ರಾಜಮೌಳಿ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಛತ್ರಪತಿ, ಮಗಧೀರ, ಈಗ, ಬಾಹುಬಲಿ, ಇದಾದ ನಂತರ ಬಾಹುಬಲಿ-2 ಚಿತ್ರವನ್ನು ನಿರ್ದೇಶಿಸುತ್ತಿರುವ ರಾಜಮೌಳಿ ಕೈ ಇಟ್ಟಿದೆಲ್ಲ ಚಿನ್ನವಾಗುತ್ತಿದೆ. ಛತ್ರಪತಿ ಚಿತ್ರವನ್ನು ಪ್ರಭಾಸ್ ಜೊತೆ ಮೊದಲ ಬಾರಿಗೆ ನಿರ್ದೇಶಿಸಿ ಬಾಕ್ಸ್ ಅಫೀಸ್ ಕೊಳ್ಳೆಹೊಡೆದ್ರು ಈ ಚಿತ್ರದ ನಂತರ ರಾಜಮೌಳಿ ಹಾಲಿವುಡ್ ಸಿನಿಮಾವನ್ನೇ ಹಿಂದಿಕ್ಕುವ ಮಟ್ಟಿಗೆ ಬೆಳೆದುನಿಂತ್ರು ಅನ್ನೋದು ಗೊತ್ತಿದೆ. ಬಾಹುಬಲಿ ಚಿತ್ರ ಬಿಡುಗಡೆಗೊಂಡಿದ್ದೆ ಇಡೀ ಜಗತ್ತಿಗೆ ಜಗತ್ತೆ ಟಾಲಿವುಡ್ನತ್ತ ತಿರುಗಿ ನೊಡುವಂತೆ ಮಾಡಿದ್ರು ಈ ರಾಜಮೌಳಿ. ಅಷ್ಟೆ ಅಲ್ಲ ಬಾಲಿವುಡ್, ಕಾಲಿವುಡ್ ಸ್ಟಾರ್‍ಗಳೆಲ್ಲಾ ನನಗೊಂದು ಅಫರ್ ಕೊಡಿ ಎನ್ನುವ ಮಟ್ಟಿಗೆ ಡಿಮ್ಯಾಂಡ್ ಬೆಳೆದಿತ್ತು.
ಛತ್ರಪತಿ ಚಿತ್ರದಿಂದ ರಾಜಮೌಳಿಯ ಅದೃಷ್ಟವೇ ಬದ್ಲಾಯ್ತು ಅಂಥ ಯಾಕೇಳ್ತಿದ್ದೇನೆ ಅಂದ್ರೆ ಪ್ರಭಾಸ್‍ಗೆ ಡೈರೆಕ್ಷನ್ ಮಾಡಿದ್ದ ಮೊದಲ ಮೂವಿ, ಫಸ್ಟ್ ಮೂವಿಯಲ್ಲಿಯೇ ರಾಜಮೌಳಿಗೆ ಹಿಟ್ ತಂದುಕೊಂಡ್ತು ಅದಾದ ನಂತರ ಮತ್ತೆ ಪ್ರಭಾಸ್ ಜೊತೆ ಕೈಗೊಡಿಸಿದ್ದು ಬಾಹುಬಲಿ ಚಿತ್ರಕ್ಕೆ ಈ ಚಿತ್ರವೂ ಸಿನಿರಸಿಕರನ್ನು ಹುಚ್ಚೆಬ್ಬಿಸುವಂತೆ ಮಾಡಿತು. ಬಿಗ್‍ಬಜೆಟ್‍ನಲ್ಲಿ ತಯಾರಾಗಿದ್ದ ಬಾಹುಬಲಿ ಚಿತ್ರ ಸಾಕಷ್ಟು ಹಣ ಮಾಡಿಕೊಡ್ತು ಇದರಿಂದಲೇ ಇವತ್ತು ರಾಜಮೌಳಿ ಸಾವಿರ ಕೋಟಿಯ ಚಿತ್ರ ನಿರ್ದೇಶಿಸುತ್ತೇನೆ ಎಂದ್ರು ರೆಡಿಯಾಗಿ ಕ್ಯೂನಲ್ಲಿ ನಿಂತಿರುತ್ತಾರೆ ಅಂದ್ರೆ ಒಬ್ಬ ಹಿರೋ ಎಷ್ಟು ಮುಖ್ಯವೋ ಒಬ್ಬ ನಿರ್ದೇಶಕ ಸಹ ಅಷ್ಟೇ ಮುಖ್ಯ ಎನ್ನುವುದನ್ನು ಸಿನಿ ಜಗತ್ತಿಗೆ ರಾಜಮೌಳಿ ತೊರಿಸಿಕೊಟ್ರು. ರಾಜಮೌಳಿ ಅಂಡ್ ಪ್ರಬಾಸ್ ಒಳ್ಳೆ ಸ್ನೇಹಿತರು ಅಂತಾನೆ ಹೆಳ್ಬಹುದು ಏಕೆಂದ್ರೆ ಪ್ರಭಾಸ್ ಬಾಹುಬಲಿ ಮುಗಿಯುವರೆಗೂ ಬೇರಾವ ಚಿತ್ರವನ್ನು ಒಪ್ಪಿಕೊಂಡಿಲ್ಲ.
