ಖೋಟಾ ನೋಟು ಹಾಗೂ ಭ್ರಷ್ಟಾಚಾರ ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ನೆನ್ನೆ ರಾತ್ರಿಯಿಂದ 500 ಹಾಗೂ 1000 ರೂ. ನೋಟುಗಳ ನಿಷೇಧದ ಪರಿಣಾಮವಾಗಿ ಎಲ್ಲೂ ಕೂಡ 500 ಹಾಗೂ 1000 ರೂ. ನೋಟುಗಳನ್ನು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರದ ದಿಢೀರ್ ನಿರ್ಧಾರದಿಂದ ಸಾರ್ವಜನಿಕರು ಚಿಲ್ಲರೆ ಹಣ ಪಡೆಯಲು ಹರ ಸಾಹಸ ಪಡೆಯುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇನ್ನೂ 72 ಗಂಟೆಗಳ ಕಾಲ ಅಂದರೆ ಇನ್ನು ಮೂರು ದಿನಗಳ ಕಾಲ ಔಷಧಿ ಮಳಿಗೆ, ಬಂಕ್, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ 500 ಹಾಗೂ 1000 ರೂ. ಪಡೆಯಬೇಕು ಎಂದು ಆದೇಶ ನೀಡಿತ್ತು. ಆದರೆ ಈ ಆದೇಶದಿಂದ ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಾಗಲಿಲ್ಲ ಎಂಬುದಂತೂ ಸತ್ಯ. 500 ಹಾಗೂ 1000ರೂ. ನೋಟಿಗೆ ಚಿಲ್ಲರೆ ಸಿಗಬಹುದೇನೋ ಎಂಬ ಉದ್ದೇಶದಿಂದ ಪೆಟ್ರೋಲ್ ಬಂಕ್ ಕಡೆ ಮುಖ ಮಾಡಿರುವ ಲಕ್ಷಾಂತರ ಗ್ರಾಹಕರಿಗೆ ಇಲ್ಲಿಯೂ ಕೂಡ ನೋಟು ಪಡೆಯಲು ಹಿಂಜರಿಯುತ್ತಿದ್ದಾರೆ. ಕೇಂದ್ರ ಸರ್ಕಾರ ಇನ್ನು ಮೂರು ದಿನಗಳ ಕಾಲ ನೋಟು ಪಡೆಯಲು ಆದೇಶ ನೀಡಿದ್ದಾರಲ್ಲಾ ಎಂದು ಗ್ರಾಹಕರು ತಿಳಿಸಿದ್ದರೂ ಕೂಡ ನಮ್ಮಲ್ಲಿ ಚಿಲ್ಲರೆ ಇಲ್ಲ ಎಂದು ಹೇಳಿ ಕಳಿಹಿಸುತ್ತಿದ್ದಾರೆ. ಆದ್ರೆ ಇನ್ಮುಂದೆ ಯಾವೊಂದು ಬಂಕ್ ಕೂಡ ಈ ರೀತಿಯ ಹೇಳಿಕೆ ನೀಡೋ ಹಾಗಿಲ್ಲ.. ಅಕಸ್ಮಾತ್ ನೋಟು ಪಡೆಯಲು ಅಲ್ಲಿನ ಮಾಲಿಕರು ನಿರಾಕರಿಸಿದ್ದೇ ಆದಲ್ಲಿ ಬಂಕ್ ಮಾಲಿಕರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೇಂದ್ರ ಇಂಧನ ಸಚಿವ ಧಮೇಂದ್ರ ಪ್ರಧಾನ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಗ್ರಾಹಕರ ಬಳಿ 500, 1000 ನೋಟು ಕೊಳ್ಳದೇ ಹೋದರೆ, ಅವರ ವಿರುದ್ದ ದೂರು ನೀಡಿ ಎಂದು ಗ್ರಾಹಕರಿಗೆ ತಿಳಿಸಿದ್ದಾರೆ.
Like us on Facebook The New India Times
POPULAR STORIES :
ಅಮೇರಿಕಾ ಅಧ್ಯಕ್ಷೀಯ ಚುನಾವಣೆ: ಡೊನಾಲ್ಡ್ ಟ್ರಂಪ್‍ಗೆ ಐತಿಹಾಸಿಕ ಜಯ.
ಮನಸ್ಸಿಗೆ ಬಂದ ಫೇಸ್‍ಬುಕ್ ಗೆಳತಿ ಮನೆ ಬೆಳಗುವಳಾ.? | ರಿಯಲ್ ಸ್ಟೋರಿ
ತಮ್ಮ ಗುರುವಿಗಾಗಿ ಸ್ಟಂಟ್ ಮಾಡಲು ಒಪ್ಪಿಕೊಂಡಿದ್ರು: ರವಿವರ್ಮ
ಮಾಸ್ತಿಗುಡಿ ದುರಂತ: ಐವರ ವಿರುದ್ದ ಜಾಮೀನು ರಹಿತ ವಾರೆಂಟ್ ಜಾರಿ..!