ಭಾರತ ಕ್ರಿಕೆಟ್ ನ ಯುವಪಡೆಯ ಗುರು, ಕನ್ನಡಿಗ ರಾಹುಲ್ ದ್ರಾವಿಡ್ ಅವರನ್ನೀಗ ಐಸಿಸಿ (ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ) ಭ್ರಷ್ಟಾಚಾರ ನಿಗ್ರಹ ಘಟಕದ ಮೇಲ್ವೀಚರಣೆ ಗುಂಪಿಗೆ ನೇಮಕ ಮಾಡಿದೆ. ಇದರೊಂದಿಗೆ ಕನ್ನಡಿಗ ರಾಹುಲ್ ದ್ರಾವಿಡ್ ಅರ್ಹವಾಗಿಯೇ ಮತ್ತೊಂದು ಹೊಣೆಗಾರಿಕೆ ಹೆಗಲೇರಿದೆ..!
ಕ್ರಿಕೆಟ್ನಲ್ಲಿ ಭ್ರಷ್ಟಾಚಾರದ ಪ್ರಕರಣಗಳಿಗೆ ಬ್ರೇಕ್ ಹಾಕುವ ಕಾರ್ಯವನ್ನು ಚುರುಕು ಗೊಳಿಸುವ ಉದ್ದೇಶದಿಂದ ಐಸಿಸಿ ಭ್ರಷ್ಟಾಚಾರ ನಿಗ್ರಹ ಘಟಕದ ಮೇಲ್ವೀಚರಣೆ ಸಮಿತಿಯನ್ನು ರಚಿಸಿಕೊಂಡಿದ್ದು, ಈ ಸಮಿತಿಯಲ್ಲಿ ಐಸಿಸಿ ಕಾರ್ಯ ನಿರ್ವಾಹಕ ಸಮಿತಿಯ ಮುಖ್ಯಸ್ಥರು, ಕನ್ನಡಿಗ ರಾಹುಲ್ ದ್ರಾವಿಡ್ ಅಲ್ಲದೇ ಕಾನೂನು ತಜ್ಞ ಲೂಯಿಸ್ ವೆಸ್ಟನ್, ಭ್ರಷ್ಟಾಚಾರ ತಡೆ ಸ್ವತಂತ್ರ ಸಲಹೆಗಾರ ಜಾನ್ ಅಬಾಟ್, ಭ್ರಷ್ಟಾಚಾರ ಘಟಕದ ರೋನಿ ಫ್ಲಾಂಗನ್, ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇವಿಡ್ ರಿಚೆಡ್ರ್ಸನ್ ಇದ್ದಾರೆ.
ಸದ್ಯ ರಾಹುಲ್ ದ್ರಾವಿಡ್, ಭಾರತ ಕಿರಿಯರ ತಂಡದ ಕೋಚ್ ಆಗಿ ಸೇವೆ ಸಲ್ಲಿಸ್ತಾ ಇದ್ದಾರೆ. ಪ್ರಸ್ತುತ ಬಾಂಗ್ಲದಲ್ಲಿ ನಡೆಯುತ್ತಿರುವ 19 ವರ್ಷ ವಯಸ್ಸಿನೊಳಗಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಹುಡುಗರು ದ್ರಾವಿಡ್ ಮಾರ್ಗದರ್ಶನದಲ್ಲಿ ಗೆಲುವಿನ ನಗೆ ಬೀರುತ್ತಾ, ಉತ್ತಮ ಪ್ರದರ್ಶನ ನೀಡ್ತಾ ಇದ್ದಾರೆ.
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music
ಸೋನುನಿಗಮ್ ಹಾಡಿದ್ದಕ್ಕೇ ಐದು ಜನ ಗಗನಸಖಿಯರು ಅಮಾನತು ಗೊಂಡರು..!
ಅಣ್ಣಂಗೇ ಲವ್ ಆಗಿದೆ ಅಲ್ಲಲ್ಲ, ಹೆಲ್ಮೆಟ್ ಗೆ ಡಿಮ್ಯಾಂಡ್ ಬಂದಿದೆ…! ಇದು ಹೊಸಪೇಟೆ ಹುಡುಗರ ಹೊಸ ಹಾಡು..!