‘ಸೆಲ್ಫಿ ಮೇನೆ ಲೇಲಿಯಾ’ ಎಂಬ ಹಾಡಿನ ಮೂಲಕ ಸಖತ್ ಸದ್ದು ಮಾಡಿದ ಯೂಟ್ಯೂಬ್ ಸ್ಟಾರ್ ಡಿಂಚಕ್ ಪೂಜ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡ್ತಿದ್ದಾರೆ. ಇವರನ್ನು ಕರೆತರುತ್ತಿರುವುದು ಬಿಗ್ ಬಾಸ್ ಖ್ಯಾತಿಯ ಒಳ್ಳೆಯ ಹುಡುಗ ಪ್ರಥಮ್…!

ಹೌದು,ಪ್ರಥಮ್ ನಿರ್ದೇಶಿಸಿ ನಟಿಸುತ್ತಿರುವ ‘ಪ್ರಥಮ್ ಬಿಲ್ಡಪ್’ ಚಿತ್ರಕ್ಕೆ ಡಿಂಚಕ್ ಪೂಜಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಫೆಬ್ರವರಿ 24 ರಂದು ಪ್ರಥಮ್ ಹುಟ್ಟುಹಬ್ಬದಂದು ಶುಭಾಶಯ ಕೋರಿ ವಿಡಿಯೋ ಹರಿಬಿಟ್ಪಿರುವ ಪೂಜಾ, ‘ಎಲ್ಲರಿಗೂ ನಮಸ್ಕಾರ. ನಾನು ನಿಮ್ಮ ಡಿಂಚಕ್ ಪೂಜಾ’ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ್ದಾರೆ! ಬಳಿಕ ಹಿಂದಿಯಲ್ಲಿ ಮಾತನಾಡಿ, ‘ನಾನು ಪ್ರಥಮ್ ನಿರ್ದೇಶನದ ಚಿತ್ರದಲ್ಲಿ ಆಕ್ಟ್ ಮಾಡುತ್ತಿದ್ದೇನೆ. ನನಗೆ ಕನ್ನಡ ಅಷ್ಟು ಸರಿಯಾಗಿ ಬರುವುದಿಲ್ಲ. ದಕ್ಷಿಣ ಭಾರತದ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಖುಷಿ ಇದೆ ಎಂದು ಪ್ರಥಮ್ ಗೆ ಧನ್ಯವಾದ ತಿಳಿಸಿದ್ದಾರೆ.






