ಇಂದಿನ ಟಾಪ್ ೧೦ ಸುದ್ದಿಗಳು..! 05.12.2015

0
69

ಹಿಂದೂ ಮಹಾಸಾಗರದಲ್ಲಿ ಭೂಕಂಪ :
ಹಿಂದೂ ಮಹಾಸಾಗರದ ದಕ್ಷಿಣಾ ಭಾಗದಲ್ಲಿ ಇಂದು ಮುಂಜಾನೆ 4.30ರ ಸುಮಾರಿಗೆ ಪ್ರಬಲ ಭೂಕಂಪ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ. ಭೂಕಂಪದ ತೀವ್ರತೆ 7.1ರಷ್ಟಿತ್ತು.
ಹಿಂದೂ ಮಹಾಸಾಗರದ ದಕ್ಷಿಣದ ತಳಭಾಗ ಭೂಕಂಪನದ ಕೇಂದ್ರಬಿಂದುವಾಗಿದೆ ಎಂದು ಹೇಳಲಾಗುತ್ತಿದೆ.
ಆಸ್ಟ್ರೇಲಿಯಾದ ಪರ್ತ್ ನಗರದ 2100 ಕಿಲೋಮೀಟರ್ ದೂರದ ಹಾಗೂ ಜನರ್ಯಾರೂ ವಾಸ ಮಾಡದ ಹರ್ಡ್ ದ್ವೀಪ ಮತ್ತು ಮೆಕ್ ಡೊನಾಲ್ಡ್ ದ್ವೀಪಗಳಿಂದ 1000 ಕಿಮೀ ದೂರದಲ್ಲಿ ಈ ಭೂಕಂಪ ಸಂಭವಿಸಿದೆ. ಬೆಳಿಗ್ಗೆ ಈ ಕುರಿತು ವರದಿಯಾದಾಗ ಆಸ್ಟ್ರೇಲಿಯಾಕ್ಕೆ ಸುನಾಮಿ ಭೀತಿ ಎದುರಾಗಿದೆ ಎನ್ನಲಾಗುತ್ತಿತ್ತು. ಆದರೆ ನಂತರದ ಮಾಹಿತಿ ಪ್ರಕಾರ ಸುನಾಮಿ ಭೀತಿಯ ಸೂಚನೆಗಳೇನೂ ಇಲ್ಲ.
ಭಾರತದ ನೆರವಿಗೆ ಅಮೇರಿಕಾ :
ಶತಮಾನದ ಮಳೆಯಿಂದ ತತ್ತರಿಸಿರುವ ಚೆನ್ನೈ ಸುಧಾರಣೆಗೆ ಅಮೇರಿಕಾ ಕೂಡ ಸಹಕಾರ ನೀಡಲು ಮುಂದಾಗಿದೆ. ಈ ಸವಾಲನ್ನು ಎದುರಿಸಲು ಭಾರತಕ್ಕೆ ಸಹಕಾರ ನೀಡುವುದಾಗಿ ಅಮೆರಿಕಾ ಘೋಷಿಸಿದೆ.
ಅಮೇರಿಕಾ ವಿದೇಶಾಂಗ ಇಲಾಖೆಯ ಉಪವಕ್ತಾರ ಮಾರ್ಕ್ ಟೋನರ್, ಮಳೆಯಿಂದಾಗಿ ಮೃತಪಟ್ಟ ಕುಟುಂಬದವರಿಗೆ ಸಾಂತ್ವಾನ ಹೇಳಿದ್ದಾರೆ. ಈ ಸಂಬಂಧ ತಮಿಳುನಾಡು ಹಾಗೂ ಭಾರತಕ್ಕೆ ಯಾವುದೇ ರೀತಿಯ ಸಹಾಯ ನೀಡಲು ಅಮೇರಿಕಾ ಸಿದ್ಧವೆಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಚೆನ್ನೈಗೆ ವಿಶೇಷ ರೈಲುಗಳ ವ್ಯವಸ್ಥೆ :
ಪ್ರವಾಹದಲ್ಲಿ ಸಿಲುಕಿಕೊಂಡಿರುವ ಚೆನ್ನೈ ಪ್ರಯಾಣಿಕರ ರಕ್ಷಣೆಗಾಗಿ ದಕ್ಷಿಣ ರೈಲ್ವೆ ಅಲ್ಲಿಗೆ ವಿಶೇಷ ರೈಲುಗಳ ವ್ಯವಸ್ಥೆಯನ್ನು ಮಾಡಿದೆ.

ಸಿರಿಯಾದ 1500 ಪ್ರದೇಶಗಳ ಮೇಲೆ ರಷ್ಯಾದಾಳಿ :
ರಷ್ಯಾದ ವಾಯುಪಡೆ ಕಳೆದ 9 ದಿನಗಳಿಂದ ಸಿರಿಯಾದ ಸರಿಸುಮಾರು 1500 ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.
1458 ಕಡೆಗಳಲ್ಲಿ ದಾಳಿ ನಡೆಸಿರುವುದಾಗಿ ರಷ್ಯಾದ ಭದ್ರತಾ ಪಡೆ ತಿಳಿಸಿದೆ. ಆದರೆ ಆ ಪ್ರದೇಶಗಳೆಲ್ಲವೂ ಇಸ್ಲಾಮಿಕ್ ಸ್ಟೇಟ್ ಹಿಡಿತದಲ್ಲಿದ್ದವೇ ಎಂಬ ಯಾವ ವಿಚಾರವನ್ನೂ ಸ್ಪಷ್ಟಪಡಿಸಿಲ್ಲ. ದಾಳಿಯಿಂದ ಉಗ್ರಗಾಮಿಗಳ ಅತ್ಯಂತ ದೊಡ್ಡ ಅಡಗುತಾಣವನ್ನು ನಿರ್ಣಾಮ ಮಾಡಿದ್ದೇವೆಂಷ್ಟೇ ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಐಎಸ್ ಅಡಗುತಾಣಗಳಲ್ಲದೇ 40 ತೈಲ ಸಾಗಾಣಿಕ ಟ್ರಕ್ಕುಗಳನ್ನೂ, 12 ಪೆಟ್ರೋಲ್ ಪಂಪ್ ಗಳನ್ನು ಮತ್ತು 8 ತೈಲ ನಿಕ್ಷೇಪಗಳನ್ನೂ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ರಷ್ಯಾದ ಯುದ್ಧವಿಮಾನವನ್ನು ಸಿರಿಯಾ ಮತ್ತು ಟರ್ಕಿಯ ಗಡಿಯಲ್ಲಿ ಟರ್ಕಿ ಹೊಡೆದುರುಳಿಸಿದ್ದಕ್ಕೆ ರಷ್ಯಾ ತನ್ನೆಲ್ಲಾ ಬಾಂಬರ್ ವಿಮಾನಗಳ ರಕ್ಷಣೆಗಾಗಿ ಸುಖೋಯ್ 30 ವಿಮಾನಗಳನ್ನು ನಿಯೋಜನೆ ಮಾಡಿದೆ.
ಕಳೆದವಾರವಷ್ಟೇ ರಷ್ಯಾ, “ಐಎಸ್ ಹಿಡಿತದ ತೈಲ ನಿಕ್ಷೇಪಗಳಿಂದ ತೈಲವನ್ನು ಟರ್ಕಿ ಕಳ್ಳ ಸಾಗಣೆ ಮಾಡ್ತಿದೆ ಎಂದು ರಷ್ಯಾ ಆರೋಪಮಾಡಿತ್ತು.

ಚೆನ್ನೈ ಸಂತ್ರಸ್ತರಿಗೆ ಕೆಎಸ್ಆರ್ಟಿಸಿ ಉಚಿತ ಸೇವೆ..!
ಕುಂಭದ್ರೋಣ ಮಳೆಗೆ ಬೆಚ್ಚಿ ಬಿದ್ದು, ಪ್ರವಾಹದಿಂದ ನಲುಗುತ್ತಿರುವ ಚೆನ್ನೈನಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರ ನೆರವಿಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಮುಂದಾಗಿದೆ.
ಚೆನ್ನೈ ಸಂತ್ರಸ್ತರಿಗಾಗಿ ಕೆಎಸ್ಆರ್ಟಿಸಿ ಹೆಚ್ಚುವರಿ ಬಸ್ಗಳನ್ನು ಕಳುಹಿಸಿದ್ದು ಮೂರು ಬಸ್ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆಯನ್ನು ಮಾಡಿದೆ. ನಿನ್ನೆ (ಶುಕ್ರವಾರ) ಸಂಜೆಯಿಂದಲೇ ಬೆಂಗಳೂರತ್ತ ಪ್ರಯಾಣ ಬೆಳೆಸುತ್ತಿದ್ದಾರೆ.
ನಿತ್ಯ ಚೆನ್ನೈ-ಬೆಂಗಳೂರು, ಬೆಂಗಳೂರು- ಚೆನ್ನೈಗೆ ಒಟ್ಟು 43 ಬಸ್ ಗಳು ಸಂಚರಿಸುತ್ತಿದ್ದವು. ಈಗ 10 ಹೆಚ್ಚವರಿ ಬಸ್ ಗಳನ್ನು ಬಿಡಲಾಗಿದ್ದು ಒಟ್ಟಾರೆ 53 ಬಸ್ ಗಳ ಸೇವೆ ಕಲ್ಪಿತವಾಗಿದೆ. ಕೇರಳವೂ ಉಚಿತ ಪ್ರಯಾಣ ವ್ಯವಸ್ಥೆ ಮಾಡಿದೆ.