ಬಾಹುಬಲಿ-2 ರಿಲೀಸ್ ನಂತ್ರ ರಾಜಮೌಳಿಯ ಬ್ರೈನ್‍ನಲ್ಲಿ ಮಹಾಭಾರತದ ಹಿಸ್ಟರಿಯ ಕಥೆ ಇದಿಯಂತೆ, ಈ ಕಥೆಯನ್ನು ಸಿನಿಮಾ ರೂಪಕ್ಕೆ ತಂದು ಜನರ ಮುಂದಿಡುವ ಪ್ರಯತ್ನವನ್ನು ಮಾಡಲು ಹೊರಟ್ಟಿದ್ದಾರಂತೆ ರಾಜಮೌಳಿ. ಮಹಾಭಾರತಕ್ಕೆ ಬೇಕಾಗುವ ಎಲ್ಲಾ ಕ್ಯಾರೆಕ್ಟರ್‍ಗಳು ತಮ್ಮ ಬತ್ತಳಿಕೆಯಲ್ಲಿ ರೆಡಿ ಇವೆ ಎನ್ನಲಾಗುತ್ತಿದೆ. ದಕ್ಷಿಣ ಭಾರತದ ಬಿಗ್ ಸ್ಟಾರ್‍ಗಳನ್ನು ಹಾಕಿಕೊಂಡು ಚಿತ್ರಮಾಡುವ ನಿರೀಕ್ಷೆಯಲ್ಲಿದ್ದಾರಂತೆ. ಪಾಂಡವರು, ಕೌರವರು ಯಾರಪ್ಪಾ ಅಂತ ಅನ್ನಿಸುತ್ತಿರಬೇಕು ಅಲ್ವಾ. ಪ್ರಭಾಸ್ ಇಲ್ಲದೆ ರಾಜಮೌಳಿ ಚಿತ್ರ ಮಾಡಲು ಸಾಧ್ಯವೇ ಇಲ್ಲ ಅನ್ನಿಸತ್ತೆ. ತಮ್ಮ ಬತ್ತಳಿಕೆಯಿಂದ ಪ್ರಭಾಸ್ ಎನ್ನುವ ಅಸ್ತ್ರ ಫಿಕ್ಸ್ ಆಗಿರುವುದಂತೂ 100% ಪಕ್ಕಾ. ಮೂಲಗಳ ಪ್ರಕಾರ ಪ್ರಭಾಸ್ ಅರ್ಜುನನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಕೃಷ್ಣನ ಪಾತ್ರಕ್ಕೆ ಬಾಲಿವುಡ್ ಸ್ಟಾರ್‍ಗಳಾದ ಶಾರುಖ್, ಅಕ್ಷಯ್, ಹೃತಿಕ್ ಹೆಸ್ರು ಕೇಳಿಬರುತ್ತಿದೆ.
