ತಮಿಳುನಾಡು ಸಿಎಂ ಜಯಲಲಿತಾ ಅವರು ಕಳೆದ 15 ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದಾರೆ.. ಆದ್ರೆ ಇದರ ನಡುವೆ ಜಯಲಲಿತಾ ಅವರ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹಬ್ಬಿಸಿ ಭಾರೀ ಚರ್ಚೆಗಳೂ ನಡೆದಿತ್ತು. ಜಯಲಲಿತಾ ಅವರ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಅವರ ಪರಮ ಆಪ್ತ ಪನ್ನೀರ್ ಸೆಲ್ವಂ ಮುಂದಿನ ಸಿಎಂ ಆಗಿ ಅಧಿಕಾರ ಗದ್ದುಗೆಗೆ ಏರುತ್ತಾರೆ ಎಂಬ ಊಹಾಪೋಹಗಳಿಗೂ ಇದೀಗ ಅಚ್ಚರಿಯ ಉತ್ತರವೊಂದು ಸಿಕ್ಕಿದೆ..! ಮೂಲಗಳು ಹೇಳಿರುವಂತೆ ಸ್ವತಃ ಜಯಲಲಿತಾ ಅವರೇ ಮುಂದಿನ ಸಿಎಂ ಯಾರು ಎಂಬ ವಿಲ್ ಬರೆದಿದ್ದಾರೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ನೋಡಿ..
ಜಯಲಲಿತಾ ಅವರ ಆಪ್ತರ ಕೈ ಸೇರಿರುವ ಆ ವಿಲ್‍ನಲ್ಲಿ ಜಯಲಲಿತಾ ಅವರು ಸೂಚಿರುವ ವ್ಯಕ್ತ್ತಿ ಓರ್ವ ತಮಿಳು ಸಿನಿಮಾದ ಸ್ಟಾರ್ ನಟ. ತಮಿಳುನಾಡನ್ನು ಸಮರ್ಥವಾಗಿ ನಿಭಾಯಿಸಬಲ್ಲ ಓರ್ವ ಆಕರ್ಷಕ ನಟರನ್ನು ಜಯಲಲಿತಾ ಆಯ್ಕೆ ಮಾಡಿದ್ದಾರಂತೆ.. ಅದು ಬೇರ್ಯಾರೂ ಅಲ್ಲ ಸೂಪರ್ ಸ್ಟಾರ್ ಅಜಿತ್..!
ಹೌದು.. ಜಯಲಲಿತಾ ಅವರ ಆರೋಗ್ಯದ ಸ್ಥಿತಿ ಇನ್ನೂ ಸುಧಾರಿಸದೇ ಇರುವ ಹಿನ್ನಲೆಯಲ್ಲಿ ಮುಂದಿನ ಹಂಗಾಮಿ ಸಿಎಂ ನಟ ಅಜಿತ್ ಕುಮಾರ್ ಅವರಾಗಬೇಕು ಎಂದು ವಿಲ್ ಬರೆದಿದ್ದಾರಂತೆ.. ಹೀಗಾಗಿ ಜಯಲಲಿತಾ ಅವರು ಚೇತರಿಕೊಳ್ಳದೇ ಹೋದ ಸಂದರ್ಭದಲ್ಲಿ ನಟ ಅಜಿತ್ ಅವರಿಗೆ ಸಿಎಂ ಪಟ್ಟ ಒಲಿಯೋದು ಖಚಿತ ಎಂದು ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.. ಈ ಹಿಂದೆ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಲಲಿತಾ ಅವರು ಸಿಎಂ ಸ್ಥಾನದಿಂದ ಕೆಳಗಿಳಿದಿದ್ದ ವೇಳೆ ಅವರ ಆಪ್ತ ಪನ್ನೀರ್ ಸೆಲ್ವಂ ಅವರು ಹಂಗಾಮಿ ಸಿಎಂ ಆಗಿ ನೇಮಕ ಮಾಡಲಾಗಿತ್ತು. ಆದರೆ ಪಕ್ಷದ ಮೂಲಗಳು ತಿಳಿಸಿರುವಂತೆ ಪನ್ನೀರ್ ಸೆಲ್ವಂ ಮುಂದಿನ ಸಿಎಂ ಆಗೋದು ಬಹುತೇಕ ಸಂಶಯ ಎನ್ನಲಾಗ್ತಾ ಇದ್ದು, ರಾಜಕೀಯದ ಅನುಭವವೇ ಗೊತ್ತಿಲ್ಲದ ನಟ ಅಜಿತ್ ಕುಮಾರ್ ಅವರು ಮುಂದಿನ ಸಿಎಂ ಆಗಲಿದ್ದಾರೆ ಎಂಬ ಜಯಾಲಲಿತಾ ನಿರ್ಧಾರ ಎಲ್ಲರಲ್ಲೂ ಅಚ್ಚರಿಯುಂಟು ಮಾಡಿದೆಯಲ್ಲದೇ ಏನೂ ತಿಳಿಯದ ವ್ಯಕ್ತಿಯನ್ನು ಸಿಎಂ ಸ್ಥಾನಕ್ಕೆ ನೇಮಕ ಮಾಡಿಕೊಂಡರೆ ರಾಜ್ಯದ ಗತಿಯೇನು..? ಎಂದು ಹಲವರು ಪ್ರಶ್ನೆ ಮಾಡ್ತಾ ಇದಾರೆ.
ಸದ್ಯಕ್ಕೆ ಜಯಲಲಿತಾ ಅವರ ಸ್ಥಾನಕ್ಕೆ ಸರ್ಕಾರ ಸಲಹೆಗಾರರಾದ ಶೀಲಾ ಬಾಲಕೃಷ್ಣನ್, ಮುಖ್ಯ ಕಾರ್ಯದರ್ಶಿ ಹಾಗೂ ಉನ್ನತ ಅಧಿಕಾರಿಗಳು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
POPULAR STORIES :
ಇನ್ನು ಕೆಲವೇ ದಿನಗಳಲ್ಲಿ ಶಿರಾಡಿ ಘಾಟ್ ಬಂದ್..!
ನಾನು ನಿನ್ನ ಮದ್ವೆ ಆಗ್ತೀನಿ.. ಅಂದಿದಕ್ಕೆ ತಲೆ ತಿರುಗಿ ಬಿದ್ಲು ನಾರಿ..! ಯಾಕೆ ಗೊತ್ತಾ..
ನೀವು ಕುಡಿಯೋದು ಕೂಲ್‍ಡ್ರಿಂಕ್ಸ್ ಅಲ್ಲ ಬದಲಾಗಿ ವಿಷ..!
ಧೋನಿ ಚಿತ್ರದಲ್ಲಿ ಸ್ವಂತ ಅಣ್ಣನ ಪಾತ್ರವೇ ಇಲ್ಲ ಯಾಕೆ ಗೊತ್ತಾ..?
ಮತ್ತೊಂದು ಮದುವೆ ವದಂತಿ ಸುಳ್ಳು: ರಾಧಿಕಾ ಕುಮಾರ ಸ್ವಾಮಿ.
24ರ ಹರೆಯದ ಯುವತಿ 68ರ ತಾತನ ಅಚ್ಚರಿಯ ಜುಗಲ್‍ಬಂಧಿ…!
ಲೋಧಾ ಶಿಫಾರಸ್ಸು ಉಲ್ಲಂಘನೆ: 3ನೇ ಟೆಸ್ಟ್ ಪಂದ್ಯ ನಡೆಯೋದು ಬಹುತೇಕ ಡೌಟ್..?
ಪಾಕ್ ವಿರುದ್ದದ ಆನ್ಲೈನ್ ಅರ್ಜಿಯನ್ನು ಆರ್ಕೈವ್ ಪಟ್ಟಿಗೆ ಹಾಕಿ ತನ್ನ ದ್ವಂದ್ವ ನಿಲುವು ಪ್ರದರ್ಶಿದ ಅಮೇರಿಕಾ..!