ನಾಳೆ ಬೆಳಗ್ಗೆವರಗೂ ಸಾರ್ವಜನಿಕರ ದರ್ಶನ.. ನಂತರ ಕಂಠೀರವ ಸ್ಟುಡಿಯೋನಲ್ಲಿ ಅಂತ್ಯ ಸಂಸ್ಕಾರ..
ಮಂಡ್ಯದ ಗಂಡು ಅಂಬಿ ಅವರ ಪಾರ್ಥಿವ ಶರೀರ ಸಾರ್ವಜನಿಕರ ದರ್ಶನಕ್ಕಾಗಿ ಕಂಠೀರವ ಸ್ಟೇಡಿಯಂನಲ್ಲಿ ಇರಿಸಲಾಗಿದೆ.. ಕೋಟ್ಯಾಂತರ ಅಭಿಮಾನಿಗಳು ರೆಬಲ್ ಸ್ಟಾರ್ ಅವರನ್ನ ನೋಡಲು ಆಗಮಿಸುತ್ತಿದ್ದಾರೆ.. ಚಿತ್ರರಂಗ, ರಾಜಕೀಯ ಹೀಗೆ ಎಲ್ಲ ಕ್ಷೇತ್ರದ ಗಣ್ಯರು ಅಂಬಿ ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ…
ಇನ್ನೂ ನಾಳೆ ಬೆಳಗ್ಗೆ 6 ಗಂಟೆಯ ವರೆಗೆ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದೆ.. ಆನಂತರ ಕಂಠೀರವ ಕ್ರೀಡಾಂಗಣದಿಂದ ಕಂಠೀರವ ಸ್ಟುಡಿಯೋಗೆ ಅಂಬರೀಶ್ ಅವರ ಪಾರ್ಥಿವ ಶರೀರವನ್ನ ಮೆರವಣಿಗೆ ಮೂಲಕ ತರಲಾಗುತ್ತೆ.. ಆನಂತರ ಅಲ್ಲೇ ಅವರ ಅಂತ್ಯ ಸಂಸ್ಕಾರ ನಡೆಯಲಿದೆ..