No menu items!
10.4 C
Munich
Thursday, May 7, 2026

ಹುಟ್ಟುಹಬ್ಬದ ದಿನ ಕಣ್ಣೀರಿಟ್ಟ ದುನಿಯಾ ವಿಜಯ್

Must read

ಸ್ಯಾಂಡಲ್‍ವುಡ್‍ನ ರಿಯಲ್ ಸ್ಟಂಟ್ ಹೀರೋ ಖ್ಯಾತಿಯ ದುನಿಯಾ ವಿಜಯ್‍ಗೆ ಇಂದು 43ನೇ ಹುಟ್ಟುಹಬ್ಬದ ಸಂಭ್ರಮ. ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ಸ್ವಗೃಹದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ತಮ್ಮ ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ ವಿಜಯ್. ಇದೇ ವೇಳೆ ಮಾಸ್ತಿಗುಡಿ ಚಿತ್ರದ ಟ್ರೇಲರ್ ಕೂಡ ಬಿಡುಗಡೆ ಮಾಡಲಾಗಿದ್ದು ಈ ವೇಳೆ ವಿಜಯ್ ದುಃಖದಿಂದ ಮಾತನಾಡಿದ್ದಾರೆ. ಮಾಸ್ತಿಗುಡಿ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ತಮ್ಮ ಇಬ್ಬರು ಆಪ್ತರಾದ ಅನೀಲ್ ಮತ್ತು ಉದಯ್‍ರನ್ನು ಈ ವೇಳೆ ಸ್ಮರಿಸುತ್ತಾ ಅವರನ್ನು ನೆನೆದು ಕಣ್ಣೀರಿಟಿದ್ದಾರೆ. ಅಷ್ಟೆ ಅಲ್ಲದೆ ನೆನ್ನೆ ರಾತ್ರಿಯೇ ಸ್ಮಶಾನಕ್ಕೆ ತೆರಳಿದ್ದ ವಿಜಯ್ ತನ್ನ ಸ್ನೇಹಿತರ ಸಮಾಧಿಗೆ ನಮನ ಸಲ್ಲಿಸಿದ ವಿಜಯ್ ಅವರ ನೆನಪಿನಲ್ಲಿಯೆ ಇಂದು ನನ್ನ ಹುಟ್ಟು ಹಬ್ಬ ಆಚರಿಸುತ್ತಿದ್ದೇನೆ ಎಂದು ಕಣ್ಣೀರಿಟ್ಟಿದ್ದಾರೆ. ನನ್ನ ಆಪ್ತ ಸ್ನೇಹಿತರು ಈಗ ಇಲ್ಲ ಆದರೆ ಅವರ ಕುಟುಂಬಕ್ಕೆ ನಾನು ಆಧಾರವಾಗಿರುತ್ತೇನೆ ಎನ್ನುತ್ತಿದ್ದಂತೆಯೆ ವಿಜಯ್ ಬಿಕ್ಕಳಿಸಿ ಅತ್ತಿದ್ದಾರೆ. ಇನ್ನು ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಲ್ಲದೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಶುಭ ಕೋರಿದ್ದಾರೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ರಾಜಮೌಳಿಯ ಮಹಾಭಾರತದಲ್ಲಿ ಸುದೀಪ್ ಕರ್ಣ?

ಸೋಷಿಯಲ್ ಮೀಡಿಯಾದಲ್ಲಿ ಕಿರಿಕ್ ಕೀರ್ತಿ ಬಗ್ಗೆ ಅಪಪ್ರಚಾರ

ಮೋದಿಗೆ ಧನ್ಯವಾದ ಹೇಳಿದ ಒಬಾಮಾ ಯಾಕೆ ಗೊತ್ತಾ.?

ಮೆಣಸಿನಕಾಯಿ ತಿಂದು ಬೀಗಿದ ಪ್ರಥಮ್.

ಮನಿ ಪ್ಲಾಂಟ್ ಮನೆಗೆ ಸೊಬಗೋ ಮನಿಯ ಸಂಕೇತವೋ???

ಈ ವಾರ ಮಂತ್ರಿಮಾಲ್‍ನಲ್ಲಿಲ್ಲ ವೀಕೆಂಡ್ ಮಸ್ತಿ. ಇನ್ನೆಷ್ಟು ದಿನ ಮಂತ್ರಿ ಮಾಲ್ ಬಂದ್..?

ವಿಕೃತ ಕಾಮುಕ: 14 ವರ್ಷದಲ್ಲಿ 700 ರೇಪ್..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article