ರಾಹುಲ್ ಮೇಲೆ ಕೋಪಗೊಂಡ ಧವನ್..!

ಬರ್ತ್ ಡೇ ಬಾಯ್ ಶಿಖರ್ ಧವನ್, ತಮ್ಮ ಸಹ ಆಟಗಾರರಾದ ಕನ್ನಡಿಗ ರಾಹುಲ್ ಮೇಲೆ ಕೋಪಗೊಂಡಿದ್ದಾರೆ.
ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ 24ನೇ ಓವರ್ ಮುಕ್ತಾಯಗೊಂಡಾಗ ಧವನ್ ಡ್ರೆಸ್ಸಿಂಗ್ ರೂಂ ಕಡೆ ಕೈ ಮಾಡಿದಾಗ ಹೆಚ್ಚುವರಿ ಆಟಗಾರರಾದ ರಾಹುಲ್ ಮತ್ತು ಗುರುಕೀರತ್ ಸಿಂಗ್ ಗಮನಿಸಿರಲಿಲ್ಲ. ಆಗ ಕೋಪಗೊಂಡ ಧವನ್ ರಾಹುಲ್ ಬಗ್ಗೆ ಜೋರಾಗಿ ಮಾತನಾಡಿದ್ದಾರೆ. ನಂತರ ರಾಹುಲ್ ಮೈದಾನಕ್ಕೆ ತಡವಾಗಿ ಬಂದಿದ್ದಕ್ಕೂ ಆಕ್ರೋಶ ಪಡಿಸಿದ್ದಾರೆ. ಲಂಚ್ ವಿರಾಮದಲ್ಲಿ ಇವೆಲ್ಲಾ ಸರಿಯಾಗಿದೆ ಎಂದು ತಿಳಳಿದು ಬಂದಿದೆ.

ಪ್ರಧಾನಿಯ ಸಂಬಳವನ್ನೂ ಹೆಚ್ಚಿಸಬೇಕೆಂದ ಕೇಜ್ರಿವಾಲ್..!
ದಿಲ್ಲಿ ಸರ್ಕಾರ ತಮ್ಮ ಶಾಸಕರ ಮತ್ತು ಸಚಿವರ ಸಂಬಳವನ್ನು ಹೆಚ್ಚಿಸಬೇಕೆಂದು ನಿರ್ಧಾರ ಮಾಡಿದ್ದಕ್ಕೆ ಬಂದ ಟೀಕೆಗಳಿಗೆ ಉತ್ತರಿಸಿದ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ `ಪ್ರಧಾನ ಮಂತ್ರಿಗಳ’ ಸಂಬಳವನ್ನೂ ಹೆಚ್ಚಿಸಬೇಕೆಂದು ಹೇಳಿದ್ದಾರೆ..! ಪ್ರಧಾನಿ ಮಂತ್ರಿಯವರ ಸಂಬಳ 8ರಿಂದ 10 ಲಕ್ಷ ರೂ ನಷ್ಟಿರಬೇಕೆಂಬುದು ಕೇಜ್ರಿವಾಲರ ಪ್ರತಿಪಾದನೆ..!

ಬಾಂಗ್ಲಾದಲ್ಲಿ ದೇವಾಲಯದ ಬಳಿ ಸರಣಿ ಬಾಂಬ್ ದಾಳಿ
ನೆರೆಯ ಬಾಂಗ್ಲಾದೇಶದ ದೀನಾಜ್ ಪುರ್ನ ಹಿಂದೂ ದೇವಾಲಯದ ಬಳಿ ಶುಕ್ರವಾರ ಸರಣಿ ಬಾಂಬ್ ದಾಳಿ ನಡೆಸಿದ್ದಾರೆ. 10ಕ್ಕೂ ಹೆಚ್ಚು ಜನ ಈ ದಾಳಿಯಲ್ಲಿ ಅಸುನೀಗಿದ್ದಾರೆಂಬುದು ವರದಿಯಾಗಿದೆ.

ಏಡ್ಸ್ ಬಗ್ಗೆ ಮಾತನಾಡುವುದೇ ಅಪರಾಧ..!

