11 ಕಿಲೋ ಮೀಟರ್ 110 ನಿಮಿಷಗಳಲ್ಲಿ, 3550 ಮೆಟ್ಟಿಲು ಹತ್ತಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಹುಲ್ ಗಾಂಧಿ…
ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿಯವರು ಆಂಧ್ರಪ್ರದೇಶದ ಸುಪ್ರಸಿದ್ದ ದೇವಾಲಯವಾದ ಶ್ರೀ ತಿರುಪತಿ ತಿರುಮಲದ ಶ್ರೀ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ.. ಕಾಲ್ನಡಿಗೆಯ ಮೂಲಕ ಅಲಿಪಿರಿಯ ಬೆಟ್ಟವನ್ನ 110 ನಿಮಿಷಗಳಲ್ಲಿ 11 ಕಿಲೋ ಮೀಟರ್ ನ 3550 ಮೆಟ್ಟಿಲುಗಳನ್ನ ಏರಿ ದರ್ಶನವನ್ನ ಪಡೆದಿರುವ ಬಗ್ಗೆ, ಕರ್ನಾಟಕದ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಟ್ವೀಟ್ ಮಾಡುವ ಮೂಲಕ ಫಿಟ್ನೆಸ್ ಚಾಲೆಂಜ್ ಎಂದಿದ್ದಾರೆ…
ಇನ್ನು ಲೋಕಸಭೆ ಎಲೆಕ್ಷನ್ ಹತ್ತಿರವಾಗುತ್ತಿದ ಹಾಗೆ ರಾಹುಲ್ ಗಾಂಧಿ ಟೆಂಪಲ್ ರನ್ ಶುರು ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.. ಇನ್ನು ದರ್ಶನ ಪಡೆದ ರಾಹುಲ್ ಗಾಂದಿ ಅವರಿಗೆ ದೇವಸ್ಥಾನದ ವತಿಯಿಂದ ಗೌರವಿಸಲಾಗಿದೆ..
ದೇಶದ ಪ್ರಧಾನಿ ಅಭ್ಯರ್ಥಿ ಆಗಮನದಿಂದಾಗಿ ತಿರುಪತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು.. ದರ್ಶನ ಪಡೆದ ನಂತರ ಅಲ್ಲಿಯೇ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾನಿಲಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾವೇಶ ಉದ್ದೇಶಿಸಿ ರಾಹುಲ್ ಮಾತನಾಡಿದ್ರು..