ನಿಮಗಿದು ಗೊತ್ತಾ!? ಪಪ್ಪಾಯಿ ಮಾತ್ರವಲ್ಲ ಇದರ ಎಲೆಗಳು ಕೂಡ ಅಷ್ಟೇ ಪ್ರಯೋಜನಕಾರಿ!

Date:

ನಿಮಗಿದು ಗೊತ್ತಾ!? ಪಪ್ಪಾಯಿ ಮಾತ್ರವಲ್ಲ ಇದರ ಎಲೆಗಳು ಕೂಡ ಅಷ್ಟೇ ಪ್ರಯೋಜನಕಾರಿ!

Do you know!? Not only papaya but also its leaves are beneficial!

ಪರಂಗಿ ಎಲೆಗಳ ಆರೋಗ್ಯ ಪ್ರಯೋಜನಗಳು ಅಥವಾ ಅದರ ರುಚಿ ನಮಗೆ ಅಷ್ಟು ಪರಿಚಯವಿರುವುದಿಲ್ಲ. ಆದರೆ ಸರಿಯಾಗಿ ಹೇಳಬೇಕು ಎಂದರೆ ಪರಂಗಿ ಹಣ್ಣು ಮತ್ತು ಪರಂಗಿಕಾಯಿಗಳಿಗೆ ಹೋಲಿಸಿದರೆ ಪರಂಗಿ ಮರದ ಎಲೆಗಳಲ್ಲಿ ನಮಗೆ ಅತಿಹೆಚ್ಚು ಆರೋಗ್ಯ ಪ್ರಯೋಜನಗಳು ಸಿಗುತ್ತವೆ.ಪರಂಗಿ ಎಲೆಗಳ ಆರೋಗ್ಯ ಪ್ರಯೋಜನಗಳು ಅಥವಾ ಅದರ ರುಚಿ ನಮಗೆ ಅಷ್ಟು ಪರಿಚಯವಿರುವುದಿಲ್ಲ. ಆದರೆ ಸರಿಯಾಗಿ ಹೇಳಬೇಕು ಎಂದರೆ ಪರಂಗಿ ಹಣ್ಣು ಮತ್ತು ಪರಂಗಿಕಾಯಿಗಳಿಗೆ ಹೋಲಿಸಿದರೆ ಪರಂಗಿ ಮರದ ಎಲೆಗಳಲ್ಲಿ ನಮಗೆ ಅತಿಹೆಚ್ಚು ಆರೋಗ್ಯ ಪ್ರಯೋಜನಗಳು ಸಿಗುತ್ತವೆ.

ಸಂಶೋಧಕರ ಪ್ರಕಾರ ಪರಂಗಿ ಎಲೆಗಳಲ್ಲಿ ಫೈಟೋನ್ಯೂಟ್ರಿಯೆಂಟ್ಸ್ ಮತ್ತು ಆಂಟಿಆಕ್ಸಿಡೆಂಟ್ ಅಂಶಗಳ ಪ್ರಮಾಣ ತುಂಬಾ ಹೇರಳವಾಗಿ ಕಂಡು ಬರುತ್ತದೆ.

ಅನೇಕ ಬಗೆಯ ಆರೋಗ್ಯ ಸಮಸ್ಯೆಗಳಿಗೆ ಇದು ಅತ್ಯಂತ ಪರಿಣಾಮಕಾರಿಯಾಗಿ ಪರಿಹಾರ ಒದಗಿಸುತ್ತದೆ. ಹಾಗಾದರೆ ಅಂತಹ ಆರೋಗ್ಯ ಪ್ರಯೋಜನಗಳು ಪರಂಗಿ ಎಲೆಗಳಿಂದ ಏನು ಸಿಗುತ್ತವೆ ಎಂದು ನೋಡುವುದಾದರೆ…..
ಪರಂಗಿ ಎಲೆಗಳಲ್ಲಿ ಸಾಕಷ್ಟು ಹೆಚ್ಚಿನ ಪ್ರಮಾಣದ ಆರೋಗ್ಯ ಪ್ರಯೋಜನಗಳನ್ನು ನಾವು ಕಂಡುಕೊಳ್ಳಬಹುದು. ಇದಕ್ಕಾಗಿ ಪರಂಗಿ ಎಲೆಗಳನ್ನು ನಿಯಮಿತವಾಗಿ ನಮ್ಮ ಆಹಾರ ಪದ್ಧತಿಯಲ್ಲಿ ಬಳಕೆ ಮಾಡುವ ಬಗ್ಗೆ ಆಲೋಚನೆ ಮಾಡಬೇಕು.