ಪಾಕ್ ನಲ್ಲಿ ಏಡ್ಸ್ ಬಗ್ಗೆ ಮಾತನಾಡುವಂತಿಲ್ಲ..! ಎಲ್ಲೆಲ್ಲೂ ಕಾಂಡೋಮ್ ಜಾಹಿರಾತುಗಳನ್ನು ಪ್ರದರ್ಶಿಸಲೂ ಬಾರದು..! ಇಲ್ಲಿ ಏಡ್ಸ್ ಬಗ್ಗೆ ಮಾತನಾಡುವುದನ್ನು, ಮತ್ತು ಕಾಂಡೋಮ್ ಬಗ್ಗೆ ಮಾತನಾಡುವುದನ್ನು ನಿಷೇಧ ಹೇರಲಾಗಿದೆ.
ಎಂಥಾ ಪರಿಸ್ಥಿಯಲ್ಲೂ ಏಡ್ಸ್ ಬಗ್ಗೆ ಚರ್ಚೆಯೇ ಮಾಡಬಾರದು. ಎಂದು ಸರ್ಕಾರ ಆದೇಶಿಸಿದೆ ಎಂಬುದನ್ನು ಪಾಕ್ ದಿನಪತ್ರಿಕೆಯೊಂದು ವರದಿ ಮಾಡಿದೆ.
ಈ ಬಗ್ಗೆ ಸಂಪಾದಕೀಯದಲ್ಲಿಯೇ ಬರೆದಿರುವ ಪತ್ರಿಕೆ ಏಡ್ಸ್ ಕಾಯಿಲೆ ಬಗ್ಗೆ ಮಾತನಾಡುವುದು ದೊಡ್ಡದಾದ ಅಪರಾಧ ಎಂದು ಸರ್ಕಾರ ಪರಿಗಣಿಸಿದೆ ಎಂಬುದನ್ನು ತಿಳಿಸಿದೆ.

ನಿತೀಶ್ ಕುಮಾರ್ ರನ್ನು ಭೇಟಿಮಾಡಿದ ಬಿಲ್ ಗೇಟ್ಸ್
ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಬಿಹಾರದ ಮುಖ್ಯಮಂತ್ರಿಗಳಾದ ನಿತೀಶ್ ಕುಮಾರ್ ರನ್ನು ಭೇಟಿ ಮಾಡಿದ್ದಾರೆ. ನಿತೀಶ್ ಕುಮಾರ್ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ ಬಿಲ್ ಗೇಟ್ಸ್ ಆರೋಗ್ಯ, ಶಿಕ್ಷಣ, ಮಾನವ ಅಭಿವೃದ್ಧಿ ಹಾಗೂ ಇನ್ನಿತರ ಕ್ಷೇತ್ರಗಳ ಕುರಿತಂತೆ ಚರ್ಚೆ ನಡೆಸಿದ್ದಾರೆಂದು ವರದಿಯಾಗಿದೆ. ರಾಜ್ಯ ಸರ್ಕಾರ ಶಿಕ್ಷಣ ಹಾಗೂ ಆರೋಗ್ಯ ಮತ್ತಿತರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಲ್ ಗೇಟ್ಸ್ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆಂದು ನಂಬಲಾರ್ಹ ಮೂಲಗಳಿಂದ ತಿಳಿದು ಬಂದಿದೆ.

 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ಟೀಕಿಸುವವರಿಗೆ ಟ್ಟೀಟರ್ ಲ್ಲಿ ಉತ್ತರ ಕೊಟ್ಟಿದ್ದಾರೆ ಮೋದಿ..! ತಮ್ಮನ್ನು ಟೀಕಿಸುವವರಿಗೆ ಪ್ರಧಾನಿಯ ಪ್ರತ್ಯುತ್ತರವೇನು..?!

ಪ್ರವಾಹದ ಮಧ್ಯೆಯೂ ರಾಜಕೀಯ ಬೇಕಿತ್ತಾ..? ಆಹಾರ ಪೊಟ್ಟಣಗಳ ಮೇಲೆ ಅಮ್ಮ ಸ್ಟಿಕ್ಕರ್ಸ್..!

ರಾಹುಲ್ ದ್ರಾವಿಡ್ ಒಳ್ಳೆಯ ಕ್ರಿಕೆಟಿಗ ಮಾತ್ರವಲ್ಲ. ಅವರೊಬ್ಬ ಆದರ್ಶ ವ್ಯಕ್ತಿ..!

`ಗ್ರಾಮೀಣ ಜನರಿಗಾಗಿ’ ಕೆಲಸ ಬಿಟ್ಟುಬಂದ ಇಂಜಿನಿಯರ್ಸ್..!

`ಕೊಹಿನೂರು ವಜ್ರ’ ಪಾಕಿಸ್ತಾನದ್ದಂತೆ..! `ಕೊಹಿನೂರು ವಜ್ರ’ದ ಮೇಲೂ ಬಿತ್ತು ಪಾಕ್ ಕಣ್ಣು..!

ಇವರು ನಮ್ಮ ಬೆಂಗಳೂರಿನ ತ್ಯಾಜ್ಯೋಧ್ಯಮಿ..! ಕಸ ಆಯುವಾತನಿಗೆ ವಿಶ್ವಸಂಸ್ಥೆಯಿಂದ ಕರೆ..!

LEAVE A REPLY

Please enter your comment!
Please enter your name here