ಕಾರ್ಗಿಲ್ ಸೋಲು ಖಚಿತವಾದಾಗ ಅಣ್ವಸ್ತ್ರ ಪ್ರಯೋಗಕ್ಕೆ ತಯಾರಿ ನಡೆಸಿದ್ದ ಪಾಕ್..!

Date:

1999ರ ಕಾರ್ಗಿಲ್ ಯುದ್ಧದಲ್ಲಿ ಸೋಲು ಖಚಿತವಾಗುತ್ತಿದ್ದಂತೆ ಪಾಕ್ ಅಣ್ವಸ್ತ್ರವನ್ನು ಪ್ರಯೋಗಿಸುವ ತಯಾರಿಯನ್ನು ನಡೆಸಿತ್ತು ಅನ್ನೋದು ತಡವಾಗಿ ಬಹಿರಂಗವಾಗಿದೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪಾಕ್ ಅಣ್ವಸ್ತ್ರಗಳನ್ನು ಸಾಧ್ಯತ ಬಳಕೆಗಾಗಿ ಉಪಯೋಗಿಸಲು ಅಭಿವೃದ್ಧಿ ಪಡಿಸುತ್ತಿರುವ ಬಗ್ಗೆ ಅಮೇರಿಕಾದ ಮಾಜಿ ಅಧ್ಯಕ್ಷರಾದ ಬಿಲ್ ಕ್ಲಿಂಟನ್ ಗೆ ಸಿಐಎ ಎಚ್ಚರಿಸಿತ್ತೆಂದು ಶ್ವೇತಭವನದ ಮಾಜಿ ಅಧಿಕಾರಿಗಳು ತಿಳಸಿದ್ದಾರೆ.
ಸಿಐಎ ನೀಡಿದ್ದ ಸೂಚನೆಯಂತೆ ಅಮೇರಿಕಾದ ಅಧ್ಯಕ್ಷರು ಯುದ್ದತಪ್ಪಿಸಿ ಅಂತ ಬೇಡಿ ಬಂದಿದ್ದ ಷರೀಫ್ ಗೆ ಪಾಕ್ ಯುದ್ಧದಿಂದ ಹಿಂದೆ ಸರಿಯಲಿ ಎಂಬ ಸಲಹೆ ನೀಡಿದ್ದರೆಂಬುದು ತಿಳಿದು ಬಂದಿದೆ.
ಪೂರ್ವ ನಿರ್ಣಯದಂತೆ 1999ರ ಜುಲೈ 4ನೇ ತಾರೀಖಿನಂದು ಪಾಕಿಸ್ತಾನದ ಪ್ರಧಾನಮಂತ್ರಿ `ನವಾಜ್ ಷರೀಫ್’ ಅಮೇರಿಕಾದ ಅಧ್ಯಕ್ಷರನ್ನು ಭೇಟಿ ಮಾಡಬೇಕಿತ್ತು..! ಈ ಭೇಟಿಗೂ ಮೊದಲೇ ಬ್ಲಿನ್ ಕ್ಲಿಂಟನ್ ಗೆ ಪಾಕ್ ತಂತ್ರದ ಬಗ್ಗೆ ಮಾಹಿತಿ ಇತ್ತು. ಪಾಕಿಸ್ತಾನ ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗ ಮಾಡಲು ಸಿದ್ಧತೆ ನಡೆಸುತ್ತಿದೆ ಎಂಬ ಎಚ್ಚರಿಕೆಯನ್ನು ಸಿಐಎ ನೀಡಿತ್ತು ಎಂಬ ವಷಯವನ್ನು ಶ್ವೇತಭವನದ ಮಾಜಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕಾರ್ಗಿಲ್ ಸೋಲು ಖಚಿತವೆಂದು ತಿಳಿದ ಪಾಕ್, `ಹಿರಿಯಣ್ಣನ’ ಕಾಲಿಗೆ ಬಿದ್ದು ಕೇಳಿಕೊಂಡಿದ್ದೇನು ಗೊತ್ತಾ..?! ಭಾರತದ ಎದುರು ನಮ್ಮ ಸೋಲು ಖಚಿತ ಎಂಬುದನ್ನು ತಿಳಿದ ಅಂದಿನ ಪಾಕ್ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ವಿಶ್ವಮಟ್ಟದಲ್ಲಿ ಅವಮಾನವನ್ನು ತಪ್ಪಿಸಿಕೊಳ್ಳಲು ಯುದ್ಧವನ್ನು ನಿಲ್ಲಿಸಿ ಎಂದು ಅಮೇರಿಕಾದ ಅಧ್ಯಕ್ಷರಲ್ಲಿ ಬೇಡಿಕೊಂಡಿದ್ದರೆಂಬ ಅಂಶವೂ ಬೆಳಕಿಗೆ ಬಂದಿದೆ..!

