ಸಿಸಿನಿಮಾ ಸ್ಟಾರ್ ಗಳು ಜನಸಾಮಾನ್ಯರ ಮೇಲೆ, ಅಭಿಮಾನಿಗಳ ಮೇಲೆ ತುಂಬಾನೇ ಪ್ರಭಾವ ಬೀರುತ್ತಾರೆ.
ನೆಚ್ಚಿನ ನಟ-ನಟಿಯರು ಅಭಿಮಾನಿಗಳಿಗೆ ದೇವರು ಹಾಗೂ ಅವರೇ ಸ್ಫೂರ್ತಿಯ ಚಿಲುಮೆ.
ತುಮಕೂರಿನ ವಿಕಲಚೇತನ ಅಕ್ಕ-ತಮ್ಮನಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೇ ಒಂದು ಪವರ್…!
ಹೌದು, ತುಮಕೂರು ಜಿಲ್ಲೆಯ ತಿಪಟೂರಿನ ರಾಜಶೇಖರ್ ಮತ್ತು ಜಯಮ್ಮ ದಂಪತಿ ಮಕ್ಕಳಾದ ಶ್ರುತಿ ಮತ್ತು ತೇಜಸ್ ಅಪ್ಪು ಅಭಿಮಾನಿಗಳು.
ಇವರಿಬ್ಬರು ಹುಟ್ಟುವಾಗ ಆರಾಮಾಗಿಯೇ ಇದ್ದರು. ನಾಲ್ಕನೇ ತರಗತಿ ನಂತರ ಬೆಳೀತಾ ಬೆಳೀತ ಅಂಗವಿಕಲರಾಗಿದ್ದಾರೆ. ಇವರಿಗೆ ನಡೆಯಲಾಗುವುದಿಲ್ಲ. ಮಾತು ನಿಂತಿದೆ. ಪುನೀತ್ ಅವರ ಸಿನಿಮಾ, ಕಾರ್ಯಕ್ರಮ, ಸಂದರ್ಶನ ಏನೇ ಬರಲಿ ನೋಡುತ್ತಾರೆ. ಅವರನ್ನು ನೋಡಿದ ಕೂಡಲೇ ವಿಶೇಷ ಚೈತನ್ಯ ದಿಂದ ನಡೆಯಲು ಪ್ರಯತ್ನಿಸುತ್ತಾರೆ. ಇದನ್ನು ಸ್ವತಃ ಈ ಮಕ್ಕಳ ಪೋಷಕರೇ ಹೇಳಿದ್ದಾರೆ.
ಈ ಪುಟಾಣಿಗಳಿಗೆ ಜೀವನದಲ್ಲಿ ಒಮ್ಮೆಯಾದ್ರೂ ಪುನೀತ್ ಅವರನ್ನು ಭೇಟಿ ಮಾಡೋ ಆಸೆ.