ಪರಂಗಿ ಎಲೆಗಳು
ಡೆಂಗ್ಯೂ ಜ್ವರದ ವಿರುದ್ಧ ರಕ್ಷಣೆ ಕೊಡುತ್ತವೆ
ಮಲೇರಿಯಾ ರೋಗದ ವಿರುದ್ಧ ಹೋರಾಡುತ್ತದೆ
ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ
ತಲೆ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ
ಕ್ಯಾನ್ಸರ್ ವಿರೋಧಿ ಗುಣ ಲಕ್ಷಣಗಳನ್ನು ಹೊಂದಿದೆ
ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡುತ್ತದೆ
ಮಹಿಳೆಯರ ಮುಟ್ಟಿನ ನೋವಿನ ನಿವಾರಣೆ ಮಾಡುತ್ತದೆ

ದೈಹಿಕ ಆಯಾಸ ದೂರ ಮಾಡುತ್ತದೆ
ರಕ್ತನಾಳಗಳ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುತ್ತದೆ
ದೇಹದಲ್ಲಿ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚು ಮಾಡುತ್ತದೆ.

ಔಷಧೀಯ ವಿಚಾರದಲ್ಲಿ ನೋಡುವುದಾದರೆ ಪರಂಗಿ ಎಲೆಗಳನ್ನು ಅತ್ಯುತ್ತಮವಾಗಿ ಬಳಕೆ ಮಾಡುವ ತಂತ್ರವನ್ನು ನಮ್ಮ ಹಿರಿಯರು ಹಿಂದಿನಿಂದಲೂ ಅಭ್ಯಾಸ ಮಾಡಿಕೊಂಡು ಬಂದಿದ್ದಾರೆ.
ಆದರೆ ಹಸಿ ಪರಂಗಿ ಎಲೆಗಳು ಸೇವನೆ ಮಾಡಲು ಅರ್ಹವಲ್ಲ. ಬದಲಿಗೆ ಇದರಿಂದ ಚಹಾ ಅಥವಾ ಜ್ಯೂಸು ತಯಾರು ಮಾಡಿ ಸೇವನೆ ಮಾಡಬಹುದು. ಮುಖದ ಭಾಗದಲ್ಲಿ ಫೇಸ್ ಮಾಸ್ಕ್ ಆಗಿ ಉಪಯೋಗಿಸಬಹುದು.

ನಾವು ಸೇವನೆ ಮಾಡುವ ಕೆಲವು ಬಗೆಯ ಆಹಾರ ಪದಾರ್ಥಗಳು ನಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ಅದರಂತೆ ಪರಂಗಿ ಎಲೆಗಳು ಸಹ ಕೇವಲ ಕೆಲವರಿಗೆ ಕೆಲವೊಂದು ಆರೋಗ್ಯದ ಸಣ್ಣಪುಟ್ಟ ಸಮಸ್ಯೆಗಳನ್ನು ಉಂಟು ಮಾಡಬಹುದು.
ಉದಾಹರಣೆಗೆ ಪರಂಗಿ ಎಲೆಗಳನ್ನು ತಿನ್ನುವುದು ಅಥವಾ ಪರಂಗಿ ಎಲೆಗಳ ಕಷಾಯ ಕುಡಿಯುವುದು ಕೆಲವರಿಗೆ ಅಲರ್ಜಿ ಉಂಟು ಮಾಡಬಹುದು ಅಥವಾ ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ.

ಆದರೆ ಇದರ ಪ್ರಭಾವ ಯಾವ ಮಟ್ಟಿಗೆ ದೇಹದ ಮೇಲೆ ಆಗುತ್ತದೆ ಎಂಬ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಏಕೆಂದರೆ ಇದರಲ್ಲಿ ಮತ್ತಷ್ಟು ಸಂಶೋಧನೆ ಅಗತ್ಯತೆ ಇದೆ. ಸಾಧಾರಣವಾಗಿ ದೈಹಿಕ ಉರಿಯೂತ ಮತ್ತು ಹೊಟ್ಟೆಯ ಭಾಗದ ಅಸ್ವಸ್ಥತೆ ಸಾಮಾನ್ಯ ಎಂದು ಹೇಳಬಹುದು

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...