ಅಣ್ವಸ್ತ್ರ ಪ್ರಯೋಗಿಸಲು ಮುಂದಾಗಿರುವ ಮಾಹಿತಿಯನ್ನು, ಅಮೇರಿಕಾ ಅಧ್ಯಕ್ಷರೊಡನೆ ಪಾಕಿಸ್ತಾನದ ಪ್ರಧಾನಿಯವರನ್ನು ಭೇಟಿ ಮಾಡಲಿದ್ದಂತಹ ರಾಷ್ಟ್ರೀಯ ಭದ್ರತಾ ಮಂಡಳಿಯ ಬ್ರೂಸ್ ರಿಡೇಲ್ ಅವರಿಗೆ ತಿಳಿಸಲಾಗಿತ್ತು. ಇದು `ಹಿರಿಯಣ್ಣನ’ ಗಮನಕ್ಕೂ ಬಂದಿತ್ತು. ನವಾಜ್ ಷರೀಫ್ ಜೊತೆಯಲ್ಲಿ ಮಾತುಕತೆ ನಡೆಸುವಾಗ ಸ್ಥಿರವಾಗಿರುವಂತೆ ಹಿರಿಯಣ್ಣನಿಗೆ ಸಲಹೆ ನೀಡಲಾಗಿತ್ತು..! ಅದಕ್ಕೆ ಅನುಗುಣವಾಗಿಯೇ ಮಾತುಕತೆ ನಡೆಸಿದ ಅಮೆರಿಕಾ ಅಧ್ಯಕ್ಷರು ಯುದ್ಧ ನಿಲ್ಲಬೇಕೆಂದರೆ ಪಾಕ್ ಹಿಂದೆ ಸರಿಯಬೇಕೆಂದು ಪಾಕ್ ಗೆ ಸೂಚಿಸಿದ್ದರು..!ಅವರ ಸಲಹೆಯನ್ನು ಸ್ವೀಕರಿಸಿದ ಪಾಕ್ ತನ್ನ ಸೇನಾ ತುಕಡಿಯನ್ನು ಹಿಂದಕ್ಕೆ ಕರೆಸಿಕೊಂಡಿತ್ತು ಎಂಬ ಅಂಶವನ್ನು ಶ್ವೇತಭನದ ಅಧಿಕಾರಿಗಳೇ ತಿಳಿಸಿದ್ದಾರೆ.

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ರಾಹುಲ್ ದ್ರಾವಿಡ್ ಒಳ್ಳೆಯ ಕ್ರಿಕೆಟಿಗ ಮಾತ್ರವಲ್ಲ. ಅವರೊಬ್ಬ ಆದರ್ಶ ವ್ಯಕ್ತಿ..!

`ಗ್ರಾಮೀಣ ಜನರಿಗಾಗಿ’ ಕೆಲಸ ಬಿಟ್ಟುಬಂದ ಇಂಜಿನಿಯರ್ಸ್..!

`ಕೊಹಿನೂರು ವಜ್ರ’ ಪಾಕಿಸ್ತಾನದ್ದಂತೆ..! `ಕೊಹಿನೂರು ವಜ್ರ’ದ ಮೇಲೂ ಬಿತ್ತು ಪಾಕ್ ಕಣ್ಣು..!

ಇವರು ನಮ್ಮ ಬೆಂಗಳೂರಿನ ತ್ಯಾಜ್ಯೋಧ್ಯಮಿ..! ಕಸ ಆಯುವಾತನಿಗೆ ವಿಶ್ವಸಂಸ್ಥೆಯಿಂದ ಕರೆ..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...