ಅರೆಸ್ಟ್ ವಾರೆಂಟ್ ಜಾರಿ ಮಾಡಿದ ಕೋರ್ಟ್.. ಭುವನ್ ಗೆ ಶುರುವಾಗಿದೆ ಬಂಧನ ಭೀತಿ..!!

Must read

ಅರೆಸ್ಟ್ ವಾರೆಂಟ್ ಜಾರಿ ಮಾಡಿದ ಕೋರ್ಟ್.. ಭುವನ್ ಗೆ ಶುರುವಾಗಿದೆ ಬಂಧನ ಭೀತಿ..!!

ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ಮತ್ತಷ್ಟು ನೇಮು ಫೇಮು ಪಡೆದುಕೊಂಡ ಸ್ಪರ್ಧಿಗಳಲ್ಲಿ ಭುವನ್ ಕೂಡ ಒಬ್ಬರು.. ಬಿಗ್ಬಾಸ್ ಸೀಸನ್ 4 ರ ಸ್ಪರ್ಧಿಯಾಗಿದ್ದ ಭುವನ್ ಗೆ ಸತತವಾಗಿ ಕೋರ್ಟ್ ನೊಟೀಸ್ ನೀಡಿದರೂ ವಿಚಾರಣೆಗೆ ಹಾಜರಾಗದ ಕಾರಣ ಸೆಷನ್ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ..

ಏನಿದು ಪ್ರಕರಣ..?

ಬಿಗ್ಬಾಸ್ 4ರ ಸ್ಪರ್ಧಿಯಾಗಿದ್ದ ಭುವನ್, ಸಂಜನಾ ಹಾಗು ಪ್ರಥಮ್ ಅಲ್ಲಿಂದ ಬಂದಮೇಲೆ ಒಂದೇ ಸೀರಿಯಲ್ ನಲ್ಲಿ ಅಭಿನಯಿಸಿದ್ರು‌.. ಈ ಸಂದರ್ಭದಲ್ಲಿ ಪ್ರಥಮ್ ಸಂಜನಾಗೆ ಅವಾಚ್ಯ ಶಬ್ದಗಳಿಂದ ಮಾತನಾಡಿದ್ರಂತೆ.. ಈ ವಿಚಾರವಾಗಿ ಭುವನ್ ಹಾಗೆ ಪ್ರಥಮ್ ನಡುವೆ ಜಗಳ ಏರ್ಪಟ್ಟಿದೆ.. ಈ ಸಂದರ್ಭದಲ್ಲಿ ಪ್ರಥಮ್ ಭುವನ್ ಕೈ ಕಚ್ಚಿದ್ರು.. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಒಬ್ಬರ ಮೇಲೊಬ್ಬರು ದೂರು ಪ್ರತಿದೂರು ದಾಖಲಿಸಿದ್ರು…

ಇದೇ ಪ್ರಕರಣದ ವಿಚಾರ ಸದ್ಯ ನ್ಯಾಯಲದಲ್ಲಿದ್ದು, ವಿಚಾರಣೆಗೆ ಹಾಜರಾಗುವಂತೆ ಭುವನ್ ಗೆ ಕೋರ್ಟ್ ಸಮನ್ಸ್ ನೀಡಿತ್ತು.. ಮೂರ್ನಾಲ್ಕು ಬಾರಿ ನೋಟೀಸ್ ನೀಡಿದರೂ ಭುವನ್ ರಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ ಭುವನ್ ಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿದೆ..

- Advertisement -spot_img

More articles

- Advertisement -spot_img

Latest article