ಕಪ್ಪುಹಣ, ಖೋಟಾನೋಟು ಮತ್ತು ಭ್ರಷ್ಟಾಚಾರ ತಡಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಮಂಗಳವಾರ ರಾತ್ರಿಯಿಂದಲೇ ದಿಢೀರನೆ 500, 1000 ನೋಟು ನಿಷೇಧ ಹೇರಿದ ಬೆನ್ನಲ್ಲೇ ಷೇರು ಮಾರುಕಟ್ಟೆ, ರಿಯಲ್ ಎಸ್ಟೇಟ್ ಸೇರಿದಂತೆ ಇತರೆ ವಾಣಿಜ್ಯ ವಹಿವಾಟುಗಳು ಸಂಪೂರ್ಣ ಕುಸಿತ ಕಂಡಿದೆ..! ದೇಶಾದ್ಯಂತ ನೋಟುಗಳ ನಿಷೇಧದ ಬೆನ್ನಲ್ಲೇ ಈ ಎಲ್ಲಾ ವಿಧ್ಯಾಮಾನಗಳು ಸಂಭವಿಸಿದೆ..
ಇನ್ನು ಇಂದು ಮುಂಜಾನೆ 9:30ರ ಸುಮಾರಿಗೆ ಮುಂಬೈ ಷೇರು ಸೂಚ್ಯಂಕ 704 ಅಂಕಗಳಷ್ಟು ಕುಸಿತ ಕಂಡು ಬಂದು 25 ಸಾವಿರದ 885ರಲ್ಲಿ ವಹಿವಾಟು ನಡೆಸುತ್ತಿತ್ತು. ನಿಫ್ಟಿ ಸಹ 231 ಅಂಕ ಕುಸಿತ ಕಂಡು ಬಂದಿದ್ದು 8 ಸಾವಿರದ 312ರಲ್ಲಿ ವಹಿವಾಟು ನಡೆಸುತ್ತಿತ್ತು. ಇನ್ನು ರಿಯಲ್ ಎಸ್ಟೇಟ್‍ಗಳಲ್ಲಿ ಬಂಡವಾಳ ಹೂಡಿದವರಿಗೆ ನೋಟು ನಿಷೇಧದಿಂದಾಗಿ ಅಪಾರ ನಷ್ಟ ಸಾಧ್ಯತೆಯೂ ಇದೆ.. ಅಲ್ಲದೇ ನಿನ್ನೆ ರಾತ್ರಿಯಿಂಲೇ ಚಿನ್ನದ ಬೆಲೆ ಗಗನಕ್ಕೇರಿದೆ. ಮುಂಬೈ ಷೇರು ಮಾರುಕಟ್ಟೆ ವಹಿವಾಟು ಆರಂಭವಾಗುತ್ತಿದ್ದಂತೆ ಆಟೋಮೊಬೈಲ್, ಗ್ರಾಹಕ ಬಳಕೆ ವಸ್ತುಗಳು ಬ್ಯಾಂಕ್ ಷೇರುಗಳಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡು ಬಂದಿದೆ. ಇನ್ನು ಕೇಂದ್ರ ಸರ್ಕಾರ 500, 1000 ನೋಟು ನಿಷೇಧದ ಕಟ್ಟು ನಿಟ್ಟಿನ ಜಾರಿಯಿಂದಾಗಿ ಯಾವೊಬ್ಬ ವ್ಯಾಪಾರಿಗಳು ಗ್ರಾಹಕರ ಬಳಿ ನೋಟು ಕೊಂಡು ಕೊಳ್ಳಲು ಹಿಂದೇಟು ಹಾಕುತ್ತಿರುವ ಪರಿಣಾಮವಾಗಿ ಜನಸಾಮಾನ್ಯರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿದ್ದರೂ ಕೂಡ ಕೇಂದ್ರ ಸರ್ಕಾರದ ಈ ನಡೆಯನ್ನು ಶ್ಲಾಘನೆ ವ್ಯಕ್ತ ಪಡಿಸಿರೋದು ನೋಡಬಹುದು..
Like us on Facebook The New India Times
POPULAR STORIES :
ಮನಸ್ಸಿಗೆ ಬಂದ ಫೇಸ್‍ಬುಕ್ ಗೆಳತಿ ಮನೆ ಬೆಳಗುವಳಾ.? | ರಿಯಲ್ ಸ್ಟೋರಿ
ತಮ್ಮ ಗುರುವಿಗಾಗಿ ಸ್ಟಂಟ್ ಮಾಡಲು ಒಪ್ಪಿಕೊಂಡಿದ್ರು: ರವಿವರ್ಮ
ಮಾಸ್ತಿಗುಡಿ ದುರಂತ: ಐವರ ವಿರುದ್ದ ಜಾಮೀನು ರಹಿತ ವಾರೆಂಟ್ ಜಾರಿ..!
12 ವರ್ಷದ ಅಪ್ರಾಪ್ತ ಬಾಲಕನಿಂದ 18 ವರ್ಷದ ಯುವತಿ ತಾಯಿಯಾದ್ಲು..!
ವಿಲನ್ ಸಿನಿಮಾದ ಮತ್ತೊಂದು ಸ್ಪೆಷಾಲಿಟಿ ಏನ್ ಗೊತ್ತಾ..?