ಟೀಕಿಸುವವರಿಗೆ ಟ್ಟೀಟರ್ ಲ್ಲಿ ಉತ್ತರ ಕೊಟ್ಟಿದ್ದಾರೆ ಮೋದಿ..! ತಮ್ಮನ್ನು ಟೀಕಿಸುವವರಿಗೆ ಪ್ರಧಾನಿಯ ಪ್ರತ್ಯುತ್ತರವೇನು..?!

1
66

`ಟೀಕೆ’ ಅನ್ನೋ ಪದ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೊಸದೇನೂ ಅಲ್ಲ ಬಿಡಿ..! ಗುಜರಾತಿನ ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿಂದಲೂ ಕೂಡ ನಿರಂತರವಾಗಿ ಟೀಕೆಗೆ ಗುರಿಯಾಗುತ್ತಲೇ ಬಂದಿರೋ ನಾಯಕರಿವರು..! ಗುಜಾರಾತಿನ ಸಿಎಂ ಆಗಿದ್ದಾಗಲೂ ಟೀಕೆಗಳನ್ನು ಎದುರಿಸುತ್ತಲೇ ಬಂದಿದ್ದಾರೆ..! ಇವತ್ತೂ ಕೂಡ ಭಾರತದ ಯಾವುದೇ ಮೂಲೆಯಲ್ಲಿ ಏನೇ ತಪ್ಪಾದರೂ, ಕೆಟ್ಟದ್ದಾದರೂ ಅದಕ್ಕೆ ಮೋದಿಯವರನ್ನು ಗುರಿಯಾಗಿಸಿ ಟೀಕಿಸಲಾಗುತ್ತೆ..! ಪ್ರಧಾನಿಯಾಗಿರುವ ಇವರೇ ಎಲ್ಲದಕ್ಕೂ ಹೊಣೆ ಅನ್ನುವಂತೆ ಟೀಕೆ ಮಾಡೋ ಜನರು ತುಂಬಾನೇ ಇದ್ದಾರೆ..!
ಈ ಟೀಕೆ ಖಂಡಿತಾ ತಾರ್ಕಿಕವಾಗಿದ್ದಂತೂ ಅಲ್ಲ..! ಇವರು ಮಾಡ್ತಾ ಇರೋ ಒಳ್ಳೆಯ ಕೆಲಸಗಳನ್ನು ಕಡೆಗಾಣಿಸಿ ಸುಖಾಸುಮ್ಮನೇ ಟೀಕೆ ಮಾಡ್ತಾ ಇರೋದ್ರಲ್ಲಿ ಅರ್ಥವೇ ಇಲ್ಲ..! ಆದರೆ ಇಂಥಾ ಟೀಕೆ ನಮ್ಮ ದೇಶದಲ್ಲಿ ನಡೆಯುತ್ತಲೇ ಇರುತ್ತೆ..!
ಪ್ರಧಾನಿ ಮೋದಿ ಮೊದಲಿಗೆ ಟೀಕೆಗೆ ಒಳಗಾಗುವುದು, ಒಳಗಾಗುತ್ತಿರೋದು `ವಿದೇಶಿ ಪ್ರವಾಸ ಅಥವಾ ಭೇಟಿಯಿಂದ..! ಅದರ ಜೊತೆಗೆ ಇವತ್ತು ಜಾತ್ಯಾತೀತ ಪಂಡಿತರ ಟೀಕೆಗೆ ಗುರಿಯಾಗ್ತಾ ಇದ್ದಾರೆ..! ಈ ಜ್ಯಾತ್ಯಾತೀತ ಪಂಡಿತರು ಮೋದಿಯನ್ನು ಗುರಿಯಾಗಿಸಿಕೊಂಡು ದೇಶದಲ್ಲಿ `ಅಸಹಿಷ್ಣತೆ’ ಇದೆ ಅಂತ ಬಾಯಿ ಬಾಯಿ ಬಡ್ಕೊಳ್ತಾ ಇದ್ದಾರೆ..! ದೊಡ್ಡ ದೊಡ್ಡ ಬರಹಗಾರರು, ಇತಿಹಾಸ ತಜ್ಞರು, ಸಿನಿಮಾ ತಯಾರಕರು ಇವೇ ಮೊದಲಾದ ಕ್ಷೇತ್ರಗಳ ಪುಣ್ಯಾತ್ಮರು ದೇಶದಲ್ಲಿ `ಅಸಹಿಷ್ಣತೆ’ ಇದೆ ಅಂತ ಬಾಯಿ ಬಾಯಿ ಹೊಡ್ಕೊಂಡು ತಮ್ಮ ಸಾಧನೆಗೆ ಸಿಕ್ಕ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರಕ್ಕೆ ವಾಪಸ್ಸು ಕೊಡುವುದರ ಮೂಲಕ ಮೋದಿಯವರನ್ನು ವಿರೋಧಿಸ್ತಾ ಬಂದರು..! ಈಗ ಸಂಸತ್ತಲ್ಲಿ ಗೃಹ ಸಚಿವರೋ ಅಥವಾ ಇನ್ಯಾರೋ ಮಂತ್ರಿಗಳೋ ಅವರ ಪ್ರಶ್ನೆಗೆ ಉತ್ತರಿಸಿದರೆ ಮೋದಿಯನ್ನು ಪ್ರಶ್ನಿಸಲಾಗುತ್ತೆ..! ಅವರು ಉತ್ತರ ಕೊಡೋದು ಬಿಟ್ಟು ಹೊರ ನಡೆದರೆಂದು ಟೀಕಿಸಲಾಗುತ್ತೆ..!
ಆದಾಗ್ಯೂ, ಪ್ರಧಾನಿ ಶಕ್ತಿ ಕುಂದಿಲ್ಲ..! ಅವರು ಇವತ್ತಿಗೂ ಸ್ಟ್ರಾಂಗ್ ಮ್ಯಾನ್..! ಅವರಿಗೆ ಗೊತ್ತಿದೆ, `ಹೇಗೆ ಟೀಕೆಗಳನ್ನು ಎದುರಿಸುವುದು ಅಂತ’..! ಹಾಗೆಯೇ ಇವತ್ತೂ ಕೂಡ ಅವರು ಶಾಂತವಾಗಿ ತಮ್ಮ ಪಾಡಿಗೆ ತಾವು ಕೆಲಸ ಮಾಡ್ತಾ ಇದ್ದಾರೆ..! ಇವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದು, ಅವುಗಳ ಮೂಲಕ ಜನ ಅವರನ್ನು ಮೆಚ್ಚಿಗೆ ವ್ಯಕ್ತ ಪಡಿಸ್ತಾರೆ..! ಟೀಕೆಯನ್ನೂ ಮಾಡ್ತಾರೆ..!
ಅವರ ಬಗೆಗಿನ ಟೀಕೆಯೊದಕ್ಕೆ ಮೋದಿ ಟ್ವೀಟರ್ನಲ್ಲಿ ಉತ್ತರಿಸಿದ್ದಾರೆ.! ಅವರ ಒಂದು ಟ್ವೀಟ್ ಸರಣಿ ಹಾಗೂ ಅದರ ಕನ್ನಡ ಭಾವಾನುವಾದ ಇಲ್ಲಿದೆ.

1

Narendra Modi : ಇವತ್ತು ಪಿಎಂಒ ಕುಟುಂಬದೊಂದಿಗೆ ಅದ್ಭತ ಸಂವಾದ ನಡೆಯಿತು.
Jaini: ನಾನು ನಿಮ್ಮ ವಯಸ್ಸಿನ ಸುಮಾರು 1/3ನಷ್ಟಿನವನು ಸರ್, ಆದರೆ ನಿಮ್ಮ1/3ನಷ್ಟು ಶಕ್ತಿಯನ್ನು ನಾನು ಹೊಂದಿಲ್ಲ.

2

Narendra Modi : ಹಹ.. ನಾನು ಖಚಿತವಾಗಿ ಹೇಳಬಲ್ಲೆ ಅದು ಸರಿಯಲ್ಲ. ನಾನು ಯಾವಾಗಲೂ ಕೆಲಸದಲ್ಲಿ ನಂಬಿಕೆ ಹೊಂದಿರುತ್ತೇನೆ. ಕೆಲಸ ಯಾವಾಗಲೂ ನನಗೆ ತೃಪ್ತಿ ನೀಡುತ್ತೆ, ಇದು ನನಗೆ ದಣಿವಲ್ಲ.
Sudhanshu S. Singh : ಮನಸ್ಸು ಮತ್ತು ದೇಹ ರಿಚಾರ್ಜ್ ಆಗೋಕೆ ಕನಿಷ್ಟ 6 ಗಂಟೆ ನಿದ್ರೆ ಅಗತ್ಯ. ಕೇವಲ ಮೂರೇ ಗಂಟೆ ನಿದ್ರೆಯಲ್ಲಿ ನೀವದನ್ನು ಹೇಗೆ ನಿರ್ವಹಿಸುತ್ತೀರಿ..?
Narendra Modi : ಗೂಗಲ್ ಹ್ಯಾಂಗ್ ಔಟ್ ಸಂದರ್ಭದಲ್ಲಿನ ನನ್ನ ಉತ್ತರ ಇಲ್ಲಿದೆ. ನಿಮಗೆ ಆಸಕ್ತಿ ಬೇಕು https://t.co/4LnzXKbS5g

3

Sudhanshu S. Singh : ದೇವರೇ..! ನಾನು ಪಿಎಂ ಇಂದ ಪ್ರತಿಕ್ರಿಯೆ ಪಡೆದೆ. ನಂಬಲಾಗುತ್ತಿಲ್ಲ..!

4

latishachary : ಸರ್ಜಿ.. ನೀವು ತುಂಬಾ ಅದೃಷ್ಟಶಾಲಿ. ನಾನು ನರೇಂದ್ರ ಮೋದಿಯಿಂದ ಪ್ರತ್ಯುತ್ತರ ಪಡೆಯುತ್ತೇನೆಂದು ಯೋಚಿಸಿರಲಿಲ್ಲ. ಈಗ ಅವರನ್ನು ಟೀಕಿಸಲು ಪ್ರಾರಂಭಿಸಿದ್ದೇನೆ.

5

Narendra Modi : ಆ ರೀತಿ ಯೋಚನೆ ನಿಮಗೇಕೆ ಬಂತು..? ರಚನಾತ್ಮಕ ಟೀಕೆಗಳು ಪ್ರಜಾಪ್ರಭುತ್ವದ ಮೂಲಾಧಾರವಾಗಿವೆ ಮತ್ತು ಇವು ಪ್ರೋತ್ಸಾಹಿಸಬೇಕು. ಸ್ವತಂತ್ರವಾಗಿ ಸ್ವತಂತ್ರವಾಗಿ ವ್ಯಕ್ತಪಡಿಸಬೇಕು.

ನರೇಂದ್ರ ಮೋದಿಯವರ ಪ್ರತ್ಯುತ್ತರ ಸರಿಯಾಗಿದೆ ಅಲ್ಲವೇ..? ಈ ಬರಹದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಈ ಕೆಳಗೆ ಕಾಮೆಂಟ್ ವಿಭಾಗದಲ್ಲಿ ತಿಳಿಸಿ.

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ಪ್ರವಾಹದ ಮಧ್ಯೆಯೂ ರಾಜಕೀಯ ಬೇಕಿತ್ತಾ..? ಆಹಾರ ಪೊಟ್ಟಣಗಳ ಮೇಲೆ ಅಮ್ಮ ಸ್ಟಿಕ್ಕರ್ಸ್..!

ರಾಹುಲ್ ದ್ರಾವಿಡ್ ಒಳ್ಳೆಯ ಕ್ರಿಕೆಟಿಗ ಮಾತ್ರವಲ್ಲ. ಅವರೊಬ್ಬ ಆದರ್ಶ ವ್ಯಕ್ತಿ..!

`ಗ್ರಾಮೀಣ ಜನರಿಗಾಗಿ’ ಕೆಲಸ ಬಿಟ್ಟುಬಂದ ಇಂಜಿನಿಯರ್ಸ್..!

`ಕೊಹಿನೂರು ವಜ್ರ’ ಪಾಕಿಸ್ತಾನದ್ದಂತೆ..! `ಕೊಹಿನೂರು ವಜ್ರ’ದ ಮೇಲೂ ಬಿತ್ತು ಪಾಕ್ ಕಣ್ಣು..!

ಇವರು ನಮ್ಮ ಬೆಂಗಳೂರಿನ ತ್ಯಾಜ್ಯೋಧ್ಯಮಿ..! ಕಸ ಆಯುವಾತನಿಗೆ ವಿಶ್ವಸಂಸ್ಥೆಯಿಂದ ಕರೆ..!

1 COMMENT

LEAVE A REPLY

Please enter your comment!
Please enter your name here