ನಟಿ ರಾಧಿಕಾ ಪಂಡಿತ್ ಅವರ ಮನೆಗೆ ಹೊಸ ಸದಸ್ಯೆಯ ಆಗಮನವಾಗಿದೆ. ಮನೆಯಲ್ಲೀಗ ಸಂಭ್ರಮವೋ ಸಂಭ್ರಮ.
ಹೌದು ರಾಧಿಕ ಪಂಡಿತ್ ಅವರ ಅತ್ತಿಗೆ ಸಹನಾ ಪಂಡಿತ್ (ಅಣ್ಣ ಗೌರಂಗ್ ಪಂಡಿತ್ ಅವರ ಪತ್ನಿ ) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಗೌರಂಗ್ ಮತ್ತು ಸಹನಾ ದಂಪತಿ ಅಮೆರಿಕಾದ ಚಿಕಾಗೋ ನಲ್ಲಿ ನೆಲೆಸಿದ್ದಾರೆ. ರಾಧಿಕಾ ಪಂಡಿತ್ ಫೆಬ್ರವರಿ 2ರಂದು ತಾಯಿಯ ಜೊತೆ ಅಮೆರಿಕಾ ಫ್ಲೈಟ್ ಹತ್ತಿದ್ದರು. ಅಣ್ಣ , ಅತ್ತಿಗೆ ಮತ್ತು ಮುದ್ದಾದ ಪಾಪುವನ್ನು ನೋಡಿ ರಾಧಿಕಾ ಖುಷಿಯಾಗಿದ್ದಾರೆ. ಚಿಕಾಗೋದ ಇಲಿನಾಯ್ಸ್ ಗೆ ತೆರಳಿರುವ ರಾಧಿಕಾ ಫೋಟೋ ಕ್ಲಿಕ್ಕಿಸಿ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.