸಿಗಲಿದೆ.. ಹೌದು, ದರ್ಶನ್ ಅವರನ್ನ ಬೆಳ್ಳಿ ತೆರೆ ಮೇಲೆ ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಅಭಿಮಾನಿಗಳಿಗೆ ಬಾರಿ ನಿರಾಸೆಯಾಗಿದ್ದು, ಜನವರಿಯಲ್ಲಿ ಕುರುಕ್ಷೇತ್ರ ತೆರೆಗೆ ಬರುವ ಮುನ್ಸೂಚನೆಯನ್ನ ನೀಡಿದ್ದಾನಾದ್ರು ಅದ್ಯಾಕೋ ಇನ್ನೂ ಡೌಟ್ ನಲ್ಲೆ ಇದೆ..ಈ ನಡುವೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾ ಜನವರಿಗೆ ಬರೋದು ಪಕ್ಕ ಆಗಿದ್ದು, 23 ಕ್ಕೆ ತೆರೆ ಬರುವ ಸಾಧ್ಯತೆ ಹೆಚ್ಚಾಗಿದೆ.. ಇದರ ಜೊತೆಗೆ ಶಿವಣ್ಣ ಅಭಿನಯದ ಕವಚ ಸಹ ಮುಂದಿನ ತಿಂಗಳಲ್ಲೇ ತೆರೆಗೆ ಬರಲಿದೆ.. ಇದರೊಂದು ಇದೇ ಹ್ಯಾಟ್ರಿಕ್ ಹೀರೊ ಅಭಿನಯದ ರುಸ್ತುಂ ಸಹ ನೆಕ್ಸ್ಟ್ ಮಂಥ್ ಬರೋಕೆ ಪ್ಲಾನ್ ನಲ್ಲಿದೆ…
ಇದೆಲ್ಲದರ ನಡುವೆ ಕುರುಕ್ಷೇತ್ರ ತೆರೆಗೆ ಬಂದಿದ್ದೆ ಆದರೆ ಅದರ ಬೆನ್ನಲ್ಲೇ ನಿಖಿಲ್ ಕುಮಾರ್ ಸ್ವಾಮಿ ಅಭಿನಯದ ಮತ್ತೊಂದು ಸಿನಿಮಾ ಸೀತಾರಾಮಕಲ್ಯಾಣ ಕೂಡ ತೆರೆಗೆ ಬರೋದು ಖಚಿತವಾಗಿದ್ದು, ಕಿಚ್ಚನ ಪೈಲ್ವಾನ್ಗೂ ಇದೇ ತಿಂಗಳಲ್ಲಿ ಬಿಡುಗಡೆಗೆ ಮುಹೂರ್ತ ಇಡಲಾಗಿತ್ತಿದೆಯಂತೆ.. ಒಟ್ಟಿನಲ್ಲಿ ಬ್ಯಾಕ್ ಟು ಬ್ಯಾಕ್ ಸ್ಟಾರ್ ಸಿನಿಮಾಗಳೆ ಪ್ರೇಕ್ಷಕರನ್ನ ಹೊಸ ವರ್ಷದಲ್ಲಿ ರಂಜಿಸಲು ರೆಡಿಯಾಗಿವೆ..
ಹೊಸ ವರ್ಷದಲ್ಲಿ ಸ್ಟಾರ್ ದರ್ಬಾರ್..!!
Date: