ನಟಿ ರಾಧಿಕಾ ಪಂಡಿತ್ ಅಮ್ಮ ಆಗ್ತಿರೋ ವಿಷ್ಯ ಗೊತ್ತಿದೆ. ಯಶ್ ಮತ್ತು ರಾಧಿಕಾ ಕುಟುಂಬ ಈಗ ಹೊಸ ಸದಸ್ಯನ/ಳ ಆಗಮನಕ್ಕೆ ಕಾಯುತ್ತಿದೆ.
ಡಿಸೆಂಬರ್ ನಲ್ಲಿ ಯಶ್- ರಾಧಿಕಾ ಅವರ ವಿವಾಹ ವಾರ್ಷಿಕೋತ್ಸವ ಇದೆ. ಜೊತೆಗೆ ಕೆಜಿಎಫ್ ರಿಲೀಸ್ ಆಗ್ತಾ ಇದೆ. ಈ ಖುಷಿಯ ಜೊತೆಗೆ ಯಶ್ ಗೆ ಅಪ್ಪ ಆಗೋ ಸಂಭ್ರಮ, ರಾಧಿಕಾಗೆ ಅಮ್ಮನಾಗ್ತಿರೋ ಖುಷಿ.
ಡಿಸೆಂಬರ್ ನಲ್ಲಿ ರಾಧಿಕಾ ಡೆಲವರಿ ಆಗುತ್ತದೆ ಎಂದು ಈ ಮೊದಲೇ ತಿಳಿದಿತ್ತು. ಈಗ ಡೇಟ್ ಕೂಡ ಫಿಕ್ಸ್ ಆಗಿದೆ.
ಡಿಸೆಂಬರ್ 9 ರಂದು ಯಶ್- ರಾಧಿಕಾ ವಿವಾಹ ಮಹೋತ್ಸವಿದ್ದು ಇದರ ಆಸುಪಾಸಲ್ಲೇ ರಾಧಿಕಾ ಮುದ್ದಾದ ಮಗುವಿಗೆ ಜನ್ಮನೀಡಲಿದ್ದಾರೆ. ಡಿಸೆಂಬರ್ ಮೊದಲ ವಾರದಲ್ಲಿ ಡೆಲವರಿ ಡೇಟ್ ನೀಡಲಾಗಿದೆ.