ಇನ್ನು ಸ್ಯಾಂಡಲ್‍ವುಡ್‍ನಲ್ಲಿ ರಾಜಮೌಳಿಗೆ ಅಪ್ತ ಮತ್ತು ಬತ್ತಳಿಕೆಯನ್ನು ಸೇರುವ ನಿರೀಕ್ಷೆ ಇರುವ ನಟ ಅಂದ್ರೆ ಅದು ಸುದೀಪ್. ಈಗಾಗ್ಲೆಲೇ ಸುದೀಪ್ ಎರಡು ಚಿತ್ರಗಳಲ್ಲಿ ರಾಜಮೌಳಿಯ ಜೊತೆ ನಟಿಸಿದ್ದಾರೆ. ಮೊದಲು ನಟಿಸಿದ್ದ ಈಗ ಚಿತ್ರ ಬಾಕ್ಸ್ ಅಫೀಸ್ ಸುಲ್ತಾನ್ ಆಯ್ತು. ಆದಾದ ನಂತರ ಬಾಹುಬಲಿ ಚಿತ್ರದಲ್ಲಿ ಕಿರು ಪಾತ್ರವೊಂದರಲ್ಲಿ ನಟಿಸಿದ ಸುದೀಪ್ ರಾಜಮೌಳಿಗೆ ಇನ್ನು ಹತ್ತಿರವಾದ್ರ ಜೊತೆಗೆ ಭರವಸೆಯ್ನು ಹೆಚ್ಚಿಸಿಕೊಂಡು ರಾಜಮೌಳಿಯ ಬತ್ತಳಿಕೆಯನ್ನು ಸೇರಿದ್ರು ಎನ್ನಲಾಗುತ್ತಿದೆ. ಹೌದು ಸುದೀಪ್‍ಗೆ ಮೂಲಗಳ ಪ್ರಕಾರ ಕರ್ಣನ ಪಾತ್ರವನ್ನು ನೀಡಲಾಗುತ್ತಿದೆ ಎನ್ನುತ್ತಿದ್ದಾರೆ ಸಿನಿ ಪಂಡಿತರು. ಹಾಗೇನಾದ್ರು ಸಿನಿ ಪಂಡಿತರು ಊಹೆ ನಿಜವಾದ್ರೆ ಸುದೀಪ್ ಅಭಿಮಾನಿಗಳಿಗೆ ಹಬ್ಬ. ಕರ್ಣನ ಪಾತ್ರಕ್ಕೆ ಸುದೀಪ್ ಸಹ ಹೇಳಿ ಮಾಡಿಸಿದ ನಟ ಎನ್ನಲಾಗುತ್ತಿದೆಯಂತೆ. ಇನ್ನು ಕಾಲಿವುಡ್‍ನಲ್ಲಿ ಸ್ಟಾರ್ ನಟ ಸೂರ್ಯ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಮಹಾಭಾರತದ ರಾಜನಾಗಿ ರಾಜಮೌಳಿ ಬಿಗ್ ಸ್ಟಾರ್‍ಗಳನ್ನು ಜೊತೆಗೂಡಿಸಕೊಂಡು ಪಾಂಡವ, ಕೌರವರನ್ನು ಹೇಗೆ ಬಿಂಬಿಸುತ್ತಾರೆ ಎನ್ನುವದನ್ನು ನೋಡುವುದಕ್ಕೆ ಅಭಿಮಾನಿಗಳು ಕಾಯಲೇಬೇಕು.
- ಹಾಲೇಶ್ ಎಂ.ಎಸ್ ಹುಣಸನಹಳ್ಳಿ
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಸೋಷಿಯಲ್ ಮೀಡಿಯಾದಲ್ಲಿ ಕಿರಿಕ್ ಕೀರ್ತಿ ಬಗ್ಗೆ ಅಪಪ್ರಚಾರ
ಮೋದಿಗೆ ಧನ್ಯವಾದ ಹೇಳಿದ ಒಬಾಮಾ ಯಾಕೆ ಗೊತ್ತಾ.?
ಮೆಣಸಿನಕಾಯಿ ತಿಂದು ಬೀಗಿದ ಪ್ರಥಮ್.
ಮನಿ ಪ್ಲಾಂಟ್ ಮನೆಗೆ ಸೊಬಗೋ ಮನಿಯ ಸಂಕೇತವೋ???
ಈ ವಾರ ಮಂತ್ರಿಮಾಲ್‍ನಲ್ಲಿಲ್ಲ ವೀಕೆಂಡ್ ಮಸ್ತಿ. ಇನ್ನೆಷ್ಟು ದಿನ ಮಂತ್ರಿ ಮಾಲ್ ಬಂದ್..?
ವಿಕೃತ ಕಾಮುಕ: 14 ವರ್ಷದಲ್ಲಿ 700 ರೇಪ್..!
ಸನ್ನಿ ಜೊತೆ ಸೆಲ್ಫಿ ಬೇಕಾ..? ಹಾಗಾದ್ರೆ ನೀವ್ ಮಾಡ್ಬೇಕಾದದ್ದು ಇಷ್ಟೆ..!