ರಂಗಿತರಂಗ ಸಿನಿಮಾದ ಬೆಡಗಿ ರಾಧಿಕಾ ಚೇತನ್ ವಕೀಲೆಯಾಗಿದ್ದಾರೆ.
ಇದೇನ್ ಗುರೂ ಸಿನಿಮಾ ಬಿಟ್ಟು ರಾಧಿಕಾ ವಕೀಲೆ ಆದ್ರಾ ಅಂತ ಯೋಚ್ನೆ ಮಾಡ್ಬೇಡಿ. ರಾಧಿಕಾ ಹೊಸ ಸಿನಿಮಾದಲ್ಲೀಗ ವಕೀಲೆ.
ನಿಮ್ಗೆ ಈಗಾಗಲೇ ಗೊತ್ತಿದೆ.ಡೈರೆಕ್ಟರ್ ಆಕಾಶ್ ಶ್ರೀವತ್ಸ ಅವರ ಇನ್ನೂ ಹೆಸರಿಡದ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾದಲ್ಲಿ ನಟ ರಮೇಶ್ ಅರವಿಂದ್ ನಟಿಸ್ತಾ ಇದ್ದಾರೆ. ಇದೀಗ ಈ ಚಿತ್ರದ ನಾಯಕಿಯಾಗಿ ‘ರಂಗಿತರಂಗ’ ಖ್ಯಾತಿಯ ರಾಧಿಕಾ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ. ಈ ಚಿತ್ರದಲ್ಲಿ ರಮೇಶ್ ಅರವಿಂದ್ ಎಸಿಪಿ ದರ್ಜೆಯ ಅಧಿಕಾರಿ. ರಾಧಿಕಾ ಚೇತನ್ ವಕೀಲೆ. ಈ ಚಿತ್ರಕ್ಕಿನ್ನೂ ಶೀರ್ಷಿಕೆ ಇಟ್ಟಿಲ್ಲ. ಹಾಗೆಯೇ ಇನ್ನೋರ್ವ ಹೀರೋಯಿನ್ ಗಾಗಿ ಹುಡುಕಾಟ ನಡೆಯುತ್ತಿದೆ. ಚಿತ್ರೀಕರಣ ಶೀಘ್ರದಲ್ಲೇ ಶುರುವಾಗಲಿದೆ ಎಂದು ಚಿತ್ರತಂಡ ಹೇಳಿದೆ.