ಪುನೀತ್ ರಾಜ್ ಕುಮಾರ್, ಅಣ್ಣಾವ್ರ ಕುಟುಂಬದ ಸೂಪರ್ ಸ್ಟಾರ್. ಅವರು ಕನ್ನಡಿಗರ ಹಾಟ್ ಫೇವರೇಟ್. ಅಂತದ್ರಲ್ಲಿ ಅವರಿಗೆ ಕನ್ನಡ ಓದೋಕೆ ಬರೆಯೋಕೆ ಬರಲ್ಲ ಅಂತ ಇಂಗ್ಲಿಷ್ ದಿನಪತ್ರಿಕೆಯೊಂದು ವರದಿ ಮಾಡಿದೆ..! ಇದು ಎಷ್ಟರ ಮಟ್ಟಿಗೆ ನಿಜವೋ ಸುಳ್ಳೋ ಗೊತ್ತಿಲ್ಲ, ಆದ್ರೆ ಫೇಸ್ ಬುಕ್ಕಲ್ಲಿ ಅಪ್ಪು ಫ್ಯಾನ್ಸ್ ಮಾತ್ರ ಇದನ್ನು ಅಲ್ಲಿಗೇ ಬಿಡೋ ಯಾವ ಸಾಧ್ಯತೆಯೂ ಇಲ್ಲ..! ಯಾಕಂದ್ರೆ ಈಗಾಗ್ಲೇ ಆ ಇಂಗ್ಲಿಷ್ ಪತ್ರಿಕೆ ಪುನೀತ್ ಅವರಲ್ಲಿ ಕ್ಷಮೆ ಕೇಳಬೇಕು ಅಂತ ಅಭಿಮಾನಿಗಳು ಹರಿಹಾಯ್ದಿದ್ದಾರೆ..! ಇಲ್ಲ ಅಂದ್ರೆ ಪರಿಣಾಮ ನೆಟ್ಟಗಿರಲ್ಲ ಅಂತಲೂ ಎಚ್ಚರಿಕೆ ನೀಡಿದ್ದಾರೆ..!
ಪತ್ರಿಕೆ ಹೇಳೋ ಪ್ರಕಾರ ಇತ್ತೀಚೆಗೆ ಅವರ ಫ್ಯಾಮಿಲಿಯ ಯಾವುದೋ ಕಾರ್ಯಕ್ರಮದಲ್ಲಿ ಕರೋಕೆ ಹಾಡುವಾಗ `ನಂಗೆ ಕನ್ನಡ ಓದೋಕೆ ಬರೆಯೋಕೆ ಬರಲ್ಲ’ ಅಂತ ಅಪ್ಪು ಹೇಳಿದ್ರು ಅಂತ ಬರೆದಿದೆ. ಅಷ್ಟೇ ಅಲ್ಲದೆ ಅವರು ಬಾಲ್ಯವನ್ನು ಚೆನ್ನೈನಲ್ಲಿ ಕಳೆದಿರೋದ್ರಿಂದ ಅವರಿಗೆ ಕನ್ನಡ ಓದೋದು ಬರೆಯೋದು ಅಷ್ಟಾಗಿ ಬರೋದಿಲ್ಲ ಅಂತ ಹೇಳೋದರ ಜೊತೆಗೆ ಮುಂದೆ ಯಾವುದೇ ಕಾರ್ಯಕ್ರಮದಲ್ಲಿ ಪುನೀತ್ ಅವರನ್ನು ಗೆಸ್ಟ್ ಆಗಿ ಕರೆದು `ಕರೋಕೆ’ ಹಾಡೋಕೆ ಹೇಳಿದ್ರೆ ಹಾಡುಗಳ ಸಾಹಿತ್ಯ ತಮಿಳಿನಲ್ಲಿದೆ ಅನ್ನೋದು ಖಚಿತಪಡಿಸಿಕೊಳ್ಳಿ ಅಂತ ಕಿಚಾಯಿಸಿತ್ತು..! ಇದು ಅಪ್ಪು ಅಭಿಮಾನಿಗಳ ಪಿತ್ತ ನೆತ್ತಿಗೇರಿಸಿದೆ..! ಅದರ ಜೊತೆಗೆ ಅಪ್ಪು ಆ ಪತ್ರಿಕೆ ವಿರುದ್ಧ ಕಾನೂನು ರೀತಿಯ ಕ್ರಮ ತಗೋತಾರೆ ಅನ್ನೋ ಮಾತುಗಳೂ ಕೇಳಿ ಬರ್ತಿವೆ..! ಅದಕ್ಕೆ ಸಾಕ್ಷಿ ಎಂಬಂತೆ ಪುನೀತ್ ಬರೆದಿದ್ದಾರೆ ಎನ್ನಲಾದ ಪತ್ರದ ಕಾಪಿಯನ್ನೂ ಫೇಸ್ ಬುಕ್ ಪೇಜುಗಳಲ್ಲಿ ಹಾಕಿಕೊಂಡಿದ್ದಾರೆ ಅವರ ಅಭಿಮಾನಿಗಳು..! ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಪುನೀತ್ ರಾಜ್ ಕುಮಾರ್ ಅವರೇ ಹೇಳಬೇಕು..!
ಅಷ್ಟಕ್ಕೂ ಅಪ್ಪು ಫ್ಯಾನ್ಸ್ ಅವರ ಪೇಜುಗಳಲ್ಲಿ ಹಾಕಿಕೊಂಡಿರೋ ಆ ಪತ್ರದ ಪ್ರಕಾರ , `ನಾನು ಈ ಹಿಂದೆ ಅತ್ಯಂತ ಸೂಪರ್ ಹಿಟ್ ಶೋ `ಕನ್ನಡದ ಕೋಟ್ಯಾಧಿಪತಿ’ ನಡೆಸಿಕೊಟ್ಟಿದ್ದೆ. ಆ ಶೋದಲ್ಲಿನ ಪ್ರತಿ ಸ್ಕ್ರಿಪ್ಟ್ ಸಹ ಕನ್ನಡದಲ್ಲೇ ಇತ್ತು, ಮತ್ತು ಅದನ್ನು ಯಾವುದೇ ತಪ್ಪಿಲ್ಲದೇ ನಡೆಸಿಕೊಟ್ಟಿದ್ದೇನೆ.. ಈಗ ಯಾವ ಆಧಾರದ ಮೇಲೆ ಈ ವರದಿ ಮಾಡಿದ್ದೀರಿ..? ನೀವು ನಿಮ್ಮ ಪತ್ರಿಕೆಯ ಮುಖಪುಟದಲ್ಲಿ ಈ ಸಂಬಂಧ ಕ್ಷಮೆ ಕೇಳದಿದ್ದರೆ ನಾನು ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇನೆ’ ಅನ್ನೋ ರೀತಿಯ ವಾಕ್ಯಗಳು ಪುನೀತ್ ಬರೆದಿದ್ದಾರೆ ಎನ್ನಲಾಗಿರೋ ಆ ಪತ್ರದಲ್ಲಿದೆ..! ಅದೇ ಪೋಸ್ಟ್ ನ ಕಾಮೆಂಟ್ಸ್ ಗಳಲ್ಲೂ ಇದರ ಸಂಬಂಧ ಚರ್ಚೆಗಳಾಗಿವೆ. ಅದರಲ್ಲೂ ಪುನೀತ್ ಅವರ ಸ್ನೇಹಿತರನ್ನು ಸಂಪರ್ಕಿಸಿ ಕಾನೂನು ರೀತಿಯ ಕ್ರಮಕ್ಕೆ ಮುಂದಾಗಿದ್ದಾರೆ ಅನ್ನೋ ಚರ್ಚೆಗಳು ನಡೆದಿವೆ..!
ಪತ್ರಿಕೆ ಹಾಗೆ ವರದಿ ಮಾಡಿರೋದಂತೂ ನಿಜ. ಆದ್ರೆ ಅದರ ಸತ್ಯಾಸತ್ಯತೆ ಗೊತ್ತಿಲ್ಲ..! ಆದ್ರೆ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಅಪ್ಪುರವರ ಸ್ಟೈಲ್ ನೋಡಿದ್ರೆ, ಅವರಿಗೆ ಕನ್ನಡ ಓದೋಕೆ ಬರೆಯೋಕೆ ಬರಲ್ಲ ಅಂದ್ರೆ ಯಾರು ನಂಬ್ತಾರೆ..? ಮುಂದಿನದು ಆ ಪತ್ರಿಕೆ ಹಾಗೂ ಪುನೀತ್ ಅವರಿಗೆ ಬಿಟ್ಟಿದ್ದು..! ಆದ್ರೆ ಸತ್ಯ ಏನು ಅನ್ನೋದು ಕನ್ನಡಿಗರಿಗೆ ಇನ್ನಷ್ಟೇ ಗೊತ್ತಾಗಬೇಕು..!
-ಕೀರ್ತಿ ಶಂಕರಘಟ್